ರಾಣೆಬೆನ್ನೂರ

ಭಯೋತ್ಪಾದನಾ ವಿರೋಧಿ ದಿನ ಆಚರಣೆ

ಭಯೋತ್ಪಾದನಾ ವಿರೋಧಿ ದಿನ ಆಚರಣೆ

ರಾಣೇಬೆನ್ನೂರು 24: ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು  23ರಂದು ಅರ್ಥಪೂರ್ಣವಾಗಿ  ಆಚರಿಸಲಾಯಿತು. ವಿಶೇಷ ಉಪನ್ಯಾಸಕರಾಗಿ ಪ್ರೊ. ಕೃಷ್ಣಾ ಎಲ್ ಎಚ್ ಮುಖ್ಯಸ್ಥರು ಇತಿಹಾಸ ವಿಭಾಗ ಇವರು ಮಾತನಾಡುತ್ತಾ ಭಾರತದಲ್ಲಿ ಜರುಗಿದ ಭಯೋತ್ಪಾದನೆಯ ಕಹಿ ಘಟನೆಗಳನ್ನು ಮೆಲಕು ಹಾಕಿದರು. ಭಯೋತ್ಪಾದನೆ ಎಂಬುದು ಸ್ವಚ್ಛಂದ ಮನಸ್ಸಿನಿಂದ ಮಾಡುವ ಹಿಂಸೆ ಎಂದರು.  ಭಯೋತ್ಪಾದನೆ ವಿರೋಧಿ ದಿನವನ್ನು ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ದಿ. ರಾಜೀವ ಗಾಂಧಿ ಹತ್ಯೆಯ ದಿನದ ಕುರಿತು ಮಾತನಾಡಿದರು. ಇತ್ತೀಚಿನ ಯುವಕರು ನಿರುದ್ಯೋಗ, ದುರಾಸೆ, ಬೆದರಿಕೆ, ಒತ್ತಡಗಳಿಂದಾಗಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಾರೆ ಎಂದರು. 

 ಮುಖ್ಯ ಅತಿಥಿಗಳಾಗಿದ, ಪ್ರೊ. ಸುಜಾತಾ ಹುಲ್ಲೂರ ಇವರು ಮಾತನಾಡಿ ಭಯೋತ್ಪಾಧನಾ ವಿರೋಧಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯರಾದ  ಪ್ರೊ. ನಾರಾಯಣ ನಾಯಕ ಎ. ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ಭಯೋತ್ಪಾದನೆಯಿಂದ ದೇಶದ ಅರ್ಥ ವ್ಯವಸ್ಥೆ, ಸಾಮಾಜಿಕ ಶಾಂತಿ ಸುವ್ಯವಸ್ಥೆ ಹದಗೆಡುತ್ತದೆ. ಜಗತ್ತಿನಲ್ಲಿ ಭಾರತದ ರಕ್ಷಣಾ ಪಡೆಯ ಬಲಿಷ್ಠತೆಯಲ್ಲಿ  ನಾಲ್ಕನೇ ಸ್ಥಾನ ಪಡೆದಿದೆ. ಪ್ರೊ. ವೀರೇಶ ಕುರಹಟ್ಟಿ ಕಾರ್ಯಕ್ರಮ ಅಧಿಕಾರಿಗಳು ಘಟಕ-1 ಇವರು ಭಯೋತ್ಪಾಧನಾ ವಿರೋದಿಸುವ ಕುರಿತು ಮಾರ್ಮಿಕವಾಗಿ ಮಾತನಾಡಿ, ವಿದ್ಯಾರ್ಥಿನಿಯರಿಂದ “ಭಯೋತ್ಪಾದನಾ ನಿರ್ಮೂಲನಾ ಪ್ರತಿಜ್ಙೆ” ಯನ್ನು ಮಾಡಿಸಿದರು.  ಡಾ. ಕವಿತಾ ಗಡ್ಡದಗೂಳಿ ಕಾರ್ಯಕ್ರಮ ಅಧಿಕಾರಿಗಳು ಘಟಕ-2, ಮಹಾವಿದ್ಯಾಲಯದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು. ನಾಗರತ್ನಾ ಮಲಗೌಡ್ರ ಪ್ರಾರ್ಥಿಸಿದರು. ಶಬರಿದೇವಿ ಮಣಕೂರ ನಿರೂಪಿಸಿದರು. ರೂಪಾ ಮೆಟೆಪ್ಪಳವರ ವಂದಿಸಿದರು. 


ಸುದ್ದಿ ಓದಿ