ಕಾರವಾರ

ಮಲೇರಿಯಾ ವಿರೋಧಿ ಮಾಸಾಚರಣೆ

ಮಲೇರಿಯಾ ವಿರೋಧಿ ಮಾಸಾಚರಣೆ

ಬನವಾಸಿ 02: ಸೊಳ್ಳೆಗಳಿಂದ ಹಲವಾರು ಕಾಯಿಲೆ ಬರುತ್ತವೆ ಅದರಲ್ಲಿ ಮಲೇರಿಯಾ ಕೂಡ ಒಂದು ಇದನ್ನು ತಡೆಯಲು ನಾವೆಲ್ಲರೂ ಬದ್ಧರಾಗೋಣ ಎಂದು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಯಶ್ರೀ ಹೆಗಡೆ ತಿಳಿಸಿದರು.  

ಸ್ಥಳೀಯ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ ಗುರುವಾರ ಮಲೇರಿಯಾ ವಿರೋಧಿ ಮಾಸಾಚರಣೆಯ ಅಂಗವಾಗಿ  ಏರಿ​‍್ಡಸಿದ್ದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಸೊಳ್ಳೆಗಳಿಂದ ಅನೇಕ ಮಾರಕ ರೋಗಗಳು ಹರಡುತ್ತವೆ.ಹಲವು ಜನರು ಮಾರಣಾಂತಿಕ ರೋಗದಿಂದ ಪ್ರಾಣಬಿಟ್ಟಿರುವ ಉದಾಹಣೆಗಳಿದ್ದು ಹಾಗಾಗಿ ಪ್ರತಿಯೊಬ್ಬರೂ ಮನೆಯ ಅಕ್ಕ ಪಕ್ಕ ನೀರು ಶೇಖರಿಸದಂತೆ ನೋಡಿಕೊಳ್ಳಬೇಕು, ಸಂಗ್ರಹಿಸಿದ ನೀರು 7ದಿನಗಳಿಗೊಮ್ಮೆ  ಸ್ವಚ್ಚಗೊಳಿಸಿ ಒಣಗಿಸಿ ಮತ್ತೆ ಬಳಸುವಂತೆ ತಿಳಿಸಿದರು. ಅರೆ ಬರೆ ಕಾಮಗಾರಿಗಳ ಕಟ್ಟಡಗಳಿಂದಲೂ ಅಲ್ಲಿ ಶೇಖರಿಸುವ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಟಯರ್, ಬಳಸದ ಸಂಪುಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ನೀರು ಶೇಖರಿಸದಂತೆ ನೊಡಿಕೊಳ್ಳಬೇಕು ಸಾರ್ವಜನಿಕರು ಗ್ರಾಮ ಪಂಚಾಯತಿ,ಸ್ಥಳೀಯ ಮುಖಂಡರು, ಆರೋಗ್ಯ ಕಾರ್ಯಕರ್ತರೊಡನೆ ಸಹಕರಿಸಿ ಮಲೇರಿಯಾ ನಿಯಂತ್ರಣದ ವಿಧಾನಗಳನ್ನು ಸಕ್ರೀಯವಾಗಿ ಪಾಲಿಸಿದರೆ ಮಲೇರಿಯ ಸೇರಿದಂತೆ ಅನೇಕ ಮಾರಕ ರೋಗಗಳಿಂದ ಮುಕ್ತಿ ಪಡೆಯವಹುದಾಗಿದೆ ಎಂದರು.  

ಪಟ್ಟಣದ ಪ್ರತಿ ವಾಡ್9ಗಳಲ್ಲಿ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಆರೋಗ್ಯ ನೀರೀಕ್ಷಕರಾದ ಬಸವರಾಜ ಅಕ್ಕಿಹೊಳ್ಳಿ, ಮಾರುತಿ ಬರಕಿ,  ಕಲಾವತಿ ನಾಯ್ಕ್‌, ಸುಮನ್ ಹೆಗಡೆ, ಸುಮಿತ್ರ ನಾಯ್ಕ್‌, ಸ್ವಾತಿ ನಾಯ್ಕ್‌, ಬಸವರಾಜ ಬೆಡಸೂರ ಇದ್ದರು. 

ಸುದ್ದಿ ಓದಿ