ಶಿಗ್ಗಾವ್

ಅವಘಡ ತಗ್ಗಿಸುವ ಪ್ರಮುಖ ಸಾಧನೆಗಳ ಜಾಗೃತಿ

ಅವಘಡ  ತಗ್ಗಿಸುವ ಪ್ರಮುಖ ಸಾಧನೆಗಳ ಜಾಗೃತಿ

ಶಿಗ್ಗಾವಿ 24: ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ ಅಂಗವಾಗಿ ಶಿಗ್ಗಾವಿ ಅಗ್ನಿಶಾಮಕ ಠಾಣೆಯ ವತಿಯಿಂದ ಪಟ್ಟಣದ ಸಂತೆ ಮೈದಾನದಲ್ಲಿ ಗ್ರಹ ರಕ್ಷಕ ದಳದವರಿಗೆ 2021 ನೇ ಸಾಲಿನ ಅಗ್ನಿಶಾಮಕ ಸೇವಾ ಸಪ್ತಾಹದ ಕುರಿತಾಗಿ ಇರುವ ಘೋಷವಾಕ್ಯ, ಅಗ್ನಿ ಸುರಕ್ಷತಾ ಉಪಕರಣಗಳ ನಿರ್ವಹಣೆ, ಅಗ್ನಿ ಅವಘಡಗಳನ್ನು ತಗ್ಗಿಸುವ ಪ್ರಮುಖ ಸಾಧನೆಗಳ  ಬಗ್ಗೆ  ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.  

ಶಿಗ್ಗಾವಿ ಅಗ್ನಿಶಾಮಕ ಠಾಣಾಧಿಕಾರಿ ಸಂತೋಷ ಎಚ್ ಬಿ ಜಾಗೃತಿ ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು ಮತ್ತು ಶಿಗ್ಗಾವಿಯ ಜನೆತೆ ಅಗ್ನಿ ಅವಗಡಗಳು ಸಂಭವಿಸಿದಾಗ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ತಿಳಿಸಿಕೊಟ್ಟು ಅಗ್ನಿ ಅವಗಡಗಳು ಸಂಭವಿಸಿದಾಗ ಶಿಗ್ಗಾವಿ ಅಗ್ನಿ ಶಾಮಕ ಠಾಣೆಯ 08378-255101 ನಂಬರಿಗೆ ಕರೆ ಮಾಡಲು ತಿಳಿಸಿದರು. 

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಗಣೇಶ ಗೌಡರ, ದಾನಪ್ಪ ಮಡಿವಾಳರ, ಬಾಹುಬಲಿ ಬಾಲಣ್ಣವರ, ಶಿದ್ದಲಿಂಗಪ್ಪ ಆಜೂರ, ರೇವಶಿದ್ದಪ್ಪ ಅಂಗಡಿ, ಶಿಗ್ಗಾವಿ ಗ್ರಹ ರಕ್ಷಕ ದಳದ ಘಟಕಾಧಿಕಾರಿ ಎಮ್ ಎಮ್ ಮತ್ತೂರ, ಪ್ಲೋಟಿನ್ ಎಮ್ ಎಸ್ ಕಂಕನವಾಡ, ಗ್ರಹ  ರಕ್ಷಕರಾದ ಎಚ್ ಆರ್ ವಡ್ಡರ, ಎನ್ ವೈ ಮಾನೆ, ಬಿ ಎಸ್ ವನಹಳ್ಳಿ, ಸೇರಿದಂತೆ ಸಿಬ್ಬಂದಿಗಳು ಇದ್ದರು. 


ಸುದ್ದಿ ಓದಿ