ರಾಣೇಬೆನ್ನೂರಲಿ ವಿವಿ ಸ್ಥಾಪನೆಗೆ ಒತ್ತಾಯಿಸಿ ಶಾಸಕರಿಗೆ ಮನವಿ
ರಾಣೆಬೆನ್ನೂರು 23: ರಾಜ್ಯದ ಜಿಲ್ಲೆಗೊಂದರಂತೆ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ, ವಿಶ್ವವಿದ್ಯಾಲಯ ಹೋರಾಟ ಸಮಿತಿಯ ಮುಖಂಡರು, ವಿ.ವಿ. ಸ್ಥಾಪನೆಯು, ಹಾವೇರಿ ಜಿಲ್ಲೆಗೆ ಮೀಸಲಿಡದೆ, ಜಿಲ್ಲೆಯಲ್ಲಿ ಅತಿ ದೊಡ್ಡದಾದ ನಗರ, ವಾಣಿಜ್ಯ ಉತ್ಪಾದನೆಗೆ ಹೆಸರಾಗಿರುವ ವಾಣಿಜ್ಯ ನಗರಿ ರಾಣೆಬೆನ್ನೂರು ನಗರ, ಅಥವಾ ನಗರ ಸುತ್ತ ವ್ಯಾಪ್ತಿಯಲ್ಲಿ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಳೆದೊಂದು ತಿಂಗಳುಗಳಿಂದ, ವಿ.ವಿ. ಹೋರಾಟ ಸಮಿತಿಯ ಮುಖಂಡರು, ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಉನ್ನತ ಶಿಕ್ಷಣ ಸಚಿವರಿಗೆ, ಸಂಬಂಧಿಸಿದ ಇಲಾಖೆಗೆ, ಉಸ್ತುವಾರಿ ಸಚಿವರಿಗೆ, ಕೃಷಿ ಸಚಿವರಿಗೆ ಸೇರಿದಂತೆ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದ್ದಾರೆ. ಮನವಿ ಸಲ್ಲಿಕೆ ಮಂಚೂಣಿಯಲ್ಲಿ ಅಧ್ಯಕ್ಷ ಬಸವರಾಜ ಪಾಟೀಲ್, ಕಾರ್ಯದರ್ಶಿ ಶಿವಪ್ಪ ಗುರಿಕಾರ್, ಗಣ್ಯರಾದ, ಜಿಜಿ ಹೊಟ್ಟಿಗೌಡ್ರ,ಎಸ್. ಎನ್. ಎಲಿ, ವಿ.ವಿ ಹರಪನಹಳ್ಳಿ, ಶಿವಾನಂದ ಸಂಗಾಪುರ, ಗೀತಾ ಜಂಬಿಗಿ, ಸೇರಿದಂತೆ ಹೋರಾಟ ಸಮಿತಿಯ ವರ್ತಕರು, ಪ್ರಾಧ್ಯಾಪಕರು, ಉಪನ್ಯಾಸಕರು, ಪಾಲ್ಗೊಂಡಿದ್ದರು.