ವಸತಿ ಸೌಲಭ್ಯಕ್ಕಾಗಿ ಶಾಸಕರಿಗೆ ಮನವಿ
ರಾಣೀಬೆನ್ನೂರ 21: ನಗರದ ನ್ಯೂ ಕಾರ್ ಸ್ಟ್ಯಾಂಡ್ ಚಾಲಕರು ಮತ್ತು ಮಾಲೀಕರ ಸಂಘದ ಬಹುತೇಕ ಸದಸ್ಯರು ಮತ್ತು ಸಂಘದ ಅಡಿಯಲ್ಲಿರುವ ಚಾಲಕರು ವಾಸಿಸಲು ನಿವೇಶನ ಮತ್ತು ವಸತಿಯಿಲ್ಲದೆ ಜೀವನ ನಿರ್ವಹಿಸಲು ಪರದಾಡುತ್ತಿದ್ದಾರೆ. ಸರ್ಕಾರದ ವಸತಿ ಯೋಜನೆ ಅಥವಾ ನಗರ ಸಭೆಯ ಆಶ್ರಯ ಯೋಜನೆಯಲ್ಲಿ ವಸತಿ ಕಲ್ಪಿಸಲು ಒತ್ತಾಯಿಸಿ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸಂಘದ ಅಧ್ಯಕ್ಷ ಅಲ್ತಾಫ ನೀಲಗಾರ ಮಾತನಾಡಿ, ಸಂಘ 2010ರಂದು ನೋಂದಾವಣಿಯಾಗಿದ್ದು, 30-40 ವರ್ಷಗಳಿಂದ ಚಾಲಕರಾಗಿ ಜನರ ಸೇವೆಯಲ್ಲಿ ತೊಡಗಿದ್ದಾರೆ. ಚಾಲಕರ ಜೀವನ ಬಹಳ ಕಷ್ಟಕರವಾಗಿದ್ದು ಬಹುತೇಕ ಚಾಲಕರು ಸ್ವಂತ ನಿವೇಶನ ಹಾಗೂ ಮನೆ ಇಲ್ಲದೇ ಪರದಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಶಾಸಕರು ಈ ಬಗ್ಗೆ ತೀವ್ರವಾಗಿ ಗಮನಹರಿಸಿ ವಸತಿರಹಿತ ಚಾಲಕರಿಗೆ ಸ್ವಂತ ಮನೆ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಲ್ತಾಫ ನೀಲಗಾರ, ಕಾರ್ಯದರ್ಶಿ ನಜರುಲ್ಲಾಖಾನ್ ಪಠಾಣ, ಸದಸ್ಯರುಗಳಾದ ಶಾನು ನೆಗಳೂರ, ಅಯೂಬ್ಖಾನ್ ಖಾಜಿ, ಇಸಾಕ್ ಮುಲ್ಲಾ, ಮಂಜುನಾಥ ನಾಯಕ್, ಅಮಾನುಲ್ಲಾಖಾನ್ ಪಠಾಣ, ಶಿರಾಜ್ ಅಹ್ಮದ್ ನಾರಂಗಿ ಸೇರಿದಂತೆ ಸಂಘದ ಮತ್ತಿತರೆ ಪದಾಧಿಕಾರಿಗಳು ಚಾಲಕರು ಮತ್ತು ಮಾಲಕರು ಪಾಲ್ಗೊಂಡಿದ್ದರು.