ಯರಗಟ್ಟಿ

ಅಕ್ರಮ ಚಟುವಟಿಕೆಗಳ ತಡೆಗೆ ಕರವೇ ಸಿಪಿಐಗೆ ಮನವಿ

ಅಕ್ರಮ ಚಟುವಟಿಕೆಗಳ ತಡೆಗೆ ಕರವೇ ಸಿಪಿಐಗೆ ಮನವಿ

ಯರಗಟ್ಟಿ 18: ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ನಾಗರಿಕರಿಂದ ಮುರಗೋಡ ಆರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವಂತೆ ಮುರಗೋಡ ಸಿಪಿಐ ಆಯ್‌. ಎಂ. ಮಠಪತಿಯವರಗೆ ಮನವಿ ಸಲ್ಲಿದರು.    

ಮನವಿ ಸಲ್ಲಿಸಿ ಮಾತನಾಡಿದ ಕರವೇ ಅಧ್ಯಕ್ಷ ಉದಯ ಚಿಕ್ಖನ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಆರಕ್ಷಕ ಠಾಣೆ (ಅಪರಾಧ ತಡೆ) ಎಂದು ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿರುತ್ತದೆ. ಈ ಠಾಣೆಗೆ ಹೊಂದಿಕೊಂಡಂತೆ ಒಂದು (ಉಪ ಪೊಲೀಸ್ ಠಾಣೆ) ಹಾಗೂ ಸುಮಾರು ಹಳ್ಳಿಗಳನ್ನು ಕೂಡ ಹೊಂದಿರುತ್ತದೆ. 

ಮುರಗೋಡ ಆರಕ್ಷಕ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸುಮಾರು ಹಳ್ಳಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದು ಹಾಗೂ ಜುಜಾಟ ಆಡುತ್ತಿದ್ದು ಮತ್ತು ಮಟಕಾ (ಒಸಿ) ಬರೆದುಕೊಳ್ಳುವವರ ಹಾವಳಿ ಜಾಸ್ತಿಯಾಗಿದ್ದು ಮತ್ತು ಯರಗಟ್ಟಿ ಪಟ್ಟಣದ ಲಾಜ್ಡ್‌ಗಳಲ್ಲಿ ವೇಶವಾಟಿಕೆಗಳಂತಹ ಚಟುವಟಿಕೆಗಳು ಮೇಲ್ನೋಟಕ್ಕೆ ಕಂಡು ಬರುತ್ತಿವೆ ಈ ಎಲ್ಲಾ ಮೇಲಿನ ಅಕ್ರಮ ಚಟುವಟಿಕೆಗಳಿಂದ ಸಾವಿರಾರು ಯುವಕರು ಅವರ ಕುಟುಂಬಗಳು ಹಾಳಾಗಿದ್ದು ಇರುತ್ತದೆ ಊರಿನಲ್ಲಿ ಯಾವುದಾದರೂ ಸಭೆ ಸಮಾರಂಭಗಳು ಇದ್ದರೆ ರಾತ್ರಿ ಹೊತ್ತಿನಲ್ಲಿ ಬೇಕಾಬಿಟ್ಟಿಯಾಗಿ ಸರಾಯಿ ಕುಡಿದು ಕಾರ್ಯಕ್ರಮಗಳನ್ನು ಹಾಳು ಮಾಡುವುದು ಊರಿನ ಘನತೆ ಗೌರವವನ್ನು ಹಾಳು ಮಾಡುವಂತಹ ಕೆಲಸವಾಗುತ್ತಿದ್ದು ಇದರಿಂದ ನೋವು ಪಡುವಂತ ಕೆಲಸವಾಗುತ್ತಿದೆ. 

ಮುರಗೋಡ ಆರಕ್ಷಕ ಠಾಣಾಧಿಕಾರಿಗಳಾದ  ತಾವು ಈ ಮೇಲೆ ಕಾಣಿಸಿದ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡದೇ ಹೋದಲ್ಲಿ ನಿಮ್ಮ ಮೇಲಾಧಿಕಾರಿಗಳಿಗೆ ಮನವಿ ನೀಡಿ ಮುರಗೋಡ ಸಂಪೂರ್ಣ ಬಂದ್  ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಕರವೇ ತಾಲೂಕಾಧ್ಯಕ್ಷ ಉದಯ ಚಿಕ್ಕಣ್ಣವರ ಆಗ್ರಹಿಸಿದರು. 

ದೀಪಕ ಬಾಳಿಕಾಯಿ, ಅಭಿಷೇಕ ಗುರಣ್ಣವರ, ಪೃಥ್ವಿರಾಜ ಸೂರ್ಯವಂಶಿ, ಪ್ರಶಾಂತ ಕಿತ್ತೂರ, ಮಣಿಕಂಠ ಕುಂಬಾರ, ಬಸವರಾಜ ಯಕ್ಕಾಜನವರ, ವಿನೋದ ಬೆಳಗಾವಿ, ಶಿವರಾಜ ಭಜಂತ್ರಿ, ಮಲ್ಲೇಶ ಮಲ್ಲಿಕಾರ್ಜುನವರ, ಶೇಖರ ಸಣಕಲ್, ಹನಮಂತ ಬೂದಗಟ್ಟಿ, ಪ್ರವೀನ ನರಗುಂದ, ಬಸವರಾಜ ಪೂಜೇರ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ