ಬ್ಯಾಡ್ಗಿ

ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಘೋಷಿಸಿರು ವುದು ಸ್ವಾಗತಾರ್ಹ

ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ಘೋಷಿಸಿರು ವುದು ಸ್ವಾಗತಾರ್ಹ

ಲೋಕದರ್ಶನ ವರದಿ 

ಬ್ಯಾಡಗಿ 18:  ರಾಜ್ಯದ ಸರ್ಕಾರ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ ಶೇ.2 ರಷ್ಟು ಮೀಸಲಾತಿ ಘೋಷಿಸಿರು ವುದು ಸ್ವಾಗತಾರ್ಹ ಕ್ರಮವಾಗಿದೆ, ಬಹುಶಃ ಕ್ರೀಡಾಪಟುಗಳಿಗೆ ಬದುಕಿನ ಭದ್ರತೆ ಜೊತೆಗೆ ಆತ್ವವಿಶ್ವಾಸ ಹೆಚ್ಚಸಲಿದ್ದು ಪರೋಕ್ಷವಾಗಿ ಬಹುತೇಕ ಕ್ರೀಡೆಗಳಿಗೆ ಉತ್ತೇಜನ ಸಿಗಲಿದೆ ಎಂದು ಪುರಸಭೆ ಅಧ್ಯಕ್ಷೆ ಸರೋಜಾ ಅಭಿಪ್ರಾಯ ವ್ಯಕ್ತಪಡಿ ಸಿದರು. 

 ತಾಲೂಕಾಡಳಿತ ತಾಲ್ಲೂಕ ಪಂಚಾಯತ್ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿವಿಧ ಕ್ರೀಡಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕಾ ಕ್ರೀಡಾಂಗಣದಲ್ಲಿ ಏರಿ​‍್ಡಸಿದ್ದ ತಾಲ್ಲೂಕ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.  

 ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೆ ‘ಡಿ’ ದರ್ಜೆ ನೌಕರಿ ಸಿಗುತ್ತಿರಲಿಲ್ಲ, ಇದನ್ನರಿತ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಗೃಹಸಚಿವರಾಗಿದ್ದ ವೇಳೆ ಪೋಲಿಸ್ ಇಲಾಖೆಯಲ್ಲಿ ಶೇ.2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಿದ್ದರು, ಮುಖ್ಯಮಂತ್ರಿಗಳಾದ ಬಳಿಕ ಸದರಿ ಮೀಸಲಾತಿ ಪ್ರಮಾಣ   ವನ್ನು ಎಲ್ಲಾ ಸರ್ಕಾರಿ ಹುದ್ದೆಗಳಿಗೆ ವಿಸ್ತರಿಸಿರುವುದು ಸ್ವಾಗತಾರ್ಹ ಕ್ರಮವಾಗಿದ್ದು ಕ್ರೀಡಾಪಟುಗಳ ಪರವಾಗಿ ಅಭಿನಂದಿ ಸುತ್ತೇನೆ ಎಂದರು. 

ಕ್ರೀಡೆಗಳು ಉದ್ಯಮವಾಗುತ್ತಿವೆ:ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡೆ ಉದ್ಯಮವಾಗಿ ಹೊರಹೊಮ್ಮುತ್ತಿದೆ, ಬಹುತೇಕ ಉದ್ಯಮಿಗಳು ಕ್ರೀಡಾಪಟುಗಳ ಮೇಲೆ ಹಣ ಹೂಡಿಕೆಯನ್ನು ಮಾಡುತ್ತಿ ದ್ದಾರೆ ಇದರಿಂದ ಸಾವಿರಾರು ರೂ.ಸಂಭಾವನೆ ಪಡೆಯುತ್ತಿದ್ದ ಕ್ರೀಡಾಪಟುಗಳು ಕೋಟಿಗಟ್ಟಲೆ ಸಂಭಾವನೆ ಪಡೆಯು ತ್ತಿದ್ದಾರೆ, ಹೀಗಾಗಿ ಆರೋಗ್ಯದ ಜೊತೆಗೆ ಹಣವೂ ಸಹ ಕ್ರೀಡೆಗಳಿಂದ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು. 

ಗುರಿಯೊಂದಿಗೆ ಗ್ರೌಂಡ್‌ಗೆ ಇಳಿಯರಿ:ಪಿಎಸ್‌ಐ ಮಂಜುನಾಥ ಕುಪ್ಪೇಲೂರ ಮಾತನಾಡಿ, ಕ್ರೀಡಾಪಟುಗಳು ಒಂದು ಉತ್ತಮ ಗುರಿಯೊಂದಿಗೆ ಸಾಧನೆ ಮಾಡಬೇಕು, ಕೇವಲ ಅಲ್ಪತೃಪ್ತಿಗಾಗಿ ಕ್ರೀಡಾಂಗಣಕ್ಕೆ ಇಳಿಯುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಯುವಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟಿಗಟ್ಟಲ್ಲೇ ಹಣವ್ಯಯಿಸಿ ಕ್ರೀಡಾಂಗಣ ಗಳನ್ನು ನಿರ್ಮಿಸಿದ್ದು ಕ್ರೀಡಾಪಟುಗಳು ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ್ ಅಂಗಡಿ, ಟಿಈಓ ಎನ್‌.ತಿಮ್ಮಾರೆಡ್ಡಿ, ಅಂಬಿಗರ ಚೌಡಯ್ಯ ನಿಗಮದ ನಿರ್ದೇಶಕ ಜಿತೇಂದ್ರ ಸುಣಗಾರ, ನಿವೃತ್ತ ಪ್ರಾಚಾರ‌್ಯ ಎಸ್‌.ಎನ್‌.ಯಮನಕ್ಕನವರ, ದೈಹಿಕ ಶಿಕ್ಷಣ ಪರೀವೀಕ್ಷಕ ಹುಸೇನ್‌ಪೀರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕ್ರೀಡಾಧಿಕಾರಿ ಎಚ್‌.ಬಿ.ದಾಸರ ಸ್ವಾಗತಿಸಿದರು, ಎಂ.ಎಫ್‌.ಕರೆಣ್ಣನವರ (ಮಾಸಣಗಿ) ನಿರೂಪಿಸಿದರು, ಎಸ್‌.ಆರ್‌.ಬಡ್ಡಿಯವರ ವಂದಿಸಿದರು. 


ಸುದ್ದಿ ಓದಿ