ಅಂಗವಿಕಲರಿಗೆ ಕೃತಕ ಕಾಲು ಜೋಡಣೆ
ಶಿಗ್ಗಾವಿ 20: ಇಂದು ರೈತಸೇನಾ ಕರ್ನಾಟಕ ಹಾವೇರಿ ಜಿಲ್ಲಾಧ್ಯಕ್ಷ ವರುಣಗೌಡ ಪಾಟೀಲ ಅವರು 35 ನೇ ಜನ್ಮ ದಿನದ ನಿಮಿತ್ಯ ಕಾಲು ಇಲ್ಲದ 2 ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಿಸಿ ಮಾನವೀಯತೆ ಮೆರೆದರು.
ಹುಬ್ಬಳ್ಳಿಯ ಮಹಾವೀರ ಲಿಂಬ ಕೃತಕ ಕಾಲು ಜೋಡಣೆ ಕೇಂದ್ರದಲ್ಲಿ ಮಾತನಾಡಿದ ಅವರು ಪ್ರತಿವರ್ಷದಂತೆ ಈ ವರ್ಷವು ಸಹಿತ ವಿಶೇಷವಾಗಿ ಜನ್ಮ ದಿನವನ್ನು ಆಚರಿಸಲು ಸಂಕಲ್ಪ ಮಾಡಿದ್ದೇವು ಅದರಂತೆ 2 ಜನ ಅಂಗವಿಕಲರಿಗೆ ಕಾಲು ಇಲ್ಲದೇ ಅವರು ನಿರುದ್ಯೋಗಿಗಳಾಗುತ್ತಾರೆ ಅಲ್ಲದೇ ಬಿಕ್ಷಾಟನೆ ಕಾರ್ಯದಲ್ಲಿ ತೊಡಗುತ್ತಾರೆ ಆದ್ದರಿಂದ ಅವರಿಗೆ ಕೃತಕ ಕಾಲು ಜೋಡಣೆ ಮಾಡಿದರೇ ಸ್ವಾವಲಂಬಿಯಾಗಿ ಬದುಕು ಬಲ್ಲರು ಎಂಬ ದೂರದೃಷ್ಟಿಯಿಂದ ಈ ತಿರ್ಮಾನ ತೆಗೆದುಕೊಂಡೆ ಈ ನಿರ್ಧಾರ ನನಗೆ ತೃಪ್ತಿ ತಂದಿದೆ ಎಂದರು.
ಹುಬ್ಬಳ್ಳಿಯ ಮಹಾವೀರ ಲಿಂಬ ಕೃತಕ ಕಾಲು ಜೋಡಣೆ ಕೇಂದ್ರದ ವ್ಯವಸ್ಥಾಪಕರು ವರುಣಗೌಡ ಪಾಟೀಲ ಹಾಗೂ ಧರ್ಮ ಪತ್ನಿ ಚೇತನಾ ಪಾಟೀಲ ಅವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.