ವಿದ್ಯೆಯಿಂದ ವಿನಯಶೀಲತೆ ಬೆಳೆಯಲಿ: ಸಿದ್ಧಲಿಂಗ ದೇವರು
ತಾಳಿಕೋಟಿ: ಒಬ್ಬ ವ್ಯಕ್ತಿಯನ್ನು ಭೌತಿಕವಾದಿಯನ್ನಾಗಿ ಮಾಡುವುದು ಶಿಕ್ಷಣದ ಉದ್ದೇಶ ಅಲ್ಲ, ವ್ಯಕ್ತಿಯನ್ನು ನೀತಿವಂತ ವಿನಯಶೀಲ ಹಾಗೂ ಸಂಸ್ಕಾರವಂಥನನ್ನಾಗಿ ಮಾಡುವದಾಗಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ಧಲಿಂಗದೇವರು ಹೇಳಿದರು.
ಪಟ್ಟಣದ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈಲೇಶ್ವರ ಇದರ 2022ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಗರಿಷ್ಟ ಅಂಗಳಿಸುವ ದೃಷ್ಠಿಕೋನದಿಂದ ಸಿದ್ಧಗೊಳಿಸಲಾಗುತ್ತಿದೆ ಇದರಿಂದ ಶಿಕ್ಷಣದ ನೈಜ ಉದ್ದೇಶ ಇಡೇರುವುದಿಲ್ಲ. ಶಿಕ್ಷಣ ವ್ಯಕ್ತಿಯನ್ನು ಅಮೂಲಾಗ್ರಹ ಬದಲಿಸುವ ಸಾಧನ ಆಗಬೇಕು ಶಿಕ್ಷಣ ಸಂಸ್ಥೆಗಳು ವ್ಯಾಪಾರ ಕೇಂದ್ರಗಳಾಗದೆ ವಿದ್ಯಾರ್ಥಿಗಳ ಭವಿಷ್ಯರೂಪಿಸುವ ಕೇಂದ್ರಗಳಾಗಬೇಕು ಎಂದರು.
ಉದ್ಘಾಟಕರಾಗಿ ಆಗಮಿಸಿದ ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಜಿ. ಮಿರ್ಜಿ ಮಾತನಾಡಿ ವಿದ್ಯಾರ್ಥಿಗಳು ಒಂದು ಸ್ಪಷ್ಟ ಗುರಿಯೊಂದಿಗೆ ಪರಿಶ್ರಮವಹಿಸಿ ಸಾಧಕರಾಗಬೇಕಾಗಿದೆ. ವಿದ್ಯಾರ್ಥಿಗಳು ದೇಶದ ಒಬ್ಬ ಉತ್ತಮ ನಾಗರಿಕ, ಪ್ರಜೆ ಹಾಗೂ ಹೆತ್ತವರ ಪಾಲಿಗೆ ಒಂದು ಅಮೂಲ್ಯವಾದ ಆಸ್ತಿ ಆಗಬೇಕಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಾಗರಬೆಟ್ಟ ಆಕ್ಸಫರ್ಡ ಶಿಕ್ಷಣ ಸಂಸ್ಥೆ ಅದ್ಯಕ್ಷ ಎಮ್. ಎಸ್. ಪಾಟೀಲ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ ಮಾತನಾಡಿ ವಿದ್ಯಾರ್ಥಿಗಳ ಸಾಧನೆ ಶಿಕ್ಷಕರ ಪರಿಶ್ರಮದ ಜೋತೆಗೆ ಪಾಲಕರ ಆಸಕ್ತಿಯನ್ನು ಅವಲಂಬಿಸಿದೆ ಈ ಶಾಲೆಯ ವಿದ್ಯಾರ್ಥಿಗಳ ಸಾಧನೆ ಅತ್ಯುತ್ತಮವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸುವದರ ಜೋತೆಗೆ ಸಂಸ್ಥೆಯಲ್ಲಿ ಶಿಕ್ಷಣ ಮುಗಿಸಿ ಉನ್ನತ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗೌರವಿಸಿ ಸಹಾಯ ಧನ ನೀಡಲಾಯಿತು.
ಸಂಸ್ಥಯ ಅಧ್ಯಕ್ಷ ಎನ್. ಬಿ. ನಡುವಿನಮನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣ ಸಂಯೋಜಕ ಪಿ. ಬಿ. ಮುಲ್ಲಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ. ಎಸ್. ಸಜ್ಜನ, ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ಮೂರಮಾನ, ಕಾರ್ಯದರ್ಶಿ ಎಮ್. ಬಿ. ಮಡಿವಾಳರ, ಉಪಾಧ್ಯಕ್ಷ ಆರ. ಬಿ. ನಡುವಿನಮನಿ, ನಿರ್ದೇಕರಾದ ಎಸ್ ಎಚ್. ಪಾಟೀಲ, ಶಶೀಧರ ಎಂ ಬೀರಾದಾರ, ನಿರ್ದೇಶಕಿಯರಾದ ಎಲ್. ಎಮ್. ಬಿರಾದಾರ, ಎನ್. ಎಸ್ ಗಡಗಿ ಇದ್ದರು.