ಪುರಸಭೆ ಕಾರ್ಯಾಲಯವನ್ನು ಸ್ಥಳಾಂತರಿಸಲು ಮನವಿ
ಘಟಪ್ರಭಾ 09: ಶಿಥೀಲಗೊಂಡಿರುವ ಘಟಪ್ರಭಾ ಪುರಸಭೆ ಕಾಯರ್ಾಲಯವನ್ನು ಬೇರೆ ಕಟ್ಟಡದಲ್ಲಿ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಘಟಪ್ರಭಾ ಪಟ್ಟಣದ ಮದ್ಯದಲ್ಲಿರುವ ಹಳೆ ಕಟ್ಟಡ ಸೋರುತ್ತಿದ್ದು, ಯಾವ ಕ್ಷಣದಲ್ಲೂ ಕುಸಿದು ಬೀಳುವ ಪರಿಸ್ಥಿತಿಯಲ್ಲಿದೆ. ಕಛೇರಿಗೆ ಬರುವ ಸಾರ್ವಜನಿಕರು ಯಾವಾಗ ಅನಾಹುತ ಆಗಬಹುದೆಂಬ ಭಯದಲ್ಲಿ ಕಛೇರಿಗೆ ಬಂದು ಹೋಗುತಿದ್ದಾರೆ.
ಸುಮಾರು 5 ವರ್ಷಗಳ ಹಿಂದೆ ನಿಮರ್ಾಣವಾದ ಧುಪದಾಳ ಪಂಚಾಯತಿ ಹೊಸ ಕಟ್ಟಡದ ಸುತ್ತಮುತ್ತ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ,ಮಹಿಳೆಯರಿಗೂ ಶೌಚಾಲಯಗಳಿದ್ದು ಕುಳಿತುಕೊಳ್ಳಲಿಕ್ಕೆ ಗಾರ್ಡನ ಇದ್ದರೂ ಕೂಡ ಕೆಲವು ಪಟ್ಟ ಭದ್ರ ಹಿತಾಶಕ್ತಿಗಳ ಕೈವಾಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರ ಆಗುತ್ತಿಲ್ಲವೆಂದು ಕರವೆ ಸದಸ್ಯರು ಆರೋಪಿಸುತಿದ್ದಾರೆ.
ಕರವೆ ಜಿಲ್ಲಾಧ್ಯಕ್ಷ ರೆಹಮಾನ ಮೊಖಾಶಿ ಮಾತನಾಡಿ ಘಟಪ್ರಭಾ ಪುರಸಭೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿದರೆ ದುಪಧಾಳ ಸೇರಿ ಸುತ್ತಮುತ್ತಲಿನ ಜನರಿಗೆ ಅನೂಕೂಲವಾಗುತ್ತದೆ ಅದಕ್ಕಾಗಿ 15 ದಿನಗಳ ಒಳಗೆ ಹಳೆ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸದಿದ್ದರೆ. ಆಮರಣ ಉಪವಾಸ ಕುಳಿತುಕೊಳ್ಳುವದಾಗಿ ಎಚ್ಚರಿಸಿ ಮುಖ್ಯಾಧಿಕಾರಿ ಶ್ರೀಮತಿ ಎಂ.ಎಸ್.ಪಾಟೀಲ ಇವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿಗಳು ಸ್ಥಳೀಯ ಶಾಸಕರ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕರವೆ ಕಾರ್ಯಕರ್ತರಾದ ರವಿ ನಾವಿ, ರಾಜು ವಗ್ಗನವರ, ಇಸ್ಮಾಯಿಲ್ ಬಳಿಗಾರ, ಸುಭಾಸ ಮೇತ್ರಿ, ಯಮನಪ್ಪಾ ಗಾಡಿವಡ್ಡರ, ರಫೀಕ ಜಗದಾಳ, ಎಮ್.ಎಮ್.ಬಳಿಗಾರ, ರಾಘು ಗಾಡಿವಡ್ಡರ, ದರ್ಶನ ದರ್ಮಟ್ಟಿ, ಪಾರುಖ ಬಿಜಗಾರ, ಸಾತೆಪ್ಪಾ ಮುತ್ನಾಳ, ಪ್ರಶಾಂತ ಮುತ್ತೆಪ್ಪಗೋಳ ಸೇರಿಂದಂತೆ ಇನ್ನುಳಿದ ಕಾರ್ಯಕರ್ತರು ಹಾಗೂ ಘಟಪ್ರಭಾ ಪುರಸಭೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.