ಯರಗಟ್ಟಿ

ನಾಳೆ ಕಟಕೋಳದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪಣೆ

ನಾಳೆ ಕಟಕೋಳದಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿ ಪ್ರತಿಷ್ಠಾಪಣೆ

ಯರಗಟ್ಟಿ 26: ಸಮೀಪದ ಕಟಕೋಳ ಗ್ರಾಮದ ಡೊಂಬರ ಓಣಿಯಲ್ಲಿ ಅಯ್ಯಪ್ಪಸ್ವಾಮಿ  ನೂತನ ಮೂರ್ತಿ ಪ್ರಾಣಪ್ರತಿಷ್ಠಾಪಣೆ ಸಮಾರಂಭ ಆ. 28 ರಂದು ಮುಂಜಾನೆ 10 ಗಂಟೆಗೆ ಜರುಗಲಿದೆ.  

ಸಮಾರಂಭದ ಸಾನಿಧ್ಯವನ್ನು ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಡಾ. ಈಶ್ವರಾನಂದ ಸ್ವಾಮೀಜಿ ವಹಿಸುವರು. ಶಾಸಕರು, ಮುಖ್ಯ ಸಚೇತಕ ಅಶೋಕ ಪಟ್ಟಣ  ಉದ್ಘಾಟಿಸುವರು.ರುದ್ರಮುನಿ ಸ್ವಾಮೀಜಿ ಉಪನ್ಯಾಸ ನೀಡುವರು. ಲಕ್ಷ್ಮಣ ಪಾಟೀಲ ಅಧ್ಯಕ್ಷತೆ ವಹಿಸುವರು. ಮುದ್ದುಸಂಗ ಸ್ವಾಮೀಜಿ, ರವೀಂದ್ರ ಕಲಬುರ್ಗಿ, ಪಾರ್ವತಿ ಪಾಟೋಳಿ, ಶೋಭಾ ಬಂಡ್ರೋಳ್ಳಿ, ಎಸ್‌.ಎ.ಶೆಟ್ಟಿಸದಾವರ್ತಿ, ಲಿಂಗರಾಜ ದೇಸಾಯಿ, ಎಸ್‌.ಎಸ್‌.ಢವಣ, ಬಿ.ಎ.ದೇಸಾಯಿ ಎಂ.ಎಂ.ಆತಾರ, ಎನ್‌.ಬಿ.ದಂಡಿನದುರ್ಗಿ ಸೇರಿದಂತೆ ಇತರರು ಪಾಲ್ಗೊಳ್ಳುವರು. ಪ್ರತಿಭಾ ಪುರಸ್ಕಾರ ಹಾಗೂ ಸಂಜೆ 6 ಗಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಆ. 27 ರಂದು ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಲಿದೆ 


ಸುದ್ದಿ ಓದಿ