ಚನ್ನಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ
ಯರಗಟ್ಟಿ 21: ಸ್ಥಳಿಯ ಚನ್ನಬಸವೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣಾ ಸಭೆ ಜರುಗಿತು. ಸಂಘವು ಒಟ್ಟು 739 ರೈತ ಸದಸ್ಯರನ್ನು ಹೋದಿದ್ದು. ಶೇರು ಬಂಡವಾಳ ರೂ.46,94,360.00/-. ಈ ವರ್ಷದ ಆದಾಯ ರೂ. 9,33,707.00/-ಹೊಂದಿದೆ. ಈ ಸಂಘದಿಂದ ಸರಕಾರದ ಸಾಲ ಪಡೆದು ವಿತರಿಸಲಾಗುತ್ತಿದೆ. ಇದರ ವರದಿವಾಚನ ಸಂಘದ ಅಧ್ಯಕ್ಷ ಎ. ಎಂ. ಹಾದಿಮನಿ ಅವರು ಮಾತನಾಡಿ ರೈತರಿಗೆ ಇತ್ತಚೆಗೆ ಕೇಂದ್ರ ಸರಕಾರ ಹಲವಾರ ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ ಮತ್ತು ಹೊಸ-ಹೊಸ ಅವಿಸ್ಕಾರಗಳತ್ತ ರೈತರನ್ನು ಕೊಂಡೊಯಗಯುತ್ತಿದೆ. ರೈತರ ಶೊನ್ಯ ಬಡ್ಡಿ ದರದಲ್ಲಿ 3 ಲಕ್ಷದ ವರೆಗೆ ಸಾಲ ಅದನ್ನು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಬೇಕು ಸಂಘ ನನಗಾಗಿ ನಾನು ಸಂಘಕ್ಕಾಗಿ ಇರಬೇಕು ಎಂದರು.
ಈ ವೇಳೆ ವೀರಭದ್ರ್ಪ ಹಾದಿಮನಿ, ನಾಸಿರ ಖಾಜಿ, ಶಿವಾನಂದ ಹಂಜಿ, ಶ್ರೀಕಾಂತ ಪತ್ತಾರ, ನಾಗಪ್ಪ ಖಿಲಾರಿ, ಶಿವಾನಂದ ಉಪ್ಪಿನ, ಕರ್ಜಗಿಮಠ, ಶ್ರೀಮತಿ ಸವಿತಾ ಸಣ್ಣಕ್ಕಿ, ಫಕ್ಕೀರ್ಪ ಕಾಮೋಶಿ, ಮಹಾದೇವ ಮುತ್ತೆನ್ನವರ, ಮೋಹನ ಹಾದಿಮನಿ, ಸದಾನಂದ ಹಣಬರ ಮುಂತಾದವರು ಇದ್ದರು.