ಯರಗಟ್ಟಿ

ಪಗಡೆ ಪಂದ್ಯಕ್ಕೆ ಚಾಲನೆ ನೀಡಿದ ಅಶ್ವಥ್ ವೈದ್ಯ

ಪಗಡೆ ಪಂದ್ಯಕ್ಕೆ ಚಾಲನೆ ನೀಡಿದ ಅಶ್ವಥ್ ವೈದ್ಯ

ಯರಗಟ್ಟಿ 15: ಕಾರ್ತಿಕ ಮಾಸದ ನಿಮಿತ್ಯ ಸಮೀಪದ ಸತ್ತಿಗೇರಿ ಗ್ರಾಮದಲ್ಲಿ ಪಾರಂಪರಿಕ ಆಟಗಳಿಗೆ ಚಾಲನೆ ನೀಡಲಾಯಿತು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯುವ ಮುಖಂಡ ಅಶ್ವಥ್ ವೈದ್ಯ ಮಾತನಾಡಿ ಮಹಾಭಾರತದಿಂದ ಶುರುವಾದ ಈ ಆಟವನ್ನು ಮುಂದೆ ರಾಜ ವಂಶಸ್ಥರು ಹವ್ಯಾಸಕ್ಕಾಗಿ, ಮೋಜಿಗಾಗಿ ಆಡುವ ಸಂಪ್ರದಾಯ ರೂಢಿಗೆ ಬಂತು. ಇಂಥ ಆಟವನ್ನು ಜೂಜು ಇಲ್ಲದೇ ಕೇವಲ ಮನರಂಜನೆ, ಹವ್ಯಾಸಕ್ಕಾಗಿ ಕ್ರೀಡಾ ಮನೋಭಾವದಿಂದ ಮರೆತು ಹೋಗುತ್ತಿರುವ ಪುರಾತನ ಆಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಬೆಳದಿಂಗಳಲ್ಲಿ ಆಡುವ ಸಂಪ್ರದಾಯ ಇದೆ.  

ಈ ಊರಲ್ಲಿ ಪಾಂಡವರಿಲ್ಲ, ಕೌರವರಿಲ್ಲ ಶಕುನಿಯಿಯಂತೂ ಇಲ್ವೇ ಇಲ್ಲ. ಆದರೂ ಇಲ್ಲಿ ಪಗಡೆ ಮಕ್ಕಳಾಟದಷ್ಟೇ ಸಹಜವಾಗಿ ಆಚರಣೆಯಲ್ಲಿದೆ. ಹಾಗಂತ ಇಲ್ಲಿ ಆಡುವುದು ಜೂಜು ಕೂಡ ಅಲ್ಲ, ಈ ಊರಿನವರಲ್ಲಿ ಪಗಡೆಯಾಟದ ಸ್ಪರ್ಧೆ ಪ್ರತಿ ವರ್ಷವೂ ನಡೆಯುತ್ತಿದೆ ಗೆದ್ದವರಿಗೆ ಬಹುಮಾನ ಇದೆ, ಜೊತೆಗೆ ಪುರಾತನ ಕ್ರೀಡೆಯನ್ನು ಉಳಿಸುವ ಕಳಕಳಿಯೂ ಇದೆ. ರಾಮಲಿಂಗೇಶ್ವರ ಪಗಡೆ ತಂಡ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.  

ದಿವ್ಯ ಸಾನಿಧ್ಯವನ್ನು ಸತ್ತಿಗೇರಿ ಗ್ರಾಮದ ಚಂದ್ರಶೆಖರ ಶಿವಾಚಾರ್ಯರ ಮಹಾಸ್ವಾಮಿಗಳು, ಅಧ್ಯಕ್ಷತೆ ಶ್ರೀಶೈಲ ಸಂಗಪ್ಪನ್ನವ, ಬಂಗಾರೆಪ್ಪ ಹರಳಿ, ಪ್ರಕಾಶ ವಾಲಿ, ಬಸನಪ್ಪಗೌಡ ಬಿ.ಪಾಟೀಲ, ಮಲ್ಲಿಕಸಾಬ ಬಾಗವಾನ, ಮಹಾಂತೇಶ ಯರಗಣವಿ, ಬಸನಪ್ಪ ನಾರುಗಣ್ಣವರ, ಮಹಾದೇವ ಗೋಡಿ, ರಮೇಶ ರೈನಾಪೂರ, ಸಿದ್ದಣ್ಣ ರಂಗಣ್ಣವರ, ಹೇಮಣ್ಣಾ ಗಲಬಿ, ಶಿವಪ್ಪ ಕರಲಿಂಗಪ್ಪನ್ನವರ, ನಾಗಪ್ಪ ಮಿಲ್ಲಾನಟ್ಟಿ, ಪ್ರಕಾಶ ಹೊಸಮನಿ, ಶ್ರೀಕಾಂತ ಮಠಪತಿ, ಶಿವಾನಂದ ಅವರಾದಿ, ಕುಮಾರ ಪಟ್ಟಣಶೆಟ್ಟಿ, ರಾಜು ಸೋಮನ್ನವರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ