ಶಿಗ್ಗಾವ್

ಹುಲಸೋಗಿ ಅಂಬುಜಾ ಕಾರ್ಖಾನೆಯ ಉತ್ತಮ ನಿರ್ವಹಣೆಗೆ: ಸಂದ ಪ್ರಶಸ್ತಿ

ಹುಲಸೋಗಿ ಅಂಬುಜಾ ಕಾರ್ಖಾನೆಯ ಉತ್ತಮ ನಿರ್ವಹಣೆಗೆ: ಸಂದ ಪ್ರಶಸ್ತಿ


ಲೋಕದರ್ಶನ ವರದಿ 

ಶಿಗ್ಗಾವಿ 01: ವಿಶ್ವ ಏಡ್ಸ ದಿನಾಚರಣೆ ಪ್ರಯುಕ್ತ ಹಾವೇರಿಯ ಆರೋಗ್ಯ ಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ಅಂಬುಜಾ ಕಾರ್ಖಾನೆಯು ಉತ್ತಮ ನಿರ್ವಹಣೆ ಮಾಡಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ಕಾರ್ಮಿಕರಿಗೆ ಕೊರೋನಾ ಬರದ ಹಾಗೆ ಮುಂಜಾಗ್ರತೆವಹಿಸಿದ ಹಾಗೂ ತಾಲೂಕಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಅಂಬುಜಾ ಎಕ್ಸಪೋರ್ಟ ಪ್ರವೇಟ್ ಲಿಮೆಟೆಡ್ ಪರವಾಗಿ ಹೆಚ್‌.ಆರ್ ಮೇಲ್ವಿಚಾರಕ ಸುರೇಶ ಕೊರವರ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರಿಗೆ ಹಾವೇರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ,  ಜಿಲ್ಲಾ ಏಡ್ಸ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. 

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯದೀಶರು ಹಾಗೂ ಸದಸ್ಯ ಕಾರ್ಯದರ್ಶಿ ಪುಟ್ಟರಾಜು, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಜಿ.ಆ.ಕು.ಕ.ಅಧಿಕಾರಿ ಡಾ.ರಾಘವೇಂದ್ರಸ್ವಾಮಿ ಹೆಚ್‌.ಎಸ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌.ಹಾವನೂರ, ಜಿಲ್ಲಾ ಏಡ್ಸ ನಿಯಂತ್ರಣಾಧಿಕಾರಿ ಡಾ. ನಿಲೇಶ.ಎಂ.ಎನ್, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ.ಜಗದೀಶ ಪಾಟೀಲ, ತಾಲೂಕ ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಸಿ.ಬಿ.ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಶಶೀಧರ ಯಲಿಗಾರ, ಎ.ಆರ್‌.ಟಿ ವೈದ್ಯಾಧಿಕಾರಿ ಡಾ.ಜಯಲಕ್ಷ್ಮೀ, ಜಿಲ್ಲಾ ಮೇಲ್ವಿಚಾರಕ ಸತೀಶ ಹೊಸಮನಿ, ಲೈಂಗಿಕ ಅಲ್ಪ ಸಂಖ್ಯಾತ ಒಕ್ಕೂಟ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ.ಕೆ.ಸಿ, ಚೈತನ್ಯ ಸಂಸ್ಥೆ ಅಧ್ಯಕ್ಷ ಮಜೀದ, ರಕ್ಷಿತಾ ಸಂಸ್ಥೆ ಸಂಯೋಜಕ ಮಂಜುನಾಥ, ಸ್ಪಂದನಾ ಸಂಸ್ಥೆ ಕಾರ್ಯದರ್ಶಿ ಮಂಜುಳಾ, ವೀರಾಜ ಸುಣಗಾರ, ಮಂಜುನಾಥ ನೆರ್ತಿ, ಮಂಜುನಾಥ ಬಂಡಿವಡ್ಡರ, ವಿಜಯಲಕ್ಷ್ಮೀ, ಸ್ನೇಹ ಸದನ ಸಂಸ್ಥೆ ಮುಖ್ಯಸ್ಥರು, ಎನ್‌.ಎಸ್‌.ಎಸ್, ಎನ್‌.ಸಿ.ಸಿ, ರೆಡ್ ರಿಬ್ಬನ ಕ್ಲಬ್ ವಿಧ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ