ಏಡ್ಸ್ ಕುರಿತು ಜಾಗೃತಿ ಆಂದೋಲನ ಕಾರ್ಯಕ್ರಮ
ರಾಣಿಬೆನ್ನೂರ 21: ಹೆಚ್ಐವ್ಹಿ ಎಂದರೆ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು ಈ ವೈರಾಣು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗುತ್ತದೆ. ಹೀಗೆ ಹಲವು ರೋಗಗಳಿಗೆ ಒಳಗಾಗುವ ಸ್ಥಿತಿಯನ್ನು ಎಡ್ಸ್ ಎನ್ನುತ್ತಾರೆ ಎಂದು ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ ಹೇಳಿದರು.
ಶುಕ್ರವಾರ ನಗರದ ಸಮುದಾಯ ಆರೋಗ್ಯ ಹಾಗೂ ಕುಟುಂಬ ಯೋಜನಾಕೇಂದ್ರದಲ್ಲಿ ಹೆಚ್.ಐ.ವ್ಹಿ ಅಥವಾ ಎಡ್ಸ್ ಕುರಿತಾದ ಮನೆ ಮನೆ ಜಾಗೃತಿ ಆಂದೋಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಂದೋಲನದ ಉದ್ದೇಶ ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಬೇಟಿ ನೀಡಿ ಹೆಚ್.ಐ.ವ್ಹಿ /ಎಡ್ಸ್ ಖಾಯಿಲೆ ಕುರಿತು ಮಾಹಿತಿ ನೀಡುವ ಮೂಲಕ ಸಾರ್ವಜನಿಕರಿಗೆ ಖಾಯಿಲೆಯ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಇದೋಂದು ಉತ್ತಮ ಕಾರ್ಯಕ್ರಮವಾಗಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಎಡ್ಸ್ ನಿಯಂತ್ರಣ ಅಧಿಕಾರಿ ಡಾ| ನೀಲೆಶ್ ಎಂ.ಎನ್. ಮಾತನಾಡಿ, ಸದರಿ ಕಾರ್ಯಕ್ರಮವು ತಾಲೂಕಿನಲ್ಲಿ ಮಾ. 19 ರಿಂದ 20 ರವರೆಗೆ ಜರುಗಲಿದೆ. ಪ್ರತಿ ಮನೆಗೆ ಆಶಾ ಕಾರ್ಯಕರ್ತೆಯರು ಬೇಟಿ ನೀಡಿ ಖಾಯಿಲೆಯ ಕುರಿತು ಮಾಹಿತಿ ನೀಡಲಿದ್ದಾರೆ. ಹೆಚ್.ಐ.ವ್ಹಿ ಪರೀಕ್ಷೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುವುದು ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾಣಿ 1097 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಗೀತಾ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಹಶೀಲ್ದಾರ ಜಿ.ಎಸ್. ಶಂಕರ, ತಾಲೂಕ ಆರೋಗ್ಯಾಧಿಕಾರಿ ಡಾ| ಕಾಂತೇಶ ಭಜಂತ್ರಿ, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಆರ್.ಸಿ. ಪರಮೇಶ್ವರಪ್ಪ, ಡಾ| ಸಂತೋಷಕುಮಾರ, ನಾಗರಾಜ ಕುಡಪಲಿ, ಮೇಲ್ವಿಚಾರಕ ಮಾರುತಿ ಭಜಂತ್ರಿ, ರಾಮನಗೌಡ ರಾಮನಗೌಡ್ರ, ಹರೀಶ್, ಜಗದೀಶ ಪಾಟೀಲ, ಗಿರೀಶ ಮೂರನಾಳ, ಶ್ರೀಧರ ಅಗಸಿಬಾಗಿಲ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಜಾಲಿಕಟ್ಟಿ ಜಿಲ್ಲಾ ಬಾಗಲಕೋಟೆಯ ಕೃಷ್ಣ ಪಾರಿಜಾತ ಜಾನಪದ ಕಲಾ ತಂಡ ಇವರು ಪಾರಿಜಾತ ಕಲೆಯ ಮೂಖಾಂತರ ಹೆಚ್.ಐ.ವ್ಹಿ/ಎಡ್ಸ್ ಕುರಿತು ಜಾಗೃತಿ ಮೂಡಿಸಿದರು.