ಇಂಡಿ

ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಜಾಥಾ

ತಂಬಾಕು ಸೇವನೆ ದುಷ್ಪರಿಣಾಮ ಕುರಿತು ಜಾಗೃತಿ ಜಾಥಾ

ಇಂಡಿ: ತಾಲೂಕದ್ಯಂತ ಎಲ್ಲಾ ಶಾಲಾ-ಕಾಲೇಜು, ಗ್ರಾಮ ಪಂಚಾಯತ್ ಆವರಣಗಳನ್ನು ತಂಬಾಕು ಮುಕ್ತ ಮಾಡಲು ಸಂಕಲ್ಪ ಮಾಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾದಿಕಾರಿ ವಸಂತ ರಾಠೋಡ ಹೇಳಿದರು. 

ಅವರು ಸೋಮವಾರ ತಾಲೂಕಿನ ಲಚ್ಯಾಣ, ಪಡನೂರ, ಮಾವಿನಹಳ್ಳಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ ತಂಬಾಕು ಮತ್ತು ತಂಬಾಕಿನ ಉಪ ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್‌ದಂತ ಮಾರಕ ಕಾಯಿಲೆಗಳು ಹೆಚ್ಚುತ್ತಿವೆ. ಕುಟುಂಬಗಳ ಮುಖ್ಯಸ್ಥರೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವಲಂಬಿತ ಬದುಕುದಯನಿವಾಗಲಿದೆ. ನಮ್ಮ ತಾಲೂಕಿನಲ್ಲಿ ಸುಮಾರು 100 ಶಾಲೆಗಳು ತಂಬಾಕು ಮುಕ್ತ ಶಾಲೆಗಳನ್ನಾಗಿ ಮಾಡಲು ಎಲ್ಲಾ ಸಾರ್ವಜನಿಕರು ಸಹಕರಿಸಬೇಕು ಎಂದರು. 

ತಾಲೂಕಾ ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಉಂಟು ಮಾಡುವುದಲ್ಲದೆ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬೀಡಿ, ಸಿಗರೇಟು ಹಾಗೂ ಹೊಗೆ ಸೊಪ್ಪು ಸೇವಿಸುವುದು ತುಂಬ ಅಪಾಯಕಾರಿ. ತಂಬಾಕು ಸೇವನೆಯಿಂದ ನಾನಾ ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಂಡು ಮುಂದೆಯುಂದು ದಿನ ಸಾವಿಗೆ ಕಾರಣವಾಗಲಿದೆ ಎಂದರು. 

ಆರ್‌.ಸಿ. ಮೇತ್ರಿ ಮಾತನಾಡಿ, ತಾಲೂಕಿನದ್ಯಂತ ತಂಬಾಕು ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು. 

ತಂಬಾಕು ಕುರಿತು ಜಾಗೃತಿ ಜಾಥಾದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.  


ಸುದ್ದಿ ಓದಿ