ಎಲಬುರ್ಗ

ಬಾವಿಗೆ ಬಿದ್ದ ಸಾಕು ನಾಯಿ ರಕ್ಷಣೆ**

ಬಾವಿಗೆ ಬಿದ್ದ ಸಾಕು ನಾಯಿ ರಕ್ಷಣೆ**
Bāvige bidda sāku nāyi rakṣaṇe**

ಬಾವಿಗೆ ಬಿದ್ದ ಸಾಕು ನಾಯಿ ರಕ್ಷಣೆ**  

 ಯಲಬುರ್ಗಾ 12:  ಆಯತಪ್ಪಿ ಪಾಳುಬಾವಿಗೆ ಬಿದ್ದಿದ್ದ ಸಾಕು ನಾಯಿಯನ್ನು ಯಲಬುರ್ಗಾ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡೂವರೆ ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.  

ತಾಲೂಕಿನ ಕರಮುಡಿ ಗ್ರಾಮದ ಪಾಳುಬಾವಿಯಲ್ಲಿ ನಾಯಿ ಬಿದ್ದಿರುವ ಕುರಿತು ಸಿದ್ದಪ್ಪ ಗೊಗೇರಿ ಅವರು ಯಲಬುರ್ಗಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.  

ರಕ್ಷಣಾ ಉಪಕರಣಗಳ ನೆರವಿನಿಂದ ಬಾವಿಗಿಳಿದ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ, ಯಾವುದೇ ಅಪಾಯವಾಗದಂತೆ ನಾಯಿಯನ್ನು ಜೀವಂತವಾಗಿ ಹೊರತೆಗೆದು ಅದರ ಮಾಲೀಕರಿಗೆ ಹಸ್ತಾಂತರಿಸಿದರು.  

ಂಈಖಓ ಕೆ. ಚಕ್ರಸಾಳಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಪಾಲ್ಗೊಂಡಿದ್ದರು. ಸಮಯಪ್ರಜ್ಞೆಯಿಂದ ಕಾರ್ಯಾಚರಣೆ ನಡೆಸಿ ಮೂಕಪ್ರಾಣಿಯ ಜೀವ ಉಳಿಸಿದ ಸಿಬ್ಬಂದಿಯ ಕಾರ್ಯಕ್ಕೆ ಕರಮುಡಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ