ಜಾನಪದ ವಿವಿಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ: ಪ್ರಬಂಧ, ಭಾಷಣ ಸ್ಪರ್ಧೆ
ಲೋಕದರ್ಶನ ವರದಿ
ಶಿಗ್ಗಾವಿ 13: ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳ ಸಂಭ್ರಮವನ್ನು ಐತಿಹಾಸಿಕ ಸ್ವರೂಪ, ವೈಭವ ಮತ್ತು ಮಹತ್ವಕ್ಕೆ ತಕ್ಕಂತೆ ಭವ್ಯತೆ ಮತ್ತು ಉತ್ಸಾಹದಿಂದ ಆಚರಿಸುವ ಉದ್ದೇಶದಿಂದ ಸರಕಾರವು ಶಾಲಾ- ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸೂಚಿಸಿರುವಂತೆ ಜನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಕುರಿತಾಗಿ ವಿಶೇಷ ಕಾರ್ಯಚಟುವಟಿಕೆಗಳನ್ನು ಕೈಗೊಂಡರು.
ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಲ್ಲಿ ಭಾವನೆಗಳನ್ನು ಮೂಡಿಸುವ ನಿಟ್ಟಿನಲ್ಲಿ ಕುಲಪತಿ ಪ್ರೊ.ಟಿ.ಎಮ್.ಭಾಸ್ಕರ್, ಕುಲಸಚಿವ ಪ್ರೊ.ಸಿ.ಟಿ.ಗುರುಪ್ರಸಾದ, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಮ್.ಸಾಲಿ ಮಾರ್ಗದರ್ಶನದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆ.08ರಿಂದ 15ರವರೆಗೆ ಹಮ್ಮಿಕೊಂಡು ಬರುತ್ತಿದ್ದಾರೆ.
ಜನಪದ ಸಾಹಿತ್ಯದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಕವಿಗಳ ಪ್ರಭಾವ ಎಂಬ ವಿಷಯಗಳ ಮೇಲೆ ಭಾಷಣ ಸ್ಪರ್ಧೆಗಳನ್ನು ಏರಿ್ಡಸಿದ್ದರು. ವಿದ್ಯಾರ್ಥಿಗಳು ಭಾಗವಹಿಸಿ ನಮ್ಮ ಜನಪದ ಕವಿಗಳು ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ, ಒನಕೆ ಓಬವ್ವ, ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಮೈಲಾರ ಮಹದೇವ, ಸಂಗೂರು ಕರಿಯಪ್ಪ ಮುಂತಾದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಬದುಕಿನ ಚಿತ್ರಣವನ್ನು ಜನಪದ ಕವಿಗಳು ಕಂಡು ಹಾಡಿರುವುದನ್ನು ಉದಾಹರಿಸಿ ವಿದ್ಯಾರ್ಥಿಗಳು ಉತ್ತಮ ಪ್ರಬಂಧಗಳನ್ನು ರಚಿಸಿದರು. ಅಲ್ಲದೆ ಜನಪದ ಕವಿಗಳು ಅಂತಹ ವೀರರ ಬದುಕು ಕುರಿತು ಪದ್ಯಗಳನ್ನು ರಚಿಸಿ ಹಾಡಿರುವುದನ್ನು ಉದಾಹರಿಸಿ ಮಾತನಾಡಿದರು.
ಈ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ಸಂಚಾಲಕ ವಿವಿ ಯ ಕನ್ನಡ ಮತ್ತು ಜಾನಪದ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಎಚ್.ನದಾಫ ಹಾಗೂ ಡಾ. ರಾಜಶೇಖರ ಸಿ.ಡಿ ಅಚ್ಚುಕಟ್ಟಾಗಿ ನಿರ್ವಹಿಸಿದರು.
ತೀರ್ುಗಾರರಾಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಾದ ಡಾ.ಎಚ್.ಮಂಜು, ಡಾ.ಎಂ.ಎಂ.ಬಾರ್ಕಿ. ಡಾ.ಎಸ್.ನಾಗರಾಜ, ಡಾ.ಅರುಣ ಜೋಳದ ಕೂಡ್ಲಿಗಿ ಹಾಗೂ ಅಜಾದಿ ಕಾ ಅಮೃತ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನಾಧಿಕಾರಿ ಡಾ.ವಿಜಯಲಕ್ಷ್ಮಿ ಗೇಟಿ ಉಪಸ್ಥಿತರಿದ್ದರು.