ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆ:ಸೈಕಲ್ ಜಾಥಾ
ತಾಳಿಕೋಟೆ14: ಪಟ್ಟಣದ ವೀ.ವಿ.ಸಂಘದ ಎಸ್. ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ವಾಯ್.ಆರ್.ಸಿ ಹಾಗೂ ಕ್ರೀಡಾ ವಿಭಾಗಗಳ ಅಡಿಯಲ್ಲಿ ನಡೆದ ಸೈಕಲ್ ಜಾಥಾಕ್ಕೆ ಪ್ರಾಚಾರ್ಯ ಪ್ರೋ.ಆರ್.ವಿ.ಜಾಲವಾದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅ. 15, 2021ಕ್ಕೆ ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ತುಂಬುವ ಹಿನ್ನಲೆಯಲ್ಲಿ ದೇಶದ್ಯಾಂತ “ಆಜಾದಿ ಕಾ ಅಮೃತ ಮಹೋತ್ಸವ”ವನ್ನು ಆಚರಿಸಲಾಗುತ್ತಿದೆ. ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೆ ಬಲಿದಾನ ನೀಡಿದ ಮಹಾನ ನಾಯಕರನ್ನು ಸ್ಮರಿಸುವಂತಹ ಕ್ಷಣ. ಜೊತೆಗೆ ಭಾರತದ ತುಂಬಾ ಜಾಗೃತಿ ಅಭಿಯಾನ ಮೂಡಿಸುವುದು ಯುವಕರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಡಾ.ಡಿ.ಬಿ.ಮೂಗಡ್ಲಿಮಠ, ಎನ್.ಸಿ.ಸಿ. ಅಧಿಕಾರಿ ಪ್ರೊ.ಆರ್.ವಿ.ಮಿಸ್ಕಿನ, ಎನ್.ಎಸ್.ಎಸ್ ಘಟಕ-1ರ ಕಾರ್ಯಕ್ರಮಾಧಿಕಾರಿ ಪ್ರೊ. ರಮೇಶ ಜಾಧವ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.