ಅಥಣಿ

ಅಥಣಿ ಪುರಸಭೆ ಚುನಾವಣೆ: ಬಿಜೆಪಿ ಭಾರಿ ಪ್ರಚಾರ

ಅಥಣಿ ಪುರಸಭೆ ಚುನಾವಣೆ: ಬಿಜೆಪಿ ಭಾರಿ ಪ್ರಚಾರ

ಲೋಕದರ್ಶನ ವರದಿ 


ಅಥಣಿ 22: ಡಿಸೆಂಬರ 27ರಂದು ಜರುಗಲಿರುವ ಅಥಣಿ ಪುರಸಭೆ ಚನಾವಣೆಯಲ್ಲಿ ವಾರ್ಡ 14ರಲ್ಲಿ ಭಾಜಪದಿಂದಾ ಮೃಣಾಲಿನಿ ವೆಂಕಟೆಶ ದೇಶಪಾಂಡೆ ಇವರ ಪ್ರಚಾರ ಭರದಲ್ಲಿ ಸಾಗುತ್ತಿದ್ದು, ವಾರ್ಡನಲ್ಲಿ ಮತದಾರರ ಬೆಂಬಲ ಬಿಜೆಪಿ ಅಭ್ಯರ್ಥಿಗೆ ದೊರಕುತ್ತಿದೆ.  

     ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಮಹೇಶ ಕುಮಠಳ್ಳಿ  ಅವರ ನೇತೃತ್ವದಲ್ಲಿ  ಅನೀಲ ದೇಶಪಾಂಡೆ, ಆನಂದ ಟೊಣಪಿ, ಶಿವಕುಮಾರ ಸವದಿ, ಚಿದಾನಂದ ಸವದಿ, ಅಥಣಿ  ಬಿಜೆಪಿ ಮಂಡಳ ಅಧ್ಯಕ್ಷ ಅಣ್ಣಸಾಸಾಹೇಬ ನಾಯಿಕ ಸೇರಿದಂತೆ ಅನೇಕ ಗಣ್ಯರು ಸೇರಿ ಮನೆಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ. ಮಂಗಳವಾರ ಬೆಳಗಿನ ಜಾವಾ ಬಿಜೆಪಿ ಅಭ್ಯರ್ಥಿ ಮೃಣಾಲಿನಿ ದೇಶಪಾಂಡೆ ಹಾಗೂ ನೂರಾರು ಮಹಿಳೆಯರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. 


ಸುದ್ದಿ ಓದಿ