ಲೈನ್ಮ್ಯಾನ್ ಪೂಜಾರಿ, ದಳವಾಯಿ ಅಮಾನತಗೆ ಆಗ್ರಹಿಸಿ ಮನವಿ
ಜಮಖಂಡಿ 20: ತಾಲೂಕಿನ ಶಿರಗುಪ್ಪಿ ಗ್ರಾಮದ ಹೆಸ್ಕಾಂ ಲೈನ್ಮ್ಯಾನ್ ಗೋವಿಂದ ಪೂಜಾರಿ ಹಾಗೂ ಬರಮಪ್ಪ ದಳವಾಯಿ ಅವರನ್ನು ಅಮಾನತುಗೊಳಿಸಬೇಕೆಂದು ದುಂಡಪ್ಪ ಸಿದ್ದಪ್ಪ ತಳವಾರ ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹೆಸ್ಕಾಂ ಅಧಿಕಾರಿ ವಿಶಾಲ ಧರೇಪಗೋಳ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದುಂಡಪ್ಪ ಸಿದ್ದಪ್ಪ ತಳವಾರ ಅವರು, ನಮ್ಮ ಮನೆಯ ಮೀಟರ್ ಸಂಖ್ಯೆ ಆರ್,ಆರ್, ಸಂಖ್ಯೆ ಖ18195 ಆಗಿದ್ದು ಗ್ರಾಹಕರ ಹೆಸರು ಸಿದ್ದಪ್ಪ ಭೀಮಪ್ಪ ತಳವಾರ ಇವರಿಗೆ ಸಂಬಂಧಿಸಿದ ಈ ಮೀಟರ್ಗೆ ಫೆ, 2. 2024 ರಂದು 2000 ರೂ,ಗಳ ಹಣವನ್ನು ಬಿಲ್ ಕಲೆಕ್ಟರ್ ಅದ ಬರಮಪ್ಪ ದಳವಾಯಿ ಅವರಿಗೆ ಕೊಟ್ಟಿದ್ದು. ಫೋನ್ ಪೇ ಮೂಲಕ ಹಾಗೂ 1000 ರೂಗಳನ್ನು ಹಣವನ್ನು ಅವರ ಕೈಯಲ್ಲಿ ಕೊಟ್ಟಿದ್ದು. ಸೆ. 4, 2024 ರಂದು ಮತ್ತೆ 2000 ರೂ,ಗಳನ್ನು ಮತ್ತೆ ಫೋನ್ ಪೇ ಮೂಲಕ ಹಣವನ್ನು ಕೊಟ್ಟಿರುತ್ತೇವೆ ಒಟ್ಟು 5000 ರೂಪಾಯಿಗಳನ್ನು ಹಣವನ್ನು ಬಿಲ್ ಕಲೆಕ್ಟರ್ ಆದ ಬರಮಪ್ಪ ದಳವಾಯಿ ಅವರಿಗೆ ಬಿಲ್ ಪಾವತಿ ಮಾಡು ಎಂದು ಕೊಟ್ಟಿರುತ್ತೇವೆ. ಆದರೆ ಅವರು ಹಾಗೂ ಲೈನ್ಮ್ಯಾನ್ ಗೋವಿಂದ ಪೂಜಾರಿ ಅವರು ಸೇರಿ ಹಣವನ್ನು ದುರುಪಯೋಗ ಮಾಡಿಕೊಂಡು ಅದನ್ನು ಸರ್ಕಾರಕ್ಕೆ ಪಾವತಿ ಮಾಡದೆ ತಮ್ಮ ಸ್ವಂತ ಖರ್ಚಿಗೆ ಉಪಯೋಗಿಸಿಕೊಂಡಿದ್ದಾರೆ. ಹಣವನ್ನು ಕೊಟ್ಟಿದ್ದು ನಾವು ಕೇಳಿದರೆ ನೀವು ಇನ್ನೂ ಹಣ ಕಟ್ಟುವುದು ಬಾಕಿ ಇದೆ ಅಂತ ಹೇಳಿ ನಮ್ಮ ಮನೆಗೆ ಹಾಕಿರುವ ವಿದ್ಯುತ್ತನ್ನು ತೆಗೆದುಹಾಕಿ ನಮ್ಮ ಮನೆಯಲ್ಲಿ ಇರತಕ್ಕಂತ ಸ್ತ್ರೀಯರೊಂದಿಗೆ ಅಸಭ್ಯವಾಗಿ ವರ್ತಿಸಿ ಅಧಿಕಾರದ ದರ್ವನ್ನು ಮರೆದಿದ್ದಾರೆ ಎಂದು ಆರೋಪಿಸಿದರು.
ನಮ್ಮ ಮನೆಗೆ ಅಳವಡಿಸಿರುವ ವಿದ್ಯುತ್ ಅನ್ನು ಕಟ್ಟು ಮಾಡುವ ಮುಂಚೆ ನಮಗೆ ಯಾವುದೇ ರೀತಿಯ ನೋಟಿಸ್ ಜಾರಿ ಮಾಡದೆ ವಿದ್ಯುತ್ನ್ನು ಕಟ್ ಮಾಡಿರುತ್ತಾರೆ. ಸಂಸ್ಕಾರ ಇಲ್ಲದ ಮನುಷ್ಯ ಹೇಗೆ ಜನರೊಂದಿಗೆ ವರ್ತಿಸಿ ಸರ್ಕಾರಿ ಸೇವೆಯನ್ನು ಒದಗಿಸುತ್ತಾರೆ. ಗೋವಿಂದ ಪೂಜಾರಿ ಅವರಿಗೆ ಸಂಸ್ಕಾರದ ಕೊರತೆ ಎಂದು ಕಾಣಿಸುತ್ತಿದೆ. ಹಾಗಾಗಿ ಬರಮಪ್ಪ ದಳವಾಯಿ, ಗೋವಿಂದ ಪೂಜಾರಿ ಅವರನ್ನು ಕೂಡಲೇ ಜಾರಿಗೆ ಬರುವಂತೆ ಕರ್ತವ್ಯ ಲೋಪ ದೋಷಗಳನ್ನು ಎಸಗಿರುವ ಕಾರಣದಿಂದಾಗಿ ಇವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.