ಅಸಮರ್ಪಕ ಬಸ್ಸಿನ ವ್ಯವಸ್ಥೆ ಖಂಡಿಸಿ ಮನವಿ
ಲೋಕದರ್ಶನ ವರದಿ
ಬೈಲಹೊಂಗಲ 27: ಬ್ರಾಂಡ ಟೌನ್ ಬೈಲಹೊಂಗಲ ಸೋಶಿಯಲ್ ಪೇಜಿನ ವತಿಯಿಂದ ತಾಲೂಕಿನ ಹಳ್ಳಿಗಳಿಗೆ ಅಸಮರ್ಕ ಬಸ್ಸಿನ ವ್ಯವಸ್ಥೆ ಖಂಡಿಸಿ ಸೋಮವಾರ ಕೇಂದ್ರ ಬಸ್ ನಿಲ್ದಾಣದ ಸಾರಿಗೆ ಘಟಕದ ಅಧಿಕಾರಿ ಪುಡಕಲಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘಟನೆ ರಾಜ್ಯಾಧ್ಯಕ್ಷರಾದ ಮಹಾಂತೇಶ್ ಕರಿಬಸನವರ, ಬ್ರಾಂಡ್ ಟೌನ್ ಪೇಜಿನ್ ಮಹಾಂತೇಶ ಅಂಗಡಿ ಮನವಿ ಸಲ್ಲಿಸಿ ಮಾತನಾಡಿ, ತಾಲ್ಲೂಕಿನ ಹೊಳ್ಳಿನಾಗಲಾಪುರ,ಮರಕಟ್ಟಿ, ಹಾರುಗೋಪ್ಪ,ಚಿಕ್ಕೋಪ್ಪ, ಗರ್ಜುರ ಸಂಗೊಳ್ಳಿ,ಹೊಸಕೋಟೆ,ಮುನವಳ್ಳಿ,ನಾಗನೂರ, ಹಾಗೂ ಆನಿಗೋಳ ಗ್ರಾಮಕ್ಕೆ ಧಾರವಾಡಗೆ ಹೋಗುವ ಬಸ್ಸಗಳು ನಿಲ್ಲಿಸುತ್ತಿಲ್ಲ. ಅನೇಕ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳ ಸಮಯದಲ್ಲಿ ತೊಂದರೆ ಉಂಟಾಗುತ್ತಿದೆ ಹಾಗೂ ಸಮಯ ತಪ್ಪಿದರೆ ಬೆಳಿಗ್ಗೆ ಬಂದವರು ತಮ್ಮ ಊರುಗಳಿಗೆ ಹೋಗುವಷ್ಟರಲ್ಲಿ ಸಾಯಂಕಾಲ ಆಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಗ್ರಾಮೀಣ ಭಾಗದ ಊರುಗಳಿಗೆ ಸರಿಯಾದ ವೇಳೆಯಲ್ಲಿ ಬಸ್ ಬಿಡಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲರನ್ನೂ ಒಗ್ಗೂಡಿಸಿಕೊಂಡು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಮಂಜುನಾಥ್ ಮರಶೆಟ್ಟಿ, ಗುರುಪಾದ ಅಂಗಡಿ, ಅಜಯ ಭಜಂತ್ರಿ (ಬೈಲಹೊಂಗಲ ಶೌಟ್ಸ್ )ಗೌಸ್ ಸನದಿ, ಪ್ರಭು ಮಠಪತಿ, ಆಕಾಶ್ ಶಿಂಧೇ, ವಿರೂಪಾಕ್ಷ, ಶರಣ ತೋಟಗಿ, ಶಿವಪ್ರಸಾದ್ ಬೂದಿಹಾಳ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಇದ್ದರು.