ಯರಗಟ್ಟಿ

ಸೆ. 03ರಂದು ವಾರ್ಷಿಕ ಸರ್ವ ಸದಸ್ಯರ ಸಭೆ

ಸೆ. 03ರಂದು ವಾರ್ಷಿಕ ಸರ್ವ ಸದಸ್ಯರ ಸಭೆ

ಯರಗಟ್ಟಿ 31 : ಪಟ್ಟಣದ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಮತ್ತು ಸಿದ್ರಾಯಜ್ಜನವರ ಶ್ರೀಮಠದಲ್ಲಿ ಶ್ರಾವಣ ಮಾಸ ಮುಕ್ತಾಯ ಸಮಾರಂಭವನ್ನು ಸೆ. 03 ರಂದು ಸಮೀಪದ ಕಟಕೋಳ ಸಿದ್ರಾಜ್ಜನವರ ಶ್ರೀಮಠ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.  

ಸಂಘದ ಅಧ್ಯಕ್ಷ ಅಭಿನವ ಸಿದ್ರಾಯಜ್ಜನವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಸದಸ್ಯರಿಗೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಹಾಗೂ ಸಾಧಕರಿಗೆ ಪುರಸ್ಕಾರ ಪ್ರಧಾನ ಮಾಡಲಾಗುವುದು ಎಂದು ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಿದಂಬರ ಕದಂ ತಿಳಿಸಿದ್ದಾರೆ. 


ಸುದ್ದಿ ಓದಿ