ಕಾರವಾರ

ಸಾಹಿತಿ ಭಗವಾನ್ ಮುಖಕ್ಕೆ ಮಸಿ: ಖಂಡನೆ

ಸಾಹಿತಿ ಭಗವಾನ್ ಮುಖಕ್ಕೆ ಮಸಿ: ಖಂಡನೆ

ಕಾರವಾರ 04:  ಹಿರಿಯ ಸಾಹಿತಿ ಭಗವಾನ್ ಅವರ ಮುಖಕ್ಕೆ ನ್ಯಾಯಾಲಯದ ಆವರಣದಲ್ಲಿ ವಕೀಲೆಯೊಬ್ಬರು ಮಸಿ ಬಳಿದಿರುವುದು ಖಂಡನೀಯ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.

ತಾತ್ವಿಕ ಭಿನ್ನಾಭಿಪ್ರಾಯ ಏನೇ ಇದ್ದರೂ ಮಾಧ್ಯಮಗಳ ಮೂಲಕ, ವಿಚಾರ ಸಂಕಿರಣಗಳ ಮೂಲಕ, ನ್ಯಾಯಾಲಯದ ಮೂಲಕ ಅಭಿಪ್ರಾಯ ಮಂಡಿಸಿ ಫಲಿತಾಂಶ ಪಡೆಯಬಹುದಿತ್ತು. ಆದರೆ ಈ ವಕೀಲೆ ನ್ಯಾಯಾಲಯದ ಆವರಣದಲ್ಲಿಯೇ ಸಾಹಿತಿಯ ಮುಖಕ್ಕೆ ಮಸಿ ಬಳಿಯುವುದರ ಮೂಲಕ ವಕೀಲ ಸಮುದಾಯಕ್ಕೆ, ಗೌರವಾನ್ವಿತ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಈ ವಕೀಲೆಯ ಸನದನ್ನು ತಕ್ಷಣ ಮಾನ್ಯ ರಾಜ್ಯ ಉಚ್ಛ ನ್ಯಾಯಾಲಯ ರದ್ದು ಪಡಿಸಬೇಕು ಎಂದು ಅರವಿಂದ ಕರ್ಕಿಕೋಡಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಸುದ್ದಿ ಓದಿ