ಕುಕನೂರ್

ಶಾಲಾ ಕೊಠಡಿ, ನಿವೇಶನ ಮಂಜೂರಾತಿಗಾಗಿ ಸಚಿವರಿಗೆ ಮನವಿ

ಶಾಲಾ ಕೊಠಡಿ, ನಿವೇಶನ ಮಂಜೂರಾತಿಗಾಗಿ ಸಚಿವರಿಗೆ ಮನವಿ

ಕುಕನೂರ 14:  ಪಟ್ಟಣದ ಅಂಬೇಡ್ಕರ್ ನಗರದ  ಪ್ರಾಥಮಿಕ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಹಾಗೂ ನಿವೇಶನಕ್ಕಾಗಿ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರಿಗೆ ಮನವಿ ಸಲ್ಲಿಸಲಾಯಿತು.   

ಮನವಿ ಸಲ್ಲಿಸಿ  ಎಸ್ ಡಿಎಂಸಿ ಅಧ್ಯಕ್ಷರಾದ ಹನುಮಂತ  ಆರುಬೆರಳಿನವರು ಮಾತನಾಡಿ ಅಂಬೇಡ್ಕರ್ ನಗರದ ಪ್ರಾಥಮಿಕ ಶಾಲೆಯು ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿಸಲಾಗುತ್ತದೆ ಆದರೆ ದಾಖಲಾತಿ 80 ಮಕ್ಕಳಿದ್ದರೂ ಕೊಠಡಿಗಳ ಸಂಖ್ಯೆ ಕಡಿಮೆಯಾಗಿವೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳ ಪಾಠ ಕಲಿಕೆಗೆ ತೀವ್ರ ತರನಾದ ಸಮಸ್ಯೆಯಾಗಿದೆ ಮತ್ತು ಇನ್ನಿತರ ಪಠ್ಯೇತರ ಚಟುವಟಿಕೆಗಳಿಗೆ ಮೈದಾನದ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಕ್ಕಳ ಪಠ್ಯೇತರ  ಚಟುವಟಿಕೆಗಳಿಗೆ  ಹಿನ್ನಡೆ ಉಂಟಾಗಲು ಕಾರಣವಾಗುತ್ತದೆ ಮಕ್ಕಳ ದಿನನಿತ್ಯದ ಪ್ರಾರ್ಥನೆಗೆ ಶೌಚಾಲಯಕ್ಕೆ ಕ್ರೀಡಾ ಆಟಗಳಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಸಚಿವರು ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿಗೆ ಮತ್ತು ಆಟದ ಮೈದಾನಕ್ಕೆ ನಿವೇಶನವನ್ನು ಒದಗಿಸಿ ಕೊಡಬೇಕೆಂದು ಹೇಳಿದರು.  

ಈ ಸಂದರ್ಭದಲ್ಲಿ  ಪ್ರಶಾಂತ್ ಆರುಬೆರಳಿನ  ನಾಗರಾಜ ಭಜಂತ್ರಿ ನಿಂಗರಾಜ್ ಅಣ್ಣಿಗೇರಿ ಕನ್ನಡ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಲಕ್ಷ್ಮಣ ಕಾಳಿ ಚಂದ್ರಪ್ಪ ಆರುಬೆರಳಿನ ಅಂದಪ್ಪ ಭಂಡಾರಿ ಅಭಿಷೇಕ್ ಗೊರ್ಲೆಕೊಪ್ಪ ನಾಗರಾಜ ಅಣ್ಣಿಗೇರಿ ಸಂತೋಷ್ ಭಂಡಾರಿ ನಿಂಗರಾಜ್ ಗೊರ್ಲೆಕೊಪ್ಪ ಇನ್ನಿತರರು ಇದ್ದರು.

ಸುದ್ದಿ ಓದಿ