ಶಿಗ್ಗಾವ್

ವಿದ್ಯುತ್ ಸರಬರಾಜು ಘಟಕ ಸ್ಥಾಪಿಸದಂತೆ ಆಗ್ರಹ

ವಿದ್ಯುತ್ ಸರಬರಾಜು ಘಟಕ ಸ್ಥಾಪಿಸದಂತೆ ಆಗ್ರಹ

ಶಿಗ್ಗಾವಿ 05: ತಾಲೂಕಿನ ಗಂಜೀಗಟ್ಟಿ ಗ್ರಾಮಸ್ಥರು ಗ್ರಾಮದಲ್ಲಿಯ ಹುಬ್ಬಳ್ಳಿಯ 11ಕೆವಿ ವಿದ್ಯುತ್ ಸರಬರಾಜು ಘಟಕ ಸ್ಥಾಪಿಸದಂತೆ ತಡೆ ಹಿಡಿಯಬೇಕೆಂದು ಆಗ್ರಹಿಸಿ ತಹಶೀಲ್ದಾರ ಮಂಜುನಾಥ ಮುನ್ನೋಳಿಯವರಿಗೆ ಮನವಿ ಅರ​‍್ಿಸಿದರು. 

ಗಂಜೀಗಟ್ಟಿ ಗ್ರಾಮದ ಮೂಪತ್ತ ಘರಾಯಣದ ಜಮೀನು ರಿಸಂ 71 ಕ್ಷೇತ್ರ, 14 ಎಕರೆ 28 ಗುಂಟೆ ಜಮೀನು ಇದ್ದು ಈ ಜಮೀನಿನಲ್ಲಿ ನಮ್ಮ ಗ್ರಾಮದ ಬಡ ಕೂಲಿ ಕಾರ್ಮಿಕರು ವಸತಿ ರಹಿತರಿದ್ದು ಅವರಿಗೆ ವಾಸದ ಮನೆಯ ಉದ್ದೇಶಕ್ಕಾಗಿ ಮತ್ತು ಬೇಸಿಗೆ ಕಾಲದಲ್ಲಿ ರೈತ ಬಾಂಧವರು ತಮ್ಮ ಫಸಲನ್ನು ಒಕ್ಕಲು ಮಾಡಿಕೊಳ್ಳಲಿಕ್ಕೆ ಕಣ ಕಟ್ಟಿ ಉದ್ದೇಶಕ್ಕಾಗಿ ಹಾಗೂ ಗ್ರಾಮದ ರೈತರಲ್ಲಿ ಸುಮಾರ 800-900 ರಷ್ಟು ದನಕರುಗಳಿದ್ದು, ಕುರಿಮೇಕೆಗಳಿದ್ದು ಮೇಯಲು ಈ ಸ್ಥಳ ಅವಶ್ಯವಿರುತ್ತದೆ ಇದನ್ನ ಹೊರತು ಪಡಿಸಿದರೇ ಜಾನುವಾರುಗಳು ಮೇಯಲು ಬೇರಾವುದೇ ಜಮೀನು ಇರವುದಿಲ್ಲ, ಈ ಜಮೀನನ್ನು ಅನಧೀಕೃತರವಾಗಿ ಹುಬ್ಬಳ್ಳಿ 11ಕೆವಿ ವಿದ್ಯುತ್ ಸರಬರಾಜು ಘಟಕ ಸ್ಥಾಪಿಸಲು ಮುಂದಾಗಿದೆ ಇದರಿಂದ ಅಲ್ಲಿರುವ ಮೋರಾರ್ಜಿ ಶಾಲಾ ಮಕ್ಕಳಿಗೂ ಸಹಿತ ಸಂಭವವಿದ್ದು ಘಟಕ ಸ್ಥಾಪಿಸಲು ನಮ್ಮ ಗ್ರಾಮಸ್ಥರದು ತಕರಾರು ಇದೆ ಈ ಸ್ಥಳವನ್ನ ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಮನವಿ ಮಾಡಿ ಒತ್ತಾಯಿಸಿದರು. 

ಕಲ್ಲಪ್ಪ ಮಾರನಬೀಡ, ಚನ್ನಪ್ಪ ಚಿನ್ನಪ್ಪನವರ, ಬಸವರಾಜ ದಾಸರ, ಶಿವಪ್ಪ ಹೊಂಡದಕಟ್ಟಿ, ಸದಾಶಿವಪ್ಪ ಹಡಪದ, ಬಸವರಾಜ ತೆಂಬದಮನಿ, ಶಂಕ್ರ​‍್ಪ ಮಾರನಬೀಡ, ನಿಂಗಪ್ಪ ಹರಿಜನ, ಬಸವರಾಜ ಸವನೂರ, ಶಿವಪ್ಪ ಮರಿದ್ಯಾಮಣ್ಣವರ, ಪ್ರವೀಣ ಹೊಂಡದಕಟ್ಟಿ, ಗಂಗವ್ವ ಹರಿಗೊಂಡ, ಕಮಲವ್ವ ಮಾರಬೀಡ, ದ್ಯಾವಪ್ಪ ಕುರಡೀಕೇರಿ, ಪಕ್ಕೀರೇಶ ವಾಲ್ಮೀಕಿ ಮುಂತಾದವರು ಇದ್ದರು. 


ಸುದ್ದಿ ಓದಿ