ಕಲೆಯನ್ನು ಗುರುತಿಸುವ ಕಾರ್ಯ ನಡೆಯಲಿ :ಕುನ್ನೂರ
ಲೋಕದರ್ಶನ ವರದಿ
ಶಿಗ್ಗಾವಿ 30: ಕಲೆಯನ್ನು ಗುರುತಿಸುವಂತ ಕಾರ್ಯಗಳು ನಡೆಯಬೇಕು ಕಲಾವಿದರಿಗೆ ಎಲ್ಲ ಸೌಲಭ್ಯಗಳು ಸಿಗಬೇಕು ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಚನ್ನಪ್ಪ ಕುನ್ನೂರ ಪದವಿ ಪೂರ್ವ ಕಾಲೇಜಿನಲ್ಲಿ ಎಮಜಿಂರ್ಗ ಎಂಟರ್ ಟೈನರ್ಸರವರು ಹಮ್ಮಿಕೊಂಡ ಜಾನಪದ ಉತ್ಸವ-2021 ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಕಲೆಯನ್ನು ಪ್ರೋತ್ಸಾಹಿಸುವ ಮತ್ತು ಪ್ರತಿಭೆಗಳನ್ನು ಹೊರತರುವ ಕಾರ್ಯವನ್ನು ಇಂತಹ ಕಾರ್ಯಕ್ರಮಗಳು ಮಾಡುತ್ತಿವೆ ಎಂದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಜಾನಪದದಲ್ಲಿ ಎಲ್ಲ ಅಡಗಿದೆ, ಜಾನಪದ ಜಾಣರಪದವಾಗಿದೆ ಎಂದರು, ಜನತಾ ಬಜಾರ ಅದ್ಯಕ್ಷೆ ಲಲೀತಾ ಹಿರೇಮಠ, ವಿವೇಕ ಜಾಗೃತ ಬಳಗದ ಲಲಿತಾ ಬೆಳ್ಳಾಗಟ್ಟಿ ಮತ್ತು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುಶೀಲಮ್ಮ ಪಾಟೀಲ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗುರುನಾಥ ಹುಬ್ಬಳ್ಳಿ, ಬಸವರಾಜ ಕರಡಿ, ಶರಣ ಬಿಂದಲಗಿ, ಗೋಪಾಲ ಮಾಸ್ತರ ಹಾಗೂ ಸಂಗಡಿಗರಿಂದ ಜೋಗತಿ ನೃತ್ಯ, ಜಡೆ ಕೊಲಾಟ, ವಚನಾಧಾರಿತ ಕೋಲಾಟ, ಹೆಜ್ಜೆ ಮಜಲು, ವೀರಗಾಸೆ, ಜಾನಪದ ಗೀತೆಗಳು ಹಾಗೂ ಭಜನಾ ಗೀತೆಗಳು ನಡೆದವು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿವಾನಂದ ಮ್ಯಾಗೇರಿ, ಕೊಟ್ರೇಶ ಮಾಸ್ತರ್ ಬೆಳಗಲಿ, ಫಕ್ಕೀರೇಶ ಕೊಂಡಾಯಿ ಹಾಗೂ ಜಾನಪದ ಅಕಾಡೆಮಿ ಸದಸ್ಯ ಶಂಕರ್ ಅರ್ಕಸಾಲಿ ಅವರುಗಳನ್ನ ಸನ್ಮಾನಿಸಲಾಯಿತು, ನಂತರ ನಡೆದ ವಿವಿಧ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಚನ್ನಪ್ಪ ಕುನ್ನೂರ ಸಂಸ್ಥೆಯ ಸ್ನೇಹಲತಾ ಕುನ್ನೂರ, ಪುರಸಭೆ ಸದಸ್ಯ ರಮೇಶ ವನಹಳ್ಳಿ, ಮುಖಂಡರಾದ ಶಿವಪ್ಪ ಗಂಜೀಗಟ್ಟಿ, ಬಸವರಾಜ ವಡ್ಡರ, ವೀರಣ್ಣ ಬಡ್ಡಿ, ಶಿವಪುತ್ರ್ಪ ಜಕ್ಕಣ್ಣವರ, ಬಸವರಾಜ ಗೊಬ್ಬಿ, ಕೊಟ್ರೇಶ ಮಾಸ್ತರ ಬೆಳಗಲಿ, ಫಕ್ಕಿರ್ಪ ಕೊಂಡಾಯಿ, ಎನಜಿಂರ್ಗ ಎಂಟರ್ ಟೈನರ್ಸ ನ ಜ್ಯೋತಿ ಯರಗಂಬಳಿಮಠ, ದೇವಿಕಾ ರಾಚಣ್ಣವರ, ಲಕ್ಷ್ಮೀ ಬಾರ್ಕಿ ಸೇರಿದಂತೆ ಕಲಾವಿದರು ಇದ್ದರು, ಚೇತನ ಕಲಾಲ ಕಾರ್ಯಕ್ರಮ ನಿರ್ವಹಿಸಿದರು.
ಭಾಕ್ಸ ಸುದ್ದಿ : ಉತ್ತರ ಕರ್ನಾಟಕದ ಮಹಿಳೆಯರಿಗೋಸ್ಕರ ಒಂದು ಕಲಾ ತಂಡವನ್ನು ರಚನೆ ಮಾಡಿ ಆ ತಂಡದ ಮುಖಾಂತರ ನಮ್ಮ ಎಲ್ಲ ಕಲೆಗಳನ್ನು ಉಳಿಸಬೇಕು ಅದರ ಬಗ್ಗೆ ಹೋರಾಟ ಮಾಡಬೇಕು ಎಂದು ಶಿಗ್ಗಾವಿ ಕಲಾವಿದರ ನಾಡು ಆದ್ದರಿಂದ ಶಿಗ್ಗಾವಿಯಲ್ಲಿ ಸಂಘದ ಉದ್ಘಾಟನೆ ನೇರವೇರಿಸಿ ನಾಡಿಗೆ ಸಮರೆ್ಣ ಮಾಡಲಾಯಿತು ಇಗ ನಾಡಿನಾದ್ಯಂತ ಕಲಾ ಪ್ರದರ್ಶನ ನೇರವೇರಲಿದೆ.
ದೇವಿಕಾ ರಾಚಣ್ಣವರ ಎನಜಿಂರ್ಗ ಎಂಟರ್ ಟೈನರ್ಸ ಕಲಾವಿದೆ.