ಪತ್ರಿಕೆಗಳಲ್ಲಿ ವರದಿಯಾದರೂ ಕ್ಯಾರೇಯನ್ನದ ಅಧಿಕಾರಿಗಳು
ಹದೆಗೆಟ್ಟ ರಸ್ತೆ ಸುಧಾರಣೆಗೆ ಸಾರ್ವಜನಿಕರಿಂದ ಒತ್ತಾಯ
ಮುದ್ದೇಬಿಹಾಳ 29: ಪಟ್ಟಣದ ಅಂಬೇಡ್ಕರ ವೃತ್ತದಿಂದ ಅಗಸಬಾಳ ಗ್ರಾಮದವರೆಗೆ ಪಿಡ್ಬುಡಿ ಇಲಾಖೆಯಿಂದ ನಡೆದ ಡಾಂಬರಿಕರಣ ವರ್ಷದಲ್ಲಿಯೇ ಕಿತ್ತು ಹೊಗಿದ್ದರಿಂದ ಸಾರ್ವಜನಿಕರು ಸಂಚರಿಸಲು ಸಮಸ್ಯೆಯಾಗುತ್ತಿದ್ದು , ಇದೇ ಸಮಸ್ಯೆಯನ್ನು ಮನದಟ್ಟು ಮಾಡಿಕೊಂಡು ಇದೇ ತಿಂಗಳು 22 ನೇ ಗುರುವಾರ ಪತ್ರಿಕೆಯ ತಲೆ ಬರಹದಲ್ಲಿ ಕಳಪೆ ಕಾಮಗಾರಿ: ವರ್ಷದಲ್ಲೇ ಸಂಪೂರ್ಣ ಹದೆಗೆಟ್ಟ ರಸ್ತೆ. ಎಂದು ವರದಿ ಮಾಡಿದ್ದರು, ಇಲ್ಲಿಯವರೆಗೂ ಸಂಬಂದಿಸಿದ ಇಲಾಖೆಯವರು ಮತ್ತು ಸ್ಥಳೀಯ ಜನಪ್ರತಿನಿದಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಮೊಂಡುತನದ ಅಧಿಕಾರಿಗಳನ್ನು ವರ್ಗಾವಣೆಗೆ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಅಧಿಕಾರಿಗಳ ದೂರವಾಣಿ 9448012982 ಸಂಖ್ಯೆಗೆ ಹಲವು ಭಾರಿ ಕ್ರಮದ ವಿಷಯಕ್ಕೆ ಕರೆ ಮಾಡಿದರು, ಕರೆ ಸ್ವೀಕರಿಸಲಿಲ್ಲಾ.
ವರ್ಷದಲ್ಲಿಯೇ ಹದೆಗೆಟ್ಟ ಈ ರಸ್ತೆ ನಿರ್ಮಾಣದಲ್ಲಿ ಭಾರಿ ಅವ್ಯವಹಾರವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಸಂಗಮೇಶ ಚಲವಾದಿ ದಲೇಬಗೇರಿನ
ಕಾಂಗ್ರೆಸ್ ಮುಖಂಡರು