ಸರ್ಕಾರ ಶಿವದಾಸಿಮಯ್ಯನವರ ಜಯಂತಿಯನ್ನು ಆಚರಿಸಲು ಮನವಿ
ಬೈಲಹೊಂಗಲ 24: ಮನುಕುಲದ ಉದ್ಧಾರಕ್ಕಾಗಿ ಶ್ರಮಿಸಿದ ಶಿವಶಿಂಪಿ ಸಮಾಜದ ಕುಲಗುರುಗಳಾದ ಶಿವಶರಣ ಶಿವದಾಸಿಮಯ್ಯನವರ ಜಯಂತಿಯನ್ನು ಪ್ರತಿ ವರ್ಷ ಸರ್ಕಾರದಿಂದ ಆಚರಿಸಬೇಕೆಂದು ಆಗ್ರಹಿಸಿ ಶಿವಶಿಂಪಿ ಸಮಾಜದವರು ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು.
ಮನುಕುಲಕ್ಕೆ ಮಾನವೀಯ ಮೌಲ್ಯಗಳನ್ನು ಬೋಧಿಸಿ ಬಸವಾದಿ ಶರಣರ ಮುಂಚೆಯೇ ವಚನಗಳ ಮೂಲಕ ಧರ್ಮಪ್ರಜ್ಞೆಯೊಂದಿಗೆ ಧಾರ್ಮಿಕ ಆಚರಣೆಗಳೊಂದಿಗೆ ಸಮಾಜದ ಉದ್ಧಾರ ಬಯಸಿದ್ದ ಶಿವಶರಣ ಶಿವದಾಸಿಮಯ್ಯನವರ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಿ ಈ ಮೂಲಕ ಇಂದಿನ ಯುವ ಜನಾಂಗಕ್ಕೆ ಶಿವದಾಸಿಮಯ್ಯನವರ ತತ್ವಾದರ್ಶಗಳನ್ನು ತಿಳಿಸುವ ಕಾರ್ಯವಾಗಬೇಕು. ಆದಕಾರಣ ಪ್ರತಿವರ್ಷ ಶಿವರಾತ್ರಿ ಹಬ್ಬದಂದು ಶಿವದಾಸಿಮಯ್ಯನವರ ಜಯಂತಿ ಸರ್ಕಾರದಿಂದ ಆಚರಣೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಕುಮಾರ ರೇಶ್ಮಿ, ದೊಡ್ಡವೀರ್ಪ ಕಾದ್ರೊಳ್ಳಿ, ಕಿರಣ ಪಾಟೀಲ, ಮಹಾಂತೇಶ ರೇಶ್ಮಿ, ಖಜಾಂಚಿ ಜಗದೀಶ ಲೋಕಾಪುರ, ಶಿವಕುಮಾರ ಕುಬಸದ, ಅಶೋಕ ಹುಂಡೇಕರ, ರವಿ ಚಿವಟಗುಂಡಿ, ಬಸವರಾಜ ಕುಬಸದ, ವೀರಣ್ಣ ಚಿವಟಗುಂಡಿ, ಉಮೇಶ ಕಾದ್ರೊಳ್ಳಿ, ಸಂಗಪ್ಪ ಕಾದ್ರೊಳ್ಳಿ, ವಿರುಪಾಕ್ಷ ಕಾದ್ರೊಳ್ಳಿ, ಡಾ. ಎಂ ಎಸ್, ರಾಮಣ್ಣವರ, ಪ್ರಭು ರೇಶ್ಮಿ, ಸಣ್ಣವೀರ್ಪ ಕಾದ್ರೊಳ್ಳಿ, ಮಡಿವಾಳಪ್ಪ ಲೋಕಾಪುರ, ಕಲ್ಮೇಶ ಶರಣ್ಣವರ, ರಾಜಶೇಖರ ಕಾದ್ರೊಳ್ಳಿ, ಹರೀಶ ಕಾದ್ರೊಳ್ಳಿ, ಆನಂದ ಕುಬಸದ, ಮತ್ತಿತರರು ಇದ್ದರು.