ರೈತ ಸಂಘದ ಪದಾಧಿಕಾರಿಗಳ ನೇಮಕ
ತಾಳಿಕೋಟೆ10: ರೈತರ ಹೆಸರಲ್ಲಿ ಅಧಿಕಾರಕ್ಕೆ ಬರುವ ಸರಕಾರಗಳು ರೈತರನ್ನು ಮರೆತು ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿವೆ. ರೈತರನ್ನು ಯಾವ ಸರ್ಕಾರಗಳು ಉದ್ದಾರ ಮಾಡಿಲ್ಲ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿಯಾದ ಅರವಿಂದ ಕುಲಕರ್ಣಿ ಹೇಳಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಳಿಕೋಟೆ ನೂತನ ತಾಲೂಕಿನ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ನೇಮಕ ಸಮಾರಂಭದಲ್ಲಿ ಮಾತನಾಡಿದರು.
ರೈತರು ದೇಶದ ಬೆನ್ನಲುಬು ಎಂದು ಭಾಷಣ ಮಾಡುವ ರಾಜಕಾರಣಿಗಳು ರೈತರಿಗೆ ಯಾವ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ಮಾಡಿಲ್ಲ. ರೈತರಿಗೆ ಅವಶ್ಯಕವಾಗಿರುವ ವಿದ್ಯುತ್, ನೀರು ಹಾಗೂ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿದರೆ ಸಾಕು. ರೈತ ಉದ್ದಾರ ಆಗುತ್ತಾನೆ. ಈ ಬಗ್ಗೆ ಯಾವ ಸರ್ಕಾರಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ವಿಧಾನ ಸೌಧದಲ್ಲಿ ಕುಳಿತು ಆಳುತ್ತಿರುವ ಮೂರು ಪಕ್ಷಗಳು ಭಾಷಣಕ್ಕೆ ಮಾತ್ರ ಸೀಮಿತವಾಗಿವೆ. ಚುನಾವಣೆಯಲ್ಲಿ ಸಂದರ್ಭದಲ್ಲಿ ತಮ್ಮ ಮತಗಳನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ. ಮುಂದೆ ನಿಮ್ಮ ಸಮಸ್ಯೆಗೆ ರಾಜಕಾರಣಿಗಳು ಸ್ಪಂದಿಸುವದಿಲ್ಲ. ರೈತರು ನಷ್ಟದಿಂದ ಸತ್ತರೆ ದುಶ್ಚಟಗಳಿಂದ ಸತ್ತಿರಬಹುದು ಎಂದು ಉಢಾಫೆ ಉತ್ತರ ನೀಡಿದ ರಾಜಕಾರಣಿಗಳು ಇದ್ದಾರೆ. ನಮ್ಮ ಸಂಘಟನೆಯಿಂದ ಯಾವುದೇ ರೈತರಿಗೂ ಅನ್ಯಾಯವಾದರೂ ಸಹಿತ ನಾವು ಹೋರಾಟಕ್ಕೆ ಇಳಿಯಲು ಸಿದ್ದರಾಗಿರಬೇಕು ಎಂದರು.
ಅಖಂಡ ಕರ್ನಾಟಕ ರೈತ ಸಂಘದ ನೂತನವಾಗಿ ತಾಳಿಕೋಟೆ ತಾಲೂಕು ಘಟಕದ ಅಧ್ಯಕ್ಷರಾಗಿ ಬಾಲಪ್ಪಗೌಡ ಲಿಂಗದಳ್ಳಿ, ತಾಳಿಕೋಟೆ ತಾಲೂಕು ಘಟಕದ ಗೌರವಾಧ್ಯಕ್ಷರಾದ ಅಮೀತಗೌಡ ಪಾಟೀಲ, ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಅವರನ್ನು ನೇಮಕ ಮಾಡಿ ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಸದಾಶಿವ ಬರಟಗಿ, ರೈತ ಮುಖಂಡರಾದ ಮನಕೇರ್ಪ ತೇಲಗಿ, ವಿಠ್ಠಲ ಬಿರಾದಾರ, ರಾಜೇಸಾ ವಾಲಿಕಾರ, ಮಲ್ಲಪ್ಪ ಮಾಡ್ಯಾಳ, ಚನ್ನಬಸಪ್ಪ ಸಿಂಧೂರ, ಸಂಗಪ್ಪ ಪಡಸಲಗಿ, ಶೇಖಪ್ಪ ಸಜ್ಜನ, ಶಿವರೆಡ್ಡಿ ಐನಾಪೂರ, ನಿಂಗನಗೌಡ ಚೌದ್ರಿ, ಬಸವಂತ್ರಾಯ ಬಿರಾದಾರ, ಚನ್ನಪ್ಪಗೌಡ ಪಾಟೀಲ, ಸಂಗನಗೌಡ ಕೋಳೂ, ಸಿದ್ದನಗೌಡ ಬಿರಾದಾರ, ಬಸನಗೌಡ ಸಿಂಗನಹಳ್ಳಿ, ರುದ್ರಗೌಡ ಲಿಂಗದಳ್ಳಿ, ಯಲ್ಲಾಲಿಂಗ ಹೂಗಾರ, ಮಲಕನಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.