ತಾಳಿಕೋಟಿ

ಪಿಕೆಪಿಎಸ್ ನೂತನ ಅಧ್ಯಕ್ಷ ಮಾಡಗಿಗೆ ಸನ್ಮಾನ

ಪಿಕೆಪಿಎಸ್ ನೂತನ ಅಧ್ಯಕ್ಷ ಮಾಡಗಿಗೆ ಸನ್ಮಾನ

ತಾಳಿಕೋಟಿ 29:  ಇತ್ತೀಚಿಗೆ ನಡೆದ ತುಂಬಗಿ ಪಿಕೆಪಿಎಸ್ ಅಧ್ಯಕ್ಷರ ಚುನಾವಣೆಯಲ್ಲಿ ಆಯ್ಕೆಯಾದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಸಂ. ಮಾಡಗಿ ಇವರನ್ನು ನಾಲತವಾಡದ ಜೆ. ಎಸ್‌. ದೇಶಮುಖ ಅಭಿಮಾನಿ  ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಮಂಗಲ ಭವನದಲ್ಲಿ ನಡೆದ ತಾಳಿಕೋಟಿ ತಾಲೂಕಾ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರಿಗೆ ಈ ಸನ್ಮಾನ ನೀಡಲಾಯಿತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಡಗಿ ಅವರು ನಿಮ್ಮ ಈ ಗೌರವಕ್ಕೆ ನಾನು ಚಿರಋಣಿಯಾಗಿರುವೆ ನಮ್ಮೆಲ್ಲಾ ಕಾರ್ಯಕರ್ತರು ಪಕ್ಷ ಸಂಘಟನೆಗಾಗಿ ಟೊಂಕಕಟ್ಟಿ ನಿಲ್ಲಬೇಕಾಗಿದೆ ಇದು ಚುನಾವಣಾ ಪರ್ವವಾಗಿದೆ. ಕಾರ್ಯಕರ್ತರ ಕ್ರೀಯಾಶೀಲತೆಯೇ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾಗಲಿದೆ ಮುದ್ದೇಬಿಹಾಳ ಕ್ಷೇತ್ರಕ್ಕೆ ಪಕ್ಷದ ವರಿಸ್ಟರು ಯಾರಿಗೆ ಟಿಕೆಟ್ ಕೊಟ್ಟರು ಅವರ ಗೆಲುವಿಗಾಗಿ ಒಂದಾಗಿ ಪ್ರಯತ್ನಿಸೋಣ ಎಂದರು. 

ಈ ಸಂದರ್ಭದಲ್ಲಿ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಪಕ್ಷದ ಉಸ್ತುವಾರಿ ಡಾ. ಸಿ. ಎಸ್‌. ಸೋಲಾಪೂರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಬಿ. ಎಸ್‌. ಇಸಾಂಪೂರ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಮಾದೇವಿ ಪಾಟೀಲ, ಪುರಸಭೆ ಸದಸ್ಯೆ ಸೈದಾಬಿ ಚಿತ್ತರಗಿ, ಮುದ್ದೇಬಿಹಾಳ ತಾಲೂಕಾ ಅಧ್ಯಕ್ಷ ನಿಂಗನಗೌಡ ಪಾಟೀಲ, ನಗರ ಉಪಾಧ್ಯಕ್ಷ ಶರಣಗೌಡ ಪಾಟೀಲ, ಶ್ರೀಶೈಲ ಬಿಕ್ಷಾವತಿಮಠ, ರಫೀಕ ಕೊಡಗಲಿ, ಅಶೋಕ ಪಾಟೀಲ ವಿಠ್ಠಲಸಿಂಗ್ ಹಜೇರಿ, ಕಾಶೀನಾಥ ಪರಂಪೂರ, ನದೀಂಕಡು ಇದ್ದರು. 


ಸುದ್ದಿ ಓದಿ