ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಮನವಿ
ತಾಳಿಕೋಟೆ20: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷ ಕಿರಣ ಮತ್ತು ಅಂಬುಲೆನ್ಸ್ ಸೇವೆ ಇದ್ದರೂ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕ ಅಂಬೇಡ್ಕರ್ ಸೇನೆಯ ವತಿಯಿಂದ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ತಾಳಿಕೋಟೆ ಪಟ್ಟಣವು ತಾಲೂಕು ಕೇಂದ್ರವಾಗಿ 5 ವರ್ಷಗಳು ಗತಿಸಿದರು ಸಹಿತ ಇನ್ನು ತಾಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಎರಿಸಿಲ್ಲ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ಷಕಿರಣ ಯಂತ್ರ ಮತ್ತು ತಪಾಸಣೆ ಅಧಿಕಾರಿಗಳು ಇದ್ದು ಸುಮಾರು ವರ್ಷಗಳಾದರೂ ಇದುವರೆಗೂ ಕೂಡ ರಿಪೇರಿ ಇದೆ ಎಂದು ಹೇಳುತ್ತಾ ಯಾವುದೇ ಕ್ಷ ಕಿರಣಗಳನ್ನು ತೆಗೆಯುವುದಿಲ್ಲಾ. ಕ್ಷಕಿರಣಕ್ಕಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸರಕಾರದ ಪುಕ್ಸಟ್ಟೆ ಸಂಬಳ ಪಡೆಯುತ್ತಿದ್ದು ಕೂಡಲೇ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆರೊಗ್ಯ ಕೇಂದ್ರದಲ್ಲಿ ಅಂಬುಲೆನ್ಸ್ ವಾಹನ ಇದ್ದರು ಡೀಸೆಲ್ ಹಾಕಿದರೆ ಮಾತ್ರ ಮುಂದಿನ ಸೇವೆಗೆ ಲಭ್ಯವಿರುತ್ತದೆ ಎಂದು ಹೇಳುತ್ತಾರೆ. ಡಿಸೇಲ್ ಹಾಕಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಬಡವರಿಗೆ ಅಂತಾ ಇರುವ ಉಚಿತ ಅಂಬುಲೇನ್ಸ್ದಿಂದ ಹಣ ವಸೂಲಾತಿ ಮಾಡುವದು ಏಕೆ. ತಾಲೂಕು ಆಡಳಿತ ಅಧಿಕಾರಿಗಳು ಇಲ್ಲದಿರುವುದರಿಂದ ಇಲ್ಲಿನ ಕೆಳವರ್ಗದ ಅಧಿಕಾರಿಗಳು ಶೌಚಾಲಯದ ಸಮರ್ಕ ವ್ಯವಸ್ಥೆ ಸರಿಯಾಗಿ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಇನ್ನೂ ಹತ್ತು ಹಲವಾರು ಸಮಸ್ಯೆಗಳು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇದ್ದು ಜಿಲ್ಲಾಧಿಕಾರಿಗಳೇ ಖುದ್ದಾಗಿ ಭೇಟಿ ನೀಡಿ ಇಲ್ಲಿರುವ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೇ ಸಾರ್ವಜನಿಕರೊಂದಿಗೆ ಕೂಡಿಕೊಂಡು ಹೋರಾಟ ಮಾಡಬೇಆಗುತ್ತದೆ ಎಂದು ಮನವಿಯಲ್ಲಿ ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ ತಹಶೀಲ್ದಾರ ಶ್ರೀಧರ ಗೋಟೂರ, ಮಕ್ಕಳ ತಜ್ಞ ಡಾ.ಆಯ್.ಬಿ.ತಳ್ಳೋಳ್ಳಿ ಮನವಿಯನ್ನು ಸ್ವಿಕರಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ ಸೇನೆಯ ತಾಲೂಕಾಧ್ಯಕ್ಷ ಬಸ್ಸು.ಈ.ಕಟ್ಟಿಮನಿ, ಕಾರ್ಯದರ್ಶಿ ಗೋಪಾಲ ಕಟ್ಟಿಮನಿ, ಪರಶುರಾಮ್ ತಳವಾರ. ದುರ್ಗೇಶ ಮಾದರ, ಕಾಶಿನಾಥ ಕಟ್ಟಿಮನಿ, ಪರಶುರಾಮ ನಾಲತವಾಡ, ಮಡಿವಾಳಪ್ಪ ಹಳೆಮನೆ, ಯಮನಪ್ಪ ನಾಯ್ಕೋಡಿ, ಬಸವರಾಜ ಚಲವಾದಿ, ಯಮನಪ್ಪ ಗಡಿಸೋಮನಾಳ, ತಿಪ್ಪಣ್ಣ ಮಾಳನೂರು, ಭೀಮಶಂಕರ್ ಸೋನೋನೆ ಸೇರಿದಂತೆ ಇತರರು ಇದ್ದರು.