ಬ್ಯಾಡ್ಗಿ

ಚಿರತೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿ

ಚಿರತೆ ಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿ
ಆಣೂರ-ಅರಳೀಕಟ್ಟಿ ಗ್ರಾಮದ ಬಳಿಯಲ್ಲಿ ಬೋನಿಗೆ ಬಿದ್ದ ಚಿರತೆ..

ಬ್ಯಾಡಗಿ 01: ತಾಲೂಕಿನ ಜನರಲ್ಲಿ ಭಯ ಸೃಷ್ಟಿಸಿ ನಿದ್ದೆಗೆಡೆಸಿದ್ದ ಚಿರತೆಯೊಂದು ಆಣೂರ-ಅರಳೀಕಟ್ಟಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಮಂಗಳವಾರ ಬಿದ್ದಿದ್ದು ಸಾರ್ವಜನಿಕರು ವಾಹನ ಸವಾರರು ಸೇರಿದಂತೆ ರೈತರು ನಿಟ್ಟುಸಿರು ಬಿಡುವಂತಾಗಿದೆ. 

 ಕಳೆದ 20 ದಿನಗಳಿಂದ ತಾಲೂಕಿನ ಶಿಡೆನೂರು-ಕೊಲ್ಲಾಪುರ, ಬಿದರಕಟ್ಟಿ-ಕಾಟೇನಹಳ್ಳಿ, ಆಣೂರ-ಅರಳಿಕಟ್ಟಿ ಗ್ರಾಮದ ಬಳಿಯಲ್ಲಿ ಗ್ರಾಮಸ್ಥರಿಗೆ ಹಲವು ಬಾರಿ ಚಿರತೆ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿತ್ತು, ಭಯದಿಂದ ಹೊರಬರಲಾದ ಸಾರ್ವಜನಿಕರು ಈ ಭಾಗದಲ್ಲಿ ಒಬ್ಬೊಬ್ಬರಾಗಿ ಓಡಾಡುವುದನ್ನೇ ಸ್ಥಗಿತಗೊಳಿಸಿದ್ದರು.   

ಎರಡು ಭಾಗದಲ್ಲಿ ಅರಣ್ಯ ಇಲಾಖೆ ಬೋನು: ಸುದ್ದಿ ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಯು ಚಿರತೆ ಹೆಜ್ಜೆ ಗುರ್ತುನ್ನು ಪರಿಶೀಲಿಸಿ ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದಲ್ಲದೇ ಶಿಡೇನೂರ-ಕೊಲ್ಲಾಪುರ ಮತ್ತು ಆಣೂರ-ಅರಳಿಕಟ್ಟಿ ಗ್ರಾಮದ ಬಳಿಯಲ್ಲಿ ಎರಡು ಬೋನ್ ಇರಿಸಿದ್ದರು.

ದಾಂಡೇಲಿ ಅರಣ್ಯ ಪ್ರದೇಶಕ್ಕೆ ಶಿಷ್ಟ್: ಆಣೂರ ಅರಳೀಕಟ್ಟಿ ಗ್ರಾಮದ ಬಳಿಯಲ್ಲಿ ಮಂಗಳವಾರ ಬೆಳಿಗ್ಗೆ ಬೋನ್‍ನಲ್ಲಿ ಚಿರತೆ ಸೆರೆಯಾದ ಬಗ್ಗೆ ಮಾಹಿತಿ ಪಡೆದ ಹಿರೇಕೆರೂರ ಹಾಗೂ ಬ್ಯಾಡಗಿ ತಾಲೂಕಿನ ವಲಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರಲ್ಲದೇ, ಬಳಿಕ ವಾಹನದಲ್ಲಿ ಬೋನು ಸಮೇತ ಚಿರತೆಯನ್ನು ದಾಂಡೇಲಿ ಅರಣ್ಯ ಪ್ರದೇಶಕ್ಕೆ ಸ್ಥಳಾಂತರ ಮಾಡಿದರು.

 ಈ ಸಂದರ್ಭದಲ್ಲಿ ಹಿರೇಕೆರೂರ ಆರ್‍ಎಫ್‍ಓ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿ ವಸಂತ ಪಾಟೀಲ, ಫಾರೆಷ್ಟ ಗಾರ್ಡ ಗಣೇಶ ಬೊಮ್ಮನಹಳ್ಳಿ, ಜಗದೀಶ ಡ್ಯೂಟರ್,ಹನುಮಂತ ತೆವರಿ, ಸೆಕ್ಷೆನ್ ಫಾರೆಸ್ಟರ್ ಎನ್.ಡಿ.ಮುಲ್ಲಾ, ಮೋಹಿತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ತನ್ನ ವ್ಯಾಪ್ತಿಯಲ್ಲೇ ಸಂಚಾರ: ತಾಲೂಕಿನಲ್ಲಿ ಅರಣ್ಯ ಪ್ರದೇಶಗಳ ಅಗಲ ಕಡಿಮೆಯಿದೆ, ಚಿರತೆ ಅರಣ್ಯ ಪ್ರದೇಶದ ವ್ಯಾಪ್ತಿ ಯಲ್ಲೇ ಓಡಾಡಿದರೂ ಸಹ ಸಾರ್ವಜನಿಕರ ಕಣ್ಣಿಗೆ ಬೀಳುತ್ತವೆ, ಆಹಾರಕ್ಕಾಗಿ ಜಾನುವಾರುಗಳ ಬೆನ್ನು ಹತ್ತುವ ಜನರಲ್ಲಿ ಭಯವನ್ನು ಸೃಷ್ಟಿಸಿತ್ತು ಸುಮಾರು ಮೂರು ವರ್ಷದ ದಷ್ಟಪುಷ್ಟವಾದ ಗಂಡು ಚಿರತೆ ಬೋನಿಗೆ ಬಿದ್ದಿದೆ.. ಮಹೇಶ ಮರಿಯಣ್ಣನವರ, ಆರ್‍ಎಫ್‍ಓ ಬ್ಯಾಡಗಿ..

ಅರಣ್ಯ ಇಲಾಖೆಗೆ ಧನ್ಯವಾದ: ಕೆಲ ದಿನಗಳ ಹಿಂದಷ್ಟೇ ರೈತರಿಗೆ ಚಿರತೆ ಕಾಣಿಸಿಕೊಂಡಿದ್ದು, ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುವಂತಾಗಿತ್ತು. ಸೂಕ್ತ ಸಮಯದಲ್ಲಿ ರೈತರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.. ಪ್ರವೀಣ ಹೊಸಗೌಡ್ರ ಆಣೂರು ರೈತ..


ಸುದ್ದಿ ಓದಿ