ಸಾವಿತ್ರಿಭಾಯಿ ಫುಲೆ ಜಯಂತಿಯನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಲು ಮನವಿ
ಬ್ಯಾಡಗಿ- ಸಾವಿತ್ರಿಭಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿದ್ದು ಪ್ರತಿ ವರ್ಷ ಜನೇವರಿ 3 ನೇ ತಾರೀಖಿನಂದು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಲು ರಾಜ್ಯ ಸರಕಾರ ಸೂಕ್ತವಾದ ವ್ಯವಸ್ಥೆ ಮಾಡುವಂತೆ ಕೋರಿ ರಾಜ್ಯ ಸಾವಿತ್ರಿಭಾಯಿ ಫುಲೆ ಶಿಕ್ಷಕಿಯರ ಸಂಘದ ಪದಾಧಿಕಾರಿಗಳು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.
ಸತಿ ಸಹಗಮನ, ಬಾಲ್ಯ ವಿವಾಹ, ಕೇಶ ಮುಂಡನ, ದೇವದಾಸಿ ಇಂತಹ ಅನಿಷ್ಟ ಪಧ್ದತಿಗಳ ವಿರುಧ್ದ ಸಾವಿತ್ರಿಭಾಯಿ ಹೋರಾಟ ಮಾಡುವ ಮೂಲಕ ಸಮಾಜ ಸುಧಾರಣೆಗೆ ಯತ್ನಿಸಿದ್ದಾರೆ. ಇಂತಹ ಮಾತೆಯಾದ ಸಾವಿತ್ರಿಭಾಯಿವರ ಜನ್ಮ ದಿನವಾದ ಜನೇವರಿ 3 ರಂದು ರಾಜ್ಯಾಧ್ಯಂತ ಮಹಿಳಾ ಶಿಕ್ಷಕಿಯರ ದಿನಾಚರಣೆ ಆಚರಿಸಬೇಕೆಂದು ಅಗ್ರಹಿಸಿ ರಾಜ್ಯ ಸಂಘದ ಸಂಘಟನಾ ಕಾರ್ಯದಶರ್ಿ ಶಮಾ ಪಾಟೀಲ ಹಾಗೂ ಶೋಭಾ ನೋಟದ ಮನವಿ ಸಲ್ಲಿಸಿದರು.