ಯರಗಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ಯರಗಟ್ಟಿ 21: ಸಹಕಾರಿ ಸಂಘಗಳು ರೈತರನ್ನು ಆರ್ಥಿಕವಾಗಿ ಬೆಳವಣಿಗೆಗೆ ಹೊಂದಲು ಅತ್ಯಂತ ಮಹತ್ವವನ್ನು ಹೊಂದಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಿಕೆಪಿಎಸ್ ಅಧ್ಯಕ್ಷ ಅಜೀತಕುಮಾರ ದೇಸಾಯಿ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಹಕಾರಿಸ ಸಂಘದ 105 ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಹಾಗೂ ಪ್ರತಿಶತ 3ರಂತೆ ದೀರ್ಘಾವಧಿಯ ಸಾಲವನ್ನು ಡಿಸಿಸಿ ಬ್ಯಾಂಕ್ ಮುಖಾಂತರ ರೈತರಿಗೆ ವಿತರಿಸುತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಬೇಕು. ದಿ. ಆನಂದ ಮಾಮನಿಯವರು ತಾಲೂಕಿನ ಸಹಕಾರಿ ಸಂಘಗಳ ಬೆಳವಣಿಗೆಗ ಸಾಕಷ್ಟು ಮುತವರ್ಜಿವಹಿಸಿದ್ದರು. ಅವರಿಗೆ ನೀಡಿದ ಸಹಕಾರದಿಂದ ತಾಲೂಕಿನ ಸಂಘಗಳು ಆರ್ಥಿಕವಾಗಿ ಸದೃಡವಾಗುವದರೊಂದಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿವೆ ಎಂದರು.
1918ರಲ್ಲಿ ಸಾವಿರ ರೂಪಾಯಿ ಬಂಡವಾಳದಿಂದ ಗ್ರಾಮದ ಹಿರಿಯರು ಪ್ರಾರಂಭಿಸಿದ ಸಂಸ್ಥೆ ಇಂದು 20ಕೋಟಿ ರೂಪಾಯಿ ವಹಿವಾಟ ನಡೆಸುವದರೊಂದಿಗೆ 1143 ರೈತ ಸದಸ್ಯರನ್ನು ಹೊಂದಿದೆ. ಒಟ್ಟು ನಿವಳ ಲಾಭ 28,47,343-00 ಲಾಭ ಗಳಿಸಿದೆ. ಪ್ರಸ್ತುತ ವರ್ಷದಲ್ಲಿ 8, 95,89,000 ಬೆಳೆಸಾಲ ಇದ್ದು ವರ್ಷದಲ್ಲಿ ರೂ. 8,75,48,000 ಗಳನ್ನು ಸಾಲ ವಿತರಿಸಿ.
ಪಟ್ಟಣಕ್ಕೆ ಹೆಮ್ಮೆಯ ವಿಷಯವಾಗಿದೆ. ಸಂಘಕ್ಕೆ 3ಸಾವಿರ ಮೆಟ್ರಿಕ್ ಟನ್ ಗೋಡಾವನ ಸ್ವಂತ ಕಛೇರಿ ಹೊಂದಿದ್ದು ಸಂಘದ ಬೆಳವಣಿಗೆಗೆ ಕಾರಣಿ ಕರ್ತರಾದ ಪಟ್ಟಣದ ಹಿರಿಯರು ಹಾಗೂ ದಿ. ಆನಂದ ಮಾಮನಿ ಕಾರ್ಯವನ್ನು ಶ್ಲಾಘಿಸಿದರು.
ಈ ವೇಳೆ ನೀಖೀಲ ಮ. ದೇಸಾಯಿ, ಪಿ. ಎಚ್. ಪಾಟೀಲ, ರಾಜೇಂದ್ರಗೌಡಾ ಪಾಟೀಲ, ವಿಠಲ ದೇವರಡ್ಡಿ, ಎನ್. ಕೆ. ಹುಚರಡ್ಡಿ, ಎ. ಕೆ. ಜಮಾದಾರ, ಭಾಸ್ಕರ ಹಿರೇಮೇತ್ರಿ, ಶಿವಾನಂದ ಯರಗಣವಿ, ಎಸ್. ಸಿ. ಹಾದಿಮನಿ, ವಿಶಾಲಗೌಡಾ ಪಾಟೀಲ, ರಾಜೇಂದ್ರ ಡಾಲಿ, ಎಫ್. ಜಿ. ಗೌಡರ, ಚ್. ಎಲ್. ವಜ್ಜರಮಟ್ಟಿ, ಹನಮಂತ ತಳವಾರ, ಬಸಲಿಂಗಪ್ಪ ಪಟ್ಟಣಶೆಟ್ಟಿ, ಸುನಂದಾ ಪರಳಾದ ಮುಂತಾದವರು ಇದ್ದರು. ಸದಾನಂದ ಹಣಬರ ಕಾರ್ಯಕ್ರಮ ನಿರೂಪಿಸಿದರು ಬಸವರಾಜ ಹಸಬಿ ಸ್ವಾಗತಿಸಿದರು. ರವಿ ದೇವರಡ್ಡಿ ವಂದಿಸಿದರು.