ಶಿಗ್ಗಾವ್

ಕಾರ್ಮಿಕ ಇಲಾಖೆ ಮರು ಸ್ಥಾಪನೆಗೆ ಆಗ್ರಹಿಸಿ ಮನವಿ

ಕಾರ್ಮಿಕ ಇಲಾಖೆ ಮರು ಸ್ಥಾಪನೆಗೆ ಆಗ್ರಹಿಸಿ ಮನವಿ

ಶಿಗ್ಗಾವಿ 17: ತಾಲೂಕಿನಲ್ಲಿಯ ಆಹಾರ ಕಿಟ್ ವಿತರಣೆಯಲ್ಲಿಯ ತಾರತಮ್ಯ ಮತ್ತು ಕಾರ್ಮಿಕ ಇಲಾಖೆಯನ್ನು ಮರು ಸ್ಥಾಪನೆ ಮಾಡುವಂತೆ ಅಗ್ರಹಿಸಿ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿಯವರ ಮೂಲಕ ಸವಣೂರ ಉಪವಿಭಾಗಾಧಿಕಾರಿಗಳಿಗೆ ಜೀವಿಕ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಮನವಿ ಅರ​‍್ಿಸಲಾಯಿತು. 

ಈಗಾಗಲೇ ಕಾರ್ಮಿಕ ಇಲಾಖೆಯಿಂದ ವಿತರಣೆ ಮಾಡುತ್ತಿರುವ ಕಾರ್ಮಿಕರ ಆಹಾರದ ಕಿಟ್ ವಿತರಣೆಯಲ್ಲಿ ತಾರತಮ್ಯವನ್ನ ಮಾಡುತ್ತಿದ್ದು ಒಂದೇ ಕಾರ್ಮಿಕ ಸಂಘಟನೆಯ ಪರವಾಗಿ ಕಿಟ್ ವಿತರಣೆ ಮಾಡಲಾಗುತ್ತಿದ್ದು ಕಾರ್ಮಿಕ ಇಲಾಖೆಯಿಂದ ಸೂಕ್ತ ದಾಖಲಾತಿ ಪಡೆದು ಕಿಟ್ ನೀಡಬೇಕು ಇಲ್ಲಿ ಯಾವುದೇ ಮದ್ಯವರ್ತಿಗಳ ಮೂಲಕ ನೀಡದಂತೆ ಕಾರ್ಮಿಕ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಲ್ಲದೇ ಕಾರ್ಮಿಕ ಇಲಾಖೆಯ ಕಚೇರಿಯು ಈಗ ಬಂದ್ ಮಾಡಲಾಗಿದ್ದು ಅದನ್ನು ಪುನಹ ಪ್ರಾರಂಭಿಸಿ ಅನುಕೂಲ ಮಾಡಬೇಕು ಒಂದು ವೇಳೆ ಯಾರಾದರೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮೇಲೆ ವಿವಿಧ ಸಂಘಟನೆಗಳು ದಬ್ಬಾಳಿಕೆ, ಗೂಂಡಾ ವರ್ತನೆಗಳಂತಹ ಘಟನೆಗಳು ನಡೆದರೆ ಜೀವಿಕ ಜಿಲ್ಲಾ ಸಂಘಟನೆ ಸಂಪೂರ್ಣವಾಗಿ ಕಾರ್ಮಿಕ ಅಧಿಕಾರಿಗಳ ಬೆಂಬಲಕ್ಕೆ ಸನ್ನದ್ದವಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಜೀವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ಮುಖಂಡ ತಿಪ್ಪಣ್ಣ ಸಾತಣ್ಣವರ, ದಲಿತ ಸಂಘರ್ಷ ಸಮಿತಿಯ ಅಶೋಕ ಕಾಳೆ, ಸಾಧಿಕ ಅಹ್ಮದ್ ಅಂಬೂರ, ಮೌಲಾಲಿ ಶೇಖಲ್ಲಿ, ಪರಶುರಾಮ ಈಳಗೇರ, ಗೌಸ ಅಗಸನಮಟ್ಟಿ ಸೇರಿದಂತೆ ಇತರ ಮುಕಂಡರು ಇದ್ದರು. 


ಸುದ್ದಿ ಓದಿ