ವಾಣಿಜ್ಯ ನಗರದಲ್ಲಿ ಅರುಣ್ ಕುಮಾರ್ ಪೂಜಾರ್ ಹುಟ್ಟುಹಬ್ಬ ಆಚರಣೆ
ರಾಣೆಬೆನ್ನೂರು 26: ನಾನು ನನ್ನ ಜೀವನದಲ್ಲಿ ತತ್ವ-ಸಿದ್ಧಾಂತ ಹೊಂದಿಕೊಂಡು ರಾಜಕಾರಣ ಮಾಡುತ್ತಿದ್ದೇನೆ ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಜಗ್ಗದೆ ನನ್ನ ಕೆಲಸವನ್ನು ನಾನು ಮಾಡಿಕೊಂಡು ಹೊರಟಿದ್ದೇನೆ, ರಾಜ್ಯದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಗುರುವಾರ ಇಲ್ಲಿನ ಪಿ.ಬಿ. ರಸ್ತೆ, ಬಿಟಿ ಪಾಟೀಲ್ ಮೈದಾನದಲ್ಲಿ ಅರುಣ್ ಕುಮಾರ್ ಪೂಜಾರ್ ಅಭಿಮಾನಿ ಬಳಗ ಆಯೋಜಿಸಿದ್ದ ಶಾಸಕರ 44ನೇ ಹುಟ್ಟುಹಬ್ಬ, ಸಾಧಕ ಗಣ್ಯರ ಅಭಿನಂದನಾ ಸನ್ಮಾನ ಮತ್ತು ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ತಾವು ಮುಖ್ಯಮಂತ್ರಿಯಾದ ನಂತರ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟವನ್ನು ಆರಂಭಿಸಿದ್ದೇವೆ ಇದರಿಂದ ಹಾಲು ದುಪ್ಪಟ್ಟಾಗಿ ಉತ್ಪಾದನೆಯಾಗಲಿದೆ ಮೊದಲಿದ್ದ ಸಂಗ್ರಹ 1. ಲಕ್ಷ ಲೀಟರ್, ಪ್ರಸ್ತುತ 1.80, ಹೆಚ್ಚಳವಾಗಿದೆ. ಹಾವೇರಿ ರಾಣೇಬೆನ್ನೂರು ಮಧ್ಯ ಕೈಗಾರಿಕಾ ಟೌನ್ಸೀಫ್ ಮಾಡಲು ಮುಂದಾಗಿದ್ದೇವೆ. ಇದರಿಂದ ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದರು. ಉತ್ತರ ಕರ್ನಾಟಕ ಸ್ವಾತಂತ್ರ್ಯ ಹೋರಾಟಗಾರರ ಬಹುಸಂಖ್ಯೆಯ ತವರೂರು, 5 ಕೋಟಿ ರೂ ವೆಚ್ಚದಲ್ಲಿ ಕೋಡಿಯಾಲ್ ಹೊಸಪೇಟೆ ಬಳಿ ಬ್ರಹತ್ ಹೆಬ್ಬಾಗಿಲು ನಿರ್ಮಿಸಲು ಸಂಕಲ್ಪ ಮಾಡಿದ್ದೇವೆ. ಹಿಂದೆ ಇದ್ದ ಅತಿರಥ ಮಹಾರಥರು ಏನು ಮಾಡಿದ್ದಾರೆ ಎನ್ನುವುದು ಕ್ಷೇತ್ರದ ಜನತೆ ತಿಳಿದುಕೊಂಡಿದ್ದಾರೆ, ಅದರ ಬಗ್ಗೆ ವಿವರಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಆಡಳಿತ ಜನನಾಯಕನನ್ನು ಕುಟುಕಿದರು. ಜಿಲ್ಲೆಯಲ್ಲಿ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಇಚ್ಛಾಶಕ್ತಿ ಕೊರತೆಯಿಂದ ಗದಗ್ ಪಾಲಾಯಿತು.
ಪುನಃ 2019 ರಲ್ಲಿ ಬಿಜೆಪಿ ಸರ್ಕಾರ ಮೆಡಿಕಲ್ ಕಾಲೇಜು ದೊರಕಿದೆ. ಈ ವರ್ಷದಿಂದ ಪ್ರವೇಶಾತಿಗಳು ಪ್ರಾರಂಭವಾಗಿವೆ, ಇದು ಎಲ್ಲರಿಗೂ ತಿಳಿದ ಸಂಗತಿ. ಕಾಂಗ್ರೆಸ್ ಆಡಳಿತದಲ್ಲಿ ಎಲ್ಲರೂ ಸಾಮಾಜಿಕ ನ್ಯಾಯ ನೀಡುವ ಭರವಸೆ ನೀಡುತ್ತಲೇ ಸಾಗಿದ್ದಾರೆ, ಆದರೆ ಸಾಮಾಜಿಕ ನ್ಯಾಯ ಸಿಕ್ಕಿದೇಯೇ?. ಬರಿ ಮಾತಿನಿಂದ ಹೇಳಿದರೆ ಸಾಲದು, ಕೃತಿಯಲ್ಲಿ ಬಂದಾಗ ಮಾತ್ರ ಸಾಮಾಜಿಕ ನ್ಯಾಯ ಎನ್ನುವ ಪದಕ್ಕೆ ಅರ್ಥ ಬರುತ್ತದೆ. ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತೇವೆ. ಅಲ್ಲಿ ಯಾವುದೇ ರಾಜಿ ಸಂಧಾನ ವಿಲ್ಲ, ಹೇಳಿದ್ದನ್ನೇ ಮಾಡುತ್ತೇವೆ ಇದು ನಮ್ಮ ಸರ್ಕಾರದ ಸಿದ್ಧಾಂತ ಎಂದು ಸ್ಪಷ್ಟಪಡಿಸಿದರು. ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವುದು ಜಿಲ್ಲೆಗೆ ಸಂತೋಷದ ಸಂಗತಿ, ಆದರೆ ಅದಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುವುದು ಸರಕಾರದ ಬಹುದೊಡ್ಡ ಜವಾಬ್ದಾರಿ ಇದೆ. ಶೀಘ್ರದಲ್ಲಿಯೇ ಮತ್ತಷ್ಟು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಭವಿಷ್ಯದ ದೃಷ್ಟಿಯ ಕ್ರಿಯಾಯೋಜನೆ ರೂಪಿಸಲು ಸೂಚಿಸಲಾಗಿದೆ ಎಂದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ ಪ್ರಕಾಶಾನಂದ ಜಿ ಮಹಾರಾಜ್ ಅವರು ದಿವ್ಯಸಾನಿಧ್ಯ ವಹಿಸಿ ಶುಭಾಶೀರ್ವಾದ ಸಂದೇಶ ನೀಡಿದರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಓಂಕಾರ ಶ್ರೀಗಳು, ಮಣಕೂರು ಶ್ರೀಗಳು, ಸೇರಿ ನಾಡಿನ ಅನೇಕ ಮಠ ಪೀಠಗಳ, ಶ್ರೀಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಎಂ.ಪಿ. ರೇಣುಕಾಚಾರ್ಯ, ಜಿ.ಎಂ. ಸಿದ್ದೇಶ್ವರ್, ಬಿ.ಸಿ.ಉಮಾಪತಿ, ರಾಜುಗೌಡ, ವಿರೂಪಾಕ್ಷಪ್ಪ ಬಳ್ಳಾರಿ, ಭಾರತಿ ಜಂಬಿಗಿ, ಎಸ್ ಎ. ರವೀಂದ್ರನಾಥ್, ಸಿದ್ದರಾಜ ಕಲಕೋಟಿ,ಯು.ಬಿ. ಬಣಕಾರ್, ಎಸ್ ಎಸ್ ರಾಮ ಲಿಂಗಣ್ಣನವರ, ದೀಪಕ್ ಹರಪನಹಳ್ಳಿ, ಸಿದ್ದಣ್ಣ ಚಿಕ್ಕಬಿದರಿ, ಬಸವರಾಜ ಚಳಗೇರಿ, ಚೋಳಪ್ಪ ಕಸ ವಾಳ, ಪವನ್ ಕುಮಾರ್ ಮಲ್ಲಾಡದ,ಮಂಜುನಾಥ ಓಲೆಕಾರ್, ಬಸವರಾಜ ಕೇಲಗಾರ, ಬಸವರಾಜ ಹುಲ್ಲತ್ತಿ, ಎಸ್.ಎಲ್. ಕಲ್ಲೇಶಣ್ಣ,ವಿ. ಪಿ.ಲಿಂಗನಗೌಡ್ರ, ಮಂಗಳ ಗೌರಿ ಪೂಜಾರ್, ಅನಿಲ ಸಿದ್ದಾಳಿ, ಪ್ರಕಾಶ್ ಪೂಜಾರ, ಪ್ರಮೋದ್ ಜಂಬಿಗಿ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಅಭಿಮಾನಿ ಬಳಗದ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸೈನಿಕರು ಸೇರಿದಂತೆ ವಿವಿಧ ಕ್ಷೇತ್ರ ಸಾಧಕರನ್ನು ಹಾಗೂ ಶೈಕ್ಷಣಿಕ ಪ್ರತಿಭಾಸಂಪನ್ನರನ್ನು ಸಾರ್ವಜನಿಕವಾಗಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ರಾಣೆಬೆನ್ನೂರು ವಿಧಾನಸಭಾ ಚೈತ್ರದ ಉಪಚುನಾವಣೆಯಲ್ಲಿ ಅರುಣ್ ಕುಮಾರ್ ಪೂಜಾರ ಗೆ ಟಿಕೆಟ್ ನೀಡಿದಾಗ, ಸಣ್ಣ ಹುಡುಗನಿಗೆ ಟಿಕೆಟ್ ನೀಡಿದ್ದಾರೆ, ಎಂದು ಮೊದಲಿ ಸಿದ್ದರು, ಅವರ ಮೇಲೆ ವಿಶ್ವಾಸವಿಟ್ಟು ತಾಲೂಕಿನ ಜನತೆ ಅತ್ಯಂತಹೆಚ್ಚು ಮತಗಳಿಂದ ಆರ್ಸಿ ತಂದರು ಅವನಲ್ಲಿರುವ ಸಿದ್ಧಾಂತ, ಜನರ ಬಗ್ಗೆ ಇರುವ ಕಾಳಜಿ, ಅವನು ಇಂದು ಮಾಡಿದ ಜನಪರ ಕೆಲಸಗಳು, ಕೆಲವೇ ವರ್ಷಗಳಲ್ಲಿ ಸಣ್ಣ ಹುಡುಗ ಏನು ಮಾಡಬಹುದು ಎನ್ನುವುದನ್ನು ಆತನು ಮಾಡಿದ ಅಭಿವೃದ್ಧಿ ಕಾರ್ಯಗಳು ಉತ್ತರ ನೀಡಿದೆ. ಕ್ರಿಯಾಶೀಲ ವ್ಯಕ್ತಿಗಳು ರಾಜಕಾರಣದಲ್ಲಿ ಬರಬೇಕು ಇಂಥವರಿಂದ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಪ್ರಗತಿಯ ನೋಟ ಶ್ರೀಕ್ಷೇತ್ರದಲ್ಲಿ ಕಂಡುಬರುತ್ತದೆ, ಜನತೆ ಮತ್ತೊಮ್ಮೆ ಇಂಥವರಿಗೆ ಆಶೀರ್ವಾದ ಮಾಡಿದರೆ ಇನ್ನಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುವುದು ಎಂದು ಕೋರಿದರು.