ಶಿಗ್ಗಾವ್

ಪಹಣಿ ಪತ್ರಿಕೆಯಲ್ಲಿ ಜಮೀನು ದಾಖಲಾತಿಗೆ ಮನವಿ

ಪಹಣಿ ಪತ್ರಿಕೆಯಲ್ಲಿ ಜಮೀನು ದಾಖಲಾತಿಗೆ ಮನವಿ
ತಾಲೂಕಿನ ಅರಟಾಳ ಹೊಸೂರ ಗ್ರಾಮದ ಅಂಜುಮನ್ ಸಂಸ್ಥೆಯ ಮುಸ್ಲೀಂ ಬಾಂಧವರು ತಹಶೀಲ್ದಾರರಿಗೆ ಮನವಿ ಅರ್ಪಿಸಿದರು

ಶಿಗ್ಗಾವಿ 06: ತಾಲೂಕಿನ ಅರಟಾಳ ಹೊಸೂರ ಗ್ರಾಮದ ಹದ್ದಿನಲ್ಲಿಯ 3 ಎಕರೆ 39 ಗುಂಟೆ ಜಮೀನನ್ನ ಅಂಜುಮನ್ ಎ ಇಸ್ಲಾಂ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಎಂದು ಪಹಣಿ ಪತ್ರಿಕೆಯಲ್ಲಿ ದಾಖಲಿಸುವಂತೆ ಅರಟಾಳ ಹೊಸೂರ ಗ್ರಾಮದ ಅಂಜುಮನ್ ಸಂಸ್ಥೆಯ ಮುಸ್ಲೀಂ ಬಾಂಧವರು ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ. 

ಅರಟಾಳ ಹದ್ದಿನ ರಿಸಂ 5, ಕ್ಷೇತ್ರ 3 ಎಕರೆ 39 ಗುಂಟೆ ಜಮೀನು ಹಳೆಯ ಕಾಲದಿಂದಲೂ ಸಹ ಸರಕಾರ ಮತ್ತು ಮುಸಲ್ಮಾನ್ ದೇವರ ಮಸೀದಿಗೆ ಎಂದು ಮೀಸಲಿಟ್ಟ ಜಮೀನು ಎಂದು ಹಿಂದಿನ ಹಿರಿಯರ ಕಾಲದಿಂದಲೂ ಪಹಣಿ ಪತ್ರಿಕೆಯಲ್ಲಿ ಹಾಗೂ ಡ ಉತಾರದಲ್ಲಿದ್ದು ಈ ಹಿಂದೆ ಕೇವಲ ಮೂರು ಜನ ಮುಸಲ್ಮಾನರು ಹೊಸೂರ ಅರಟಾಳ ಗ್ರಾಮದಲ್ಲಿ ವಾಸವಾಗಿದ್ದು ನಂತರ ಪೋತಿಯ ವಾರಸುದಾರರು 14 ಜನ ವಾರಸುದಾರರು ಹಾಗೂ ವಹಿವಾಟುದರರು ಎಂದು ಪಹಣಿ ಪತ್ರಿಕೆಯಲ್ಲಿ ದಾಖಲಾಗಿದ್ದು ಜಮೀನು ಸಮಾಜದ ಸದಸ್ಯರ ವಯಕ್ತಿಕ ಹೆಸರಿಗೆ ದಾಖಲಾಗಿದ್ದು ಇದರಲ್ಲಿ ಕಂದಾಯ ನೀರೀಕ್ಷಕರ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಸಮಾಜದ ಸದಸ್ಯರ ಗಮನಕ್ಕೆ ತರದೇ 2013-14 ನೇ ಇಸ್ವಿಯಲ್ಲಿ ಮುಸಲ್ಮಾನ ದೇವರ ಮಸೀದಿಗೆ ಎಂದು ಇರುವ ಹಾಗೂ ಸರಕಾರ ಎಂದು ಇರುವ ಹೆಸರನ್ನು ಕಡಿಮೆ ಮಾಡಲಾಗಿದೆ ಇದು ಕಾನೂನು ಬಾಹಿರವಾಗಿದೆ ಈ ವಿಷಯವು ಈಗ ಸಮಾಜದ ಗಮನಕ್ಕೆ ಬಂದಿದ್ದು ಜಮೀನು ಅಂಜುಮನ್ ಎ ಇಸ್ಲಾಂ ಕಮೀಟಿ ಹೋಸೂರ ಅರಟಾಳ ಹೆಸರನ್ನು ದಾಖಲಿಸಿ ಸಮಾಜದ ಆಸ್ತಿ ಎಂದು ಪರಿಗಣಿಸಬೇಕೆಂದು ಮತ್ತು ಪಹಣಿ ಪತ್ರಿಕೆಯಲ್ಲಿನ ವಹಿವಾಟುದಾರರ ಹೆಸರನ್ನು ಕಡಿಮೆ ಮಾಡಬೇಕೆಂದು ವಿನಂತಿಸಿದ್ದಾರೆ. 

ಹೊಸೂರ ಅರಟಾಳ ಅಂಜುಮನ್ ಎ ಇಸ್ಲಾಂ ಕಮೀಟಿ ಅದ್ಯಕ್ಷ ದಾವಲಸಾಬ್ ಹುಬ್ಬಳ್ಳಿ, ಗರೀಬ್‌ಸಾಬ್ ಮುಲ್ಲಾನವರ, ಹುಸೇನ್‌ಸಾಬ್ ಗೋನಾಳ, ರಸೂಲ್‌ಸಾಬ್ ಮುಲ್ಲಾನವರ, ಕಲಂದರ್ ಸವಣೂರ, ಬಾಬುಸಾಬ್ ಸಂಶಿ, ಮರ್ದಾನಸಾಬ್ ಬಾಡದ್, ಮೌಲಾಸಾಬ್ ನಾಯಿಕೊಪ್ಪ, ಅನ್ವರ ಮುಲ್ಲಾ ಸೇರಿದಂತೆ ಕಮೀಟಿಯ ಸದಸ್ಯರು ಇದ್ದರು. 

ಸುದ್ದಿ ಓದಿ