ತಾಳಿಕೋಟಿ

ಪದಗ್ರಹಣ ಸಮಾರಂಭ ಪೂರ್ವಭಾವಿ ಸಭೆ

ಪದಗ್ರಹಣ ಸಮಾರಂಭ ಪೂರ್ವಭಾವಿ ಸಭೆ

ತಾಳಿಕೋಟೆ04: ಪಟ್ಟಣದ ಎಂ.ಜಿ.ಎಂ.ಕೆ ಪ್ರೌಢಶಾಲೆಯಲ್ಲಿ ಭಾನುವಾರ ಬಣಜಿಗ ಪಂಚಮಸಾಲಿ(ಬಿಪಿಎಲ್) ಸಮಾಜದ ನೌಕರ ಸಂಘದ ಪದಗ್ರಹಣ ಸಮಾವೇಶದ ಪೂರ್ವಭಾವಿ ಸಭೆ ಜರುಗಿತು. 

ಅಧ್ಯಕ್ಷತೆ ವಹಿಸಿದ್ದ ನೌಕರರ ಸಂಘದ ಗೌರವಾಧ್ಯಕ್ಷ ಡಾ.ಶ್ರೀಶೈಲ ಹುಕ್ಕೇರಿ ಮಾತನಾಡಿದರು. 

ಲಿಂಗಾಯತ ಸಮಾಜದ ಎರಡು ಪ್ರಬಲ ಜಾತಿಯವರು ನಮ್ಮೆಲ್ಲರ ಒಳಿತಿಗಾಗಿ ಒಗ್ಗಟ್ಟಾಗಬೇಕು ಎಂದರು.   

ಸಾಹಿತಿ ಅಶೋಕ ಹಂಚಲಿ, ಡಾ.ಜಿ.ಎಂ.ಘಿವಾರಿ, ಬಿ.ಜಿ.ಚನ್ನಗೊಂಡ, ಮುರಿಗೆಪ್ಪ ಸರಶೆಟ್ಟಿ, ಕುಮಾರಗೌಡ ಪಾಟೀಲ, ಉಮಾ ಸಾಲಂಕಿ, ಮಲ್ಲಿಕಾರ್ಜುನ ಹಿಪ್ಪರಗಿ ಮಾತನಾಡುತ್ತಾ ನಮ್ಮಗಳಲ್ಲಿರುವ ತಪ್ಪು ಕಲ್ಪನೆಗಳನ್ನು ಹೊರಹಾಕಿ ಒಂದಾಗುವರಿಂದ ನಮ್ಮ ಶಕ್ತಿ ಹೆಚ್ಚುತ್ತದೆ. ನಮ್ಮಗಳಲ್ಲಿ ಪೂರ್ವದಿಂದಲೂ ವೈವಾಹಿಕ ಸಂಬಂಧಗಳು ನಡೆದಿದ್ದರೂ ಪರಸ್ಪರ ಬೇರೆಬೇರೆ ಎಂದು ದೂರ ಮಾಡಿಕೊಳ್ಳುತ್ತಿರುವುದರ ಹಿಂದಿನ ಉದ್ದೇಶ ಅರ್ಥವಾಗುತ್ತಿಲ್ಲ. ಇನ್ನಾದರೂ ಜೊತೆಯಾಗಿ ಒಂದೇ ಎಂದು ಸಾರುವುದಕ್ಕೆ ಈ ಪದಗ್ರಹಣ ಸಮಾರಂಭ ಸಾಕ್ಷಿಯಾಗಲಿ ಎಂದರು. 

ಆ.22ಕ್ಕೆ  ಪದಗ್ರಹಣ ಸಭೆ ನಡೆಸಲು ತೀರ್ಮಾನಿಸಲಾಯಿತು. ಅತಿಥಿಗಳಾಗಿ  ವಿಧಾನಪರಿಷತ್ತಿನ ಸದಸ್ಯರುಗಳಾದ ಹನುಮಂತ ನಿರಾಣಿ ಹಾಗೂ ಅರುಣ ಶಹಾಪುರ ಇತರ ಪ್ರಮುಖರನ್ನು ಆಹ್ವಾನಿಸುವ ಬಗ್ಗೆ ಅಂತಿಮಗೊಳಿಸಲಾಯಿತು. 

ವೇದಿಕೆಯಲ್ಲಿದ್ದ ಎರಡೂ ಸಮಾಜದ ಪ್ರಮುಖರಾದ ಎಸ್‌.ಎಂ.ಕಾರಜೋಳ, ಕಾಶಿನಾಥ ಮುರಾಳ, ಜಿ.ಎಸ್,ಕಶೆಟ್ಟಿ, ಪ್ರಾಚಾರ್ಯ ಆರ್‌.ವಿ.ಜಾಲವಾದಿ, ಅಶೋಕ ಬಳಗಾನೂರ, ಈರಣ್ಣ ಕಲಬುರ್ಗಿ, ಶರಣಗೌಡ ಪಾಟೀಲ, ದುಂಡಪ್ಪಗೌಡ ಪಾಟೀಲ ಇದ್ದರು. 

ಪ್ರೊ.ಅಶ್ವಿನಿ ಜೋಗೂರ ಪ್ರಾರ್ಥಿಸಿದರು. ರಮೇಶ ಹಿಪ್ಪರಗಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಸಂಗಮೇಶ ಪಾಲ್ಕಿ ಮಾತನಾಡಿದರು. ಎ.ಎಸ್‌.ಇಟಗಿ ನಿರೂಪಿಸಿದರು. ನೀಲಮ್ಮ ಮೈಲೇಶ್ವರ ವಂದಿಸಿದರು. 

ಸುದ್ದಿ ಓದಿ