ಅಥಣಿ

ಲಕ್ಷ್ಮಣ ಸವದಿ ಸ್ಥಾನ ಮುಂದುವರೆಸಲು ಆಗ್ರಹ

ಲಕ್ಷ್ಮಣ ಸವದಿ ಸ್ಥಾನ ಮುಂದುವರೆಸಲು ಆಗ್ರಹ

ಅಥಣಿ 31: ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಇವರಿಗೆ ಸಚಿವ ಸ್ಥಾನ ನೀಡಿ ಉಪಮುಖ್ಯಮಂತ್ರಿ ಸ್ಥಾನವನ್ನೂ ಕೂಡ ಮುಂದುವರೆಸಬೇಕು ಎಂದು ಬಿಜೆಪಿ ಮುಖಂಡ ಬಾಳಾಸಾಹೇಬಗೌಡ ಪಾಟೀಲ (ಕಿರಣಗಿ) ಬಿಜೆಪಿ ಪಕ್ಷದ ವರೀಷ್ಠರನ್ನು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಆಗ್ರಹಿಸಿದ್ದಾರೆ.  

ಅಥಣಿ ತಾಲೂಕಿನಲ್ಲಿ ​‍್ರ​‍್ರಥಮ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಲಕ್ಷ್ಮಣ ಸವದಿ, ಅಂದಿನಿಂದ ಇಲ್ಲಿಯವರೆಗೂ ಪಕ್ಷದ ನೇತೃತ್ವವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯುರ​‍್ಪನವರ ಸರಕಾರದಲ್ಲಿ ಸಾರಿಗೆ ಜೊತೆಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಅಷ್ಟೇ ಅಲ್ಲ ರಾಜ್ಯದಲ್ಲಿ ಅನೇಕ ಜನಪರ ಯೋಜನೆಗಳನ್ನೂ ಕೂಡ ಅನುಷ್ಠಾನಗೊಳಿಸಿದ್ದಾರೆ ಎಂದ ಅವರು ಅಥಣಿ ಮತಕ್ಷೇತ್ರದಲ್ಲಿ ಪ್ರಥಮವಾಗಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದಲೇ ಇಂದು ಬರಗಾಲದ ದುಃಸ್ಥಿತಿಯಿಂದ ತಾಲೂಕಿನ ಜನತೆ ಹೊರಗೆ ಬಂದಿದ್ದಾರೆ ಎಂದರು.  

ಇಂತಹ ಅಪರೂಪದ ರಾಜಕಾರಣಿಗೆ ಬೊಮ್ಮಾಯಿ ಸರಕಾರದಲ್ಲೂ ಅವರಿಗೆ ಸಚಿವ ಸ್ಥಾನ ಜೊತೆಗೆ ಉಪ ಮುಖ್ಯಮಂತ್ರಿ ಸ್ಥಾನವನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.  



ಸುದ್ದಿ ಓದಿ