ರಾಣೆಬೆನ್ನೂರ

ಮೇಡ್ಲೇರಿ ಕ.ಸಾ.ಪ ಗ್ರಾಮ ಘಟಕದ ಕಾರ್ಯ ಮಾದರಿ: ಮಾಲತೇಶ ಅಂಗೂರ

ಮೇಡ್ಲೇರಿ ಕ.ಸಾ.ಪ ಗ್ರಾಮ ಘಟಕದ ಕಾರ್ಯ ಮಾದರಿ: ಮಾಲತೇಶ ಅಂಗೂರ
ರಾಣೇಬೆನ್ನೂರ ತಾಲೂಕಿನ ಮೇಡ್ಲೇರಿ ಗ್ರಾಮದಲ್ಲಿ ನಡೆದ ಹೊಂಗಿರಣ ಸಂಚಿಕೆ ಬಿಡುಗಡೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ

ರಾಣೀಬೆನ್ನೂರ  09:ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕಾ ಘಟಕಗಳಿಗೆ ಮೇಡ್ಲೇರಿಯ ಕ.ಸಾ.ಪ ಗ್ರಾಮ ಘಟಕದ ಕಾರ್ಯ ಮಾದರಿ ಯಾಗಬಲ್ಲದು ಎಂದು ಹಾವೇರಿಯ ಸಾಹಿತಿ ಪತ್ರಕರ್ತ ಮಾಲತೇಶ ಅಂಗೂರ ರವರು ಹೇಳಿದರು.

ಅವರು ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಕ.ಸಾ.ಪ ಗ್ರಾಮ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಹೊಂಗಿರಣ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ವೈಚಾರಿಕ ಚಿಂತನೆಯ ವಿಭಿನ್ನ ಮತ್ತು ವಿಶಿಷ್ಟ ಕಾರ್ಯಕ್ರಮವನ್ನು ವಿದ್ಯಾರ್ಥಿ ಯುವಜನತೆಗೆ ಗ್ರಾಮದಲ್ಲಿ ಸಾಹಿತ್ಯೀಕ ಸಾಂಸ್ಕೃತಿಕ ವಾತಾ ವರಣ ನಿರ್ಮಿಸುತ್ತಾ ವರ್ಷ ವಿಡಿ ನಿರಂತರ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ವೈಚಾರಿ ಕಾ ಲೇಖನಗಳನ್ನು ದಾಖಲಿಸಿ ಕರಿಸಿ ಹೊಂಗಿರಣ ಸ್ಮರಣ ಸಂಚಿಕೆ ತರುತ್ತಿರುವುದು ಶ್ಲಾಗನೀಯ ಮೇಡ್ಲೆರಿ ಕ.ಸಾ.ಪ  ಗ್ರಾಮ ಘಟಕದ ಈ ಮಹತ್ತರ ಕಾರ್ಯ ರಾಜ್ಯದಲ್ಲಿಯೇ ಮೊದಲು ಎನ್ನಬಹುದೆಂದು ಹೇಳಿದರು.

ಸಮಾರಂಭವನ್ನು ಗ್ರಾಮಪಂಚಾಯಿತಿ ಅಧ್ಯಕ್ಷೆ  ಶಾಂತವ್ವ  ತಳವಾರ ಉದ್ಘಾಟಿಸಿ ದರು.  ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ  ಹೆಚ್.ಬಿ ಲಿಂಗಯ್ಯನವರು ಮಾತನಾಡಿ 2000 ಸಾವಿರ ಇತಿಹಾಸ ವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರ ಮೇಲೆ ಇದೆ. ಮೇಡ್ಲೇ ರಿ ಗ್ರಾಮ ಘಟಕವು ಹೊಂಗಿ ರಣ ಸಂಚಿಕೆ ತರುವ ಮೂಲಕ  ಹೊಸ ಸ್ಪರ್ಷ ಕೊಡುವ ಕಾರ್ಯ ಇವರದಾಗಿದೆ.ಈ ಒಂದು ಮಹತ್ವಪೂರ್ಣ ಅವಿಸ್ಮ ರಣೀಯ ಕಾರ್ಯ ಹಾವೇರಿ ಜಿಲ್ಲೆಯಿಂದಲೇ ಪ್ರಪ್ರಥಮ ವಾಗಿದೆಂದು ಹೇಳಿಕೊಳ್ಳಲು ಅವೀಮಾನ ವೆನಿಸುತ್ತದೆಂದು ನುಡಿದರು. ಇದೆ ಸಂದರ್ಭದಲ್ಲಿ 2019-20 ನಲ್ಲಿ ಸಾಲಿನಲ್ಲಿ ಎಸ್.ಎಸ್.ಎಲ್.ಸಿ& ಪಿ.ಯು. ಸಿಯಲ್ಲಿ ಹೆಚ್ಚು ಅಂಕ ಪಡೆದ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರವನ್ನು ಹಲಗೇರಿ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸ್ ಉಪ ನಿರೀಕ್ಷಕರಾದ ಕೆ .ಸಿ ಕೋಮ ಲಾಚಾರ್ ಪ್ರಧಾನಮಾಡಿದರು. 

ಎಸ್.ಎಸ್.ಎಲ್.ಸಿ ಯಲ್ಲಿ ಕುಮಾರಿ ಜೆ.ಮಧು ಪಿಯುಸಿಯಲ್ಲಿ ವಿಜ್ಞಾನ ವಿಭಾ ಗದಲ್ಲಿ ಕು.ತಾಸಿನ್ ಬಾನು ಹುಬ್ಬಳ್ಳಿ, ಕು.ನಿವೇದಿತ ಚಲ ವಾದಿ ವಾಣಿಜ್ಯ ವಿಭಾಗದಲ್ಲಿ  ಕು.ಕುಮಾರ ಜಲ್ಲೇರ ಕಲಾವಿಭಾಗ, ಕು. ಲಕ್ಷ್ಮೀ ಹೊನ್ನತ್ತಿ ಇವರುಗಳಿಗೆ ಗ್ರಾಮ ಘಟಕದ ವತಿಯಿಂದ  ಸನ್ಮಾನಿಸಿ ಅಭಿನಂದಿಸಲಾಯಿತು.           

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಉಪಧ್ಯಾಕ್ಷರು  ಜ್ಯೋತಿ ಕಣವಿ, ಹಾಗೂ ಶ್ರೀ ಬಸವರಾಜ ಹುಲ್ಲತ್ತಿ, ನಿತ್ಯಾನಂದ ಕುಂದಾ ಪುರ, ಎ.ಬಿ ರತ್ನಮ್ಮ, ಬಿ.ಪಿ ಶಿಡೆನೂರ, ಪ್ರಮೋದ ನೆಲ ವಾಗಲ, ಹೆಚ್. ಹೆಚ್. ಬಂಗೇರ,  ಕಾಂತೇಶ ಅಂಬಿಗೇ ರ, ಪುಟ್ಟಪ್ಪ ಲಮಾಣಿ, ಗಣೇಶ ಹುಲ್ಲತ್ತಿ, ಸುಬಾಷ ಕುರುಬರ, ಗ್ರಾಮ ಘಟಕದ ಪದಾಧಿಕಾರಿ ಗಳು ಉಪಸ್ಥಿತರಿದ್ದರು. ಗ್ರಾಮ ಘಟಕದ ಅಧ್ಯಕ್ಷರಾದ ಮಾರುತಿ ತಳವಾರ ಸ್ವಾಗತಿಸಿ ಪ್ರಸ್ತಾ ವಿಕವಾಗಿ ಬೀರೇಶ ಹೀಲದ ಹಳ್ಳಿ ನಿರೂಪಿ ಸಿದರು, ಶ್ರೀಕಾಂತ ಬಾರ್ಕಿ ವಂದಿಸಿದರು.

ಸುದ್ದಿ ಓದಿ