ಬ್ಯಾಡ್ಗಿ

ಪೂಜಾರರ ವರ್ಗಾವಣೆಯ ಆದೇಶ ರದ್ದುಗೊಳಿಸಲು ಮನವಿ

ಪೂಜಾರರ ವರ್ಗಾವಣೆಯ ಆದೇಶ ರದ್ದುಗೊಳಿಸಲು ಮನವಿ

ಬ್ಯಾಡಗಿ 13: ಸ್ಥಳೀಯ ಪುರಸಭೆಯ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ.ಎಂ.ಪೂಜಾರ ಅವರನ್ನು ರಾಜಕೀಯ ದುರುದ್ದೇಶದಿಂದ ವರ್ಗಾವಣೆ ಮಾಡಲಾಗಿದ್ದು, ಈ ಕೂಡಲೇ ಅವರ ವರ್ಗಾವಣೆಯ ಆದೇಶವನ್ನು ತಡೆಹಿಡಿದು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮೀತಿಯ ತಾಲೂಕಾ ಘಟಕದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಿ ಒತ್ರಯಿಸಲಾಯಿತು. 

ತಾಲೂಕ ಸಂಚಾಲಕ ರವಿ ಹುಣಸಿಮರದ ಮಾತನಾಡಿ, ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ವಿ.ಎಂ.ಪೂಜಾರ ಅವರು ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಸಲ್ಲಿಸುತ್ತಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ವರ್ಗಾವಣೆ ಮಾಡಿಸುವಲ್ಲಿ ಕುತಂತ್ರ ಮಾಡಿರುವುದು ಖಂಡನೀಯ, ಕಾನೂನು ಬಾಹಿರಾಗಿರುವ ಕೆಲಸಗಳಿಗೆ ತಡೆ ಹಿಡಿಯಲು ಮುಂದಾದ ಇವರನ್ನು ವರ್ಗಾವಣೆಯ ನೆಪದಲ್ಲಿ ಬಲಿಪಶು ಮಾಡುತ್ತಿರುವುದು ಯಾವ ನ್ಯಾಯ..? ಎಂದು ಪ್ರಶ್ನಿಸಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಪ್ರಾಮಾಣಿಕ ಅಧಿಕಾರಿಯ ಸೇವೆಯನ್ನು ಮತ್ತೆ ಬ್ಯಾಡಗಿ ಪಟ್ಟಣಕ್ಕೆ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಆಗ್ರಹಿಸಿದರಲ್ಲದೆ ಈ ಕುರಿತು ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆಯನ್ನು ನಡೆಸುವ ಎಚ್ಚರಿಕೆ ನೀಡಿದರು. 

ತಾಲೂಕು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ