ಅಥಣಿ ಪುರಸಭೆ ಚನಾವಣೆ: ಕಾಂಗ್ರೆಸ್ ಅಬ್ಬರದ ಪ್ರಚಾರ
ಲೋಕದರ್ಶನ ವರದಿ
ಅಥಣಿ 22: ಡಿಸೆಂಬರ 27ರಂದು ಜರುಗಲಿರುವ ಅಥಣಿ ಪುರಸಭೆ ಚನಾವಣೆಯಲ್ಲಿ ವಾರ್ಡ ನಂ. 19ರಲ್ಲಿ ಕಾಂಗ್ರೆಸನಿಂದ ರಿಯಾಜ ಮಕಬುಲಸಾಬ ಸನದಿ ಇವರ ಪ್ರಚಾರ ಭರದಲ್ಲಿ ಸಾಗುತ್ತಿದ್ದು, ಬಸವನಗರ ಶಾಂತಿನಗರ ವಾರ್ಡನಲ್ಲಿ ಮತದಾರರ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗೆ ದೊರಕುತ್ತಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಶಾಸಕ ಶಹಾಜನ ಡೊಂಗರಗಾಂವ, ಧರೆಪ್ಪಾ ಟಕ್ಕಾನವರ, ಅಭಿದ ಮಾಸ್ಟರ ಸಯದ ಗಡ್ಡೆಕರ, ಭೀಮು ಕಾಂಬಳೆ, ಕೆ ವೆಂಕಟೆಶ ಇನ್ನಿತರ ಕಾರ್ಯಕರ್ತರು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ನೂರಾರು ಮಹಿಳೆಯರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಮತದಾರರೊಂದಿಗೆ ವೈಯಕ್ತಿಕ ಮುಖಾ ಮಖಿ ಭೇಟಿಗೆ ಒತ್ತು ನೀಡಲಾಗುತ್ತಿದೆ.
ಕಾಂಗ್ರೆಸ್ ಪರ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.
ಅಥಣಿ ಪುರಸಭೆಯ 27 ವಾರ್ಡದಲ್ಲಿ 99 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಾದರೂ ನೇರ ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಡೆಯಲಿದೆ. ಎರಡೂ ಪಕ್ಷಗಳಿಗೂ ಬಂಡಾಯದ ಬಿಸಿಯಿದೆಯಾದರೂ ಅಂತಮವಾಗಿ ಮತದಾರನೇ ಭವಿಷ್ಯ ಬರೆಯಲಿದ್ದು, ಫಲಿತಾಂಶದ ನಂತರವೇ ಆತನ ತೀರ್ು ಏನೆಂಬುದು ತಿಳಿಯಲಿದೆ.