ತಾಳಿಕೋಟಿ

ದಲಿತ ಕೇರಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಮನವಿ

ದಲಿತ ಕೇರಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಮನವಿ

ತಾಳಿಕೋಟೆ31: ತಾಲೂಕಿನ ಶಿವಪುರ ಗ್ರಾಮದಲ್ಲಿ ದಲಿತ ಕೇರಿಗೆ ಮೂಲಬೂತ ಸೌಲಭ್ಯವನ್ನು ಒದಗಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸೇನೆ ಗ್ರಾಮ ಘಟಕದ ವತಿಯಿಂದ ತಾಲೂಕ ಪಂಚಾಯತ ಕಾರ್ಯನಿವಾಹಕ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಶಿವಪೂರ ಗ್ರಾಮದಲ್ಲಿ ಸುಮಾರು 25 ರಿಂದ 30 ದಲಿತ ಕುಟುಂಬಗಳು ದಲಿತ ಕೇರಿಯಲ್ಲಿ ವಾಸವಾಗಿವೆ. ಸ್ವಾತಂತ್ರ್ಯ ಲಭಿಸಿ 75 ವರ್ಷ ಗತಿಸಿದರೂ ಸಹಿತ ನಮಗೆ ಮೂಲಸೌಕರ್ಯ ಸಿಕ್ಕಿಲ್ಲ. ಸಿಸಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳು ಇಲ್ಲದೇ ದಲಿತ ನಿವಾಸಿಗಳು ಪರದಾಟ ನಡೆಸುವಂತಾಗಿದೆ. ಮೂಲಸೌಕರ್ಯ ಒದಗಿಸುವ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಸಹಿತ ಕ್ರಮ ಕೈಕೊಂಡಿಲ್ಲ. ಹಿಗಾಗಿ ತಾವುಗಳು ಮಧ್ಯಪ್ರವೇಶ ಮಾಡಿ ಎಸ್ಸಿಪಿ, ಎಸ್ಟಿಪಿ ಯೋಜನೆಯಡಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸೂಚನೆ ನೀಡಬೇಕು ಎಂದು ಮನವಿಯನ್ನು ಸಲ್ಲಿಸಲಾಯಿತು. ತಾಪಂ ಸಹಾಯಕ ನಿದೇಶಕಿ ಎಸ್.ಎಸ್.ಬಿರಾದಾರ ಮನವಿಯನ್ನು ಸ್ವಿಕರಿಸಿದರು.

ಈ ಸಂದರ್ಭದಲ್ಲಿ ಶಿವಪುರ ಗ್ರಾಮ ಘಟಕದ ಅಧ್ಯಕ್ಷ ಯಮನಪ್ಪ ನಾಯ್ಕೋಡಿ, ಬಸವರಾಜ್ ಚಲವಾದಿ, ತಾಲೂಕು ಕಾರ್ಯದಶರ್ಿ ಗೋಪಾಲ ಕಟ್ಟಿಮನಿ, ಪ್ರಧಾನ ಕಾರ್ಯದಶರ್ಿ ಕಾಶಿನಾಥ್ ಕಟ್ಟಿಮನಿ, ನಗರ ಘಟಕದ ಉಪಾಧ್ಯಕ್ಷ ಪರಶುರಾಮ್ ನಾಲತವಾಡ, ಮಿಣಜಿಗಿ ಗ್ರಾಮ ಘಟಕದ ಅಧ್ಯಕ್ಷ ಬಸ್ಸು ಮಾದರ, ದುಗರ್ೇಶ್ ಮಿಣಜಿಗಿ, ಸಿದ್ದಾಥರ್್ ಕಟ್ಟಿಮನಿ, ವಿಠ್ಠಲ್ ಕೆಸಾಪೂರ, ನಾಗರಾಜ ದಂಡಿನ್, ಪರಶುರಾಮ್ ಚಲವಾದಿ ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ