ಹಗರಿಬೊಮ್ಮನಹಳ್ಳಿ

ಜಯ ಕರ್ನಾಟಕ ಸಂಘಟನೆಯಿಂದ ಶಿಶು ಅಭಿವೃದ್ಧಿ ಅಧಿಕಾರಿಗೆ ಮನವಿ

ಜಯ ಕರ್ನಾಟಕ ಸಂಘಟನೆಯಿಂದ ಶಿಶು ಅಭಿವೃದ್ಧಿ ಅಧಿಕಾರಿಗೆ ಮನವಿ

ಹಗರಿಬೊಮ್ಮನಹಳ್ಳಿ 20: ತಾಲೂಕಿನ ಶ್ರೀರಾಮನಗರ (ಕೋಗಳಿತಾಂಡ)ಗ್ರಾಮದಲ್ಲಿನ ಮೂರು ಅಂಗನವಾಡಿ ಕೇಂದ್ರಗಳಲ್ಲಿನ ಕಾರ್ಯಕರ್ತೆಯರ ಹಾಗೂ ಸಹಾಯಕಿರ ಮೇಲೆ ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕವು ಶಿಶು ಅಭಿವೃಧ್ಧಿ ಅಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು. 

ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ ಮನವಿ ಪತ್ರವನ್ನು ನೀಡಿ ಮಾತನಾಡಿ ಗ್ರಾಮದಲ್ಲಿನ ಮೂರು ಅಂಗನವಾಡಿ ಕೇಂದ್ರಗಳಲ್ಲಿ ಸರಕಾರದಿಂದ ನೀಡುವ ಅಹಾರ ಪದಾರ್ಥಗಳನ್ನು ಫಲಾನುಭವಿಗಳ ಕೈಸೇರಿದೇ ಮದ್ಯವರ್ತಿಗಳ ಪಾಲಾಗುತ್ತಿದ್ದು, ಇದನ್ನು ಪ್ರಶ್ನಿಸಿದವರಿಗೆ ದುರ್ನಡತೆಯಿಂದ ವರ್ತಿಸುತ್ತಿದ್ದು ಕೂಡಲೇ ಸಂಭಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. 

ಈ ವಿಷಯವಾಗಿ ಗ್ರಾಮದ ಸಾರ್ವಜನಿಕರು ಗ್ರಾಮದ ಜನಪ್ರತಿನಿಧಿಗಳಿಗೆ ಹಾಗೂ ಜಯಕರ್ನಾಟಕ ಸಂಘಕ್ಕೆ ತಿಳಿಸಿದ್ದು ಈ ವಿಷಯವನ್ನು ಸಂಘದಿಂದ ಸಂಭಂಧಿಸಿದ ಅಧಿಕಾರಿಗಳ ಗಮನಕ್ಕೂ ತಂದಿದ್ದರು, ಯಾವುದೇ ಕ್ರಮ ಕೈಗೊಳ್ಳದಿರುವುದು, ಫಲಾನುಭವಿಗಳ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಮತ್ತು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸೆರಿದಂತೆ ಸಹಾಯಕಿಯರು ಮೂಲತಹ ಸಂಭಧಿಗಳಾಗಿದ್ದು, ಕೂಡಲೇ ಬೇರೆಡೆ ವರ್ಗವಣೆಗೊಳಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಮೂರು ಕೇಂದ್ರಗಳಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. 

ಈ ಸಂಧರ್ಭದಲ್ಲಿ ಸಂಘದ ಖಜಾಂಚಿ ಸಂತೋಷ ನಾಯ್ಕ್‌, ಸಂಚಾಲಕ ಮಂಜುನಾಥ್, ಅಂಗವಿಕಲರ ತಾಲೂಕಾಧ್ಯಕ್ಷ ಉಮೇಶ್ ಕೆ, ಸದಸ್ಯ ಲಿಂಗರಾಜ, ನಾಗರಾಜ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ