ಬೆಳೆ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರಗೆ ಮನವಿ
ತಾಳಿಕೋಟಿ: ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ತಾಲೂಕಿನಾದ್ಯಾಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿ ಹೊಗಿದ್ದು ಶಿಘ್ರ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ರಿ) ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕಾ ಅಧ್ಯಕ್ಷ ಅಶೋಕ ಎಮ್ ತಳವಾರ ಅವರು ತಾಲೂಕಿನಾದ್ಯಾಂತ ಕಳೆದ ಒಂದುವರೆ ತಿಂಗಳಿನಿಂದ ಸುರಿದ ಬಾರಿ ಮಳೆಯಿಂದಾಗಿ ರೈತರು ತಮ್ಮ ಜಮೀನುಗಳಲ್ಲಿ ಬಿತ್ತಿದ ತೊಗರಿ, ಹತ್ತಿ, ಸೂರ್ಯಕಾಂತಿ, ಹಾಗೂ ಇತರ ಬೆಳೆಗಳು ಸಂಪೂರ್ಣ ಜಲಾವೃತಗೊಂಡು ಬೆಳೆಗಳು ನಾಶವಾಗಿವೆ ಇದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ ಆದ ಕಾರಣ ಅಧಿಕಾರಿಗಳು ಬೆಳೆ ಹಾನಿಯನ್ನು ಪರೀಶೀಲಿಸಿ ತಾಲೂಕಿನ ಪ್ರಬಾವಿತ ರೈತರಿಗೆ ಸರ್ಕಾರದಿಂದ ಆದಷ್ಟು ಬೇಗ ಪರಿಹಾರವನ್ನು ಬಿಡುಗಡೆಗೊಳಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾ ಅಧ್ಯಕ್ಷ ಅಶೋಕ ತಳವಾರ, ಗ್ರಾಮ ಘಟಕ ಅಧ್ಯಕ್ಷ ಜಂಬೂ ಚಿನಿವಾಲ, ಮಹಾದೇವ ಮಾದರ, ಅಭ್ಯಮ್ರಯ್ಯ ಗುರುಗಳು ಉಪಸ್ಥಿತರಿದ್ದರು.