ಬಾಡಿಗೆ ಕೇಳುವ ನೆಪದಲ್ಲಿ ಬಂದು ಉಪನ್ಯಾಸಕಿ ಮೇಲೆ ಹಲ್ಲೆ: ಆರೋಪಿ ಪತ್ತೆ
ಬಾಡಿಗೆ ಕೇಳುವ ನೆಪದಲ್ಲಿ ಬಂದು ಉಪನ್ಯಾಸಕಿ ಮೇಲೆ ಹಲ್ಲೆ: ಆರೋಪಿ ಪತ್ತೆ
ಮುದ್ದೇಬಿಹಾಳ 25: ಪಟ್ಟಣದ ಸಾಯಿ ನಗರ ಬಡಾವಣೆಯಲ್ಲಿ ಕಳೆದ ದಿ. 21 ಶನಿವಾರದಂದು ಬಾಡಿಗೆ ಕೇಳುವ ನೆಪದಲ್ಲಿ ಬಂದು ಕಾಲೇಜು ಉಪನ್ಯಾಸಕಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಸಧ್ಯ ಹಲ್ಯೆ ಮಾಡಿದ ಆರೋಪಿ ಮಾಹಿತಿ ಪೋಲಿಸರಿಗೆ ಲಭ್ಯವಾಗಿದೆ ಮಾತ್ರವಲ್ಲದೇ ತೆಲಂಗಾಣದ ರಾಜ್ಯದ ನಲಗೊಂಡ ಜಿಲ್ಲೆಯ ಅನುಮುಲ್ಲಾ ಮಂಡಲದ ಹಜಾರಿಗುಡದ ನಿವಾಸಿ ಪೇರುಮಾಳ ಸೈದಯ್ಯ ಧನುಂಜಯ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪಿಎಸ್‌ಐ ಸಂಜಯ ತಿಪರೆಡ್ಡಿ, ಈತ ಮನೆ ಬಾಡಿಗೆ ಕೇಳುವ ನೆಪದಲ್ಲಿ ಉಪನ್ಯಾಸಕಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕಳ್ಳತನ ಮಾಡಲು ಹೋಗಿದ್ದನೆಂದು ಆರೋಪಿ ಸತ್ಯ ಬಾಯ್ದಿಟ್ಟಿದ್ದಾನೆ. ಒಬ್ಬಂಟಿಯಾಗಿರುವ ಮಹಿಳೆಯರು ತಮ್ಮ ಮನೆಗಳಿಗೆ ಬಾಡಿಗೆ ಕೊಡಲು ಗುರ್ತು ಪರಿಚಿತರನ್ನು ಗುರುತಿಸಿ ಬಾಡಿಗೆ ಕೊಡುವಲ್ಲಿ ಮುಂದಾಗಬೇಕು. ಅಪರಿಚಿತರ ಬಗ್ಗೆ ಸ್ಪಲ್ಪ ಅವರ ಹಾವ ಭಾವದ ಬಗ್ಗೆ ನಿಗಾವಹಿಸಿ ಸಂಶಯ ಕಂಡುಬಂದರೆ ತಕ್ಷಣದಲ್ಲಿಯೇ ಪೋಲಿಸರಿಗೆ ದೂರು ನೀಡಿದರೇ ಇಂತಹ ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಹಕಾರಿಯಾಗಲಿದೆ ಎಂದು ನಾಗರಿಕರಲ್ಲಿ ವಿನಂತಿಸಿದ್ದಾರೆ.
ಹೆಚ್ಚುವರಿ ಎಸ್ಪಿ ಭೇಟಿ: ಉಪನ್ಯಾಸಕಿ ಸುಮಂಗಲಾ ಅಂಗಡಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಉಪನ್ಯಾಸಕಿಯ ಮನೆಗೆ ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಭೇಟಿ ನೀಡಿ ಪರೀಶೀಲನೆ ನಡೆಸಿದರು. ಪಿಎಸ್‌ಐ ಸಂಜಯ್ ತಿಪರೆಡ್ಡಿ ಇದ್ದರು.