ರಾಣೆಬೆನ್ನೂರ

ಅನ್ನಭಾಗ್ಯ ಅಕ್ಕಿ ಅನ್ಯರ ಪಾಲು- ಸ್ಥಳಕ್ಕೆ ಬಾರದ ಅಧಿಕಾರಿಗಳು: ಅಕ್ರಮದಲ್ಲಿ ಶಾಮೀಲು ಆರೋಪ

ಅನ್ನಭಾಗ್ಯ ಅಕ್ಕಿ ಅನ್ಯರ ಪಾಲು- ಸ್ಥಳಕ್ಕೆ ಬಾರದ ಅಧಿಕಾರಿಗಳು: ಅಕ್ರಮದಲ್ಲಿ ಶಾಮೀಲು ಆರೋಪ

ರಾಣೆಬೆನ್ನೂರು 27:  ಅನ್ನಭಾಗ್ಯ ಅಕ್ಕಿ ಹೊರರಾಜ್ಯಸಾಗಾಟಕ್ಕೆ ಸಂಗ್ರಹಿಸಿಡಲಾಗಿದ್ದ ಗೋದಾಮು ಪತ್ತೆಹಚ್ಚಿದ ಸಾಮಾಜಿಕ ಸೇವಾ ಕಾರ್ಯಕರ್ತರು ಸಂಬಂಧಿಸಿದ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರರಿಗೆ ಸಂಪರ್ಕಿಸಿದರು ಸಹ ಕಾನೂನು ಕ್ರಮಕ್ಕೆ ಮುಂದಾಗದೆ, ಉಡಾಫೆ ಉತ್ತರ ನೀಡುತ್ತಿರುವ ಜಿಲ್ಲಾಡಳಿತದ ಅಕ್ರಮ ನೀತಿಯನ್ನು ಖಂಡಿಸಿ ತಾಲೂಕಿನ ಹುಲ್ಲತ್ತಿ ಗ್ರಾಮದ ವಂದೇ ಮಾತರಂ ಸ್ವಯಂ ಸೇವಾಸಂಸ್ಥೆಯ ಕಾರ್ಯಕರ್ತರು, ಅಕ್ರಮ ಅಕ್ಕಿ ಸಂಗ್ರಹಿತ ಗೋಡಾನ ಎದುರುಗಡೆ ಶನಿವಾರ ಮುಂಜಾನೆ, ಪ್ರತಿಭಟಿಸಿದರು. ಇತ್ತೀಚಿಗಷ್ಟೇ ಮಾಗೋಡ ರಸ್ತೆ ಬಳಿ, ಅಕ್ರಮ ಸಾಗಾಟಕ್ಕೆ ಹೊರಟಿದ್ದ ವಾಹನವನ್ನು ತಡೆದು, ಮಾಹಿತಿ ನೀಡಿದ್ದೆವು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಶುಕ್ರವಾರ ಸಂಜೆ ಇದೇ ಆರೋಪಿಗೆ ಸಂಬಂಧಿಸಿದ ಸಾವಿರಾರು ಚೀಲಗಳಷ್ಟು ಅನ್ನಭಾಗ್ಯ ಅ ಕ್ಕಿಯನ್ನು ನೆಹರು  ಮಾರ್ಕೆಟ್ ಗೋದಾಮುಗಳಲ್ಲಿ ಸಂಗ್ರಹಿಸಿರುವ ಖಚಿತ ಮಾಹಿತಿ ಮೇರೆಗೆ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಮಾಹಿತಿ ಒದಗಿಸಲಾಗಿದ್ದರೂ ಸಹಿತ ಯಾರು ಸ್ಥಳಕ್ಕೆ ಬಾರದೇ ನಿರ್ಲಕ್ಷತನ ತೋರಿಸಿದ್ದಾರೆ. ಅಧಿಕಾರಿಗಳ ಈ ದೋರಣೆ ನೋಡಿದರೆ  ಇದರಲ್ಲಿ ಎಲ್ಲರೂ ಶಾಮೀಲಾಗಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು. ಆರೋಪಿಸಿದರು.ನೆಹರು ಮಾರುಕಟ್ಟೆಯಲ್ಲಿನ 4  ಗೋದಾಮುಗಳಲ್ಲಿ ಅಕ್ರಮ ಅಕ್ಕಿ ಸಂಗ್ರಹವಾಗಿದೆ, ಇದೆಲ್ಲವೂ ಜಿಲ್ಲಾಡಳಿತ, ತಾಲೂಕ ಆಡಳಿತ ಸುಪರ್ದಿಯಲ್ಲಿಯೇ ಸಾಗಿಸಲಾಗುತ್ತಿದೆ ಎನ್ನುವುದಕ್ಕೆ ಶುಕ್ರವಾರ ಸಂಜೆ ಮತ್ತು ಶನಿವಾರ ಮುಂಜಾನೆ ಅಧಿಕಾರಿಗಳು ಹಾಗೂ  ಆಡಳಿತ ನಡೆದುಕೊಂಡ ರೀತಿ ಸ್ಪಷ್ಟಪಡಿಸುತ್ತದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು. ಸಂಜೆಯಿಂದ ಶನಿವಾರ ಬೆಳಗಿನವರೆಗೂ ಗೋದಾಮು ಮುಂಭಾಗದಲ್ಲಿಯೇ ಅಧಿಕಾರಿಗಳ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾದಿದ್ದೇವೆ, ಕೊನೆಗೂ ತಳಕ್ಕೆ ಬಾರದ ಅಧಿಕಾರಿಗಳು, ಅಕ್ರಮ ಸಾಗಾಟಗಾರ ರೊಂದಿಗೆ  ನಾವಿದ್ದೇವೆ ಎನ್ನುವುದನ್ನು ಸಾಬೀತುಪಡಿಸಿ ದಂತಾಗಿದೆ ಎಂದು ಮುಖಂಡ ಜಗದೀಶ್ ಕೆರೋಡಿ ಅವರು ಬಲವಾಗಿ ಆರೋಪಿಸಿದ್ದಾರೆ. ಗೋದಾಮಿನಲ್ಲಿರುವ ಅಕ್ಕಿಯನ್ನು ನೋಡಿ ವಿಡಿಯೋ ಮಾಡಿ, ಛಾಯಾಚಿತ್ರ ದೊಂದಿಗೆ ತಹಸಿಲ್ದಾರ ಕಚೇರಿಗೆ ಹೋದರೆ ತಹಸಿಲ್ದಾರ್ ಅವರು , ಆಹಾರ ಇಲಾಖೆಯ ಯಾಸಿನ್  ಅಂಗಡಿ ಅವರಿಗೆ ಕಳುಹಿಸಿದರು. ಸ್ಥಳಕ್ಕೆ ಬಂದ ಅವರು ಯಾವುದೇ ಕಾನೂನು ಕ್ರಮ ಕೈಗೊಳ್ಳಲಿಲ್ಲ. ನಂತರ ಉಪವಿಭಾಗಾಧಿಕಾರಿಗಳಿಗೆ ಸಂಪರ್ಕಿಸಿದಾಗ, ತಹಸಿಲ್ದಾರರು, ಆಗಮಿಸಿದರು  ಫೋಟೋಶೂಟ್ ಮಾಡುವಾಗ  ಆಗಮಿಸಿ  ಫೊಟೊ ಸೊಟ್ ಮಾಡಿಕೊಳ್ಳುವಾಗ, ಈ ಗೋದಾಮಿನಲ್ಲಿ ಸಹ ಪಡಿತರ ಅಕ್ಕಿ ಇದೆ. ತಾವು ಪರೀಶೀಲಿಸಿರಿ ಎಂದರೂ ಸಹ, ಈಗ ದೂರು ಮಾತ್ರ ದಾಖಲಿಸಿ ಕೊಳ್ಳುತ್ತೇವೆ. ಮುಂದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ  ಪರೀಶೀಲಿಸಿ ಎಂದಾಗ ನಾವು ಇಗ ದೊರನ್ನ ಎಂದು ಹೋದವರು ದಾಖಲಿಸಿ ಮುಂದಿನ ಕಾನೊನು ಕ್ರಮ ಕೈಗೊಳ್ಳಲಾಗುವುದು ಎಂದು ಹೋದವರು ಯಾರು ಮರಳಿಲ್ಲ ಹೀಗಾದರೆ ಹೇಗೆ ಎಂದು ಕಿಡಿಕಾರಿದರು.    ಪೊಲೀಸರ ಸ ಹಕಾ ರದಿಂದ ನಾವೆಲ್ಲರೂ ಜೀವ ಕೈಯಲ್ಲಿಹಿಡಿದುಕೊಂಡು ಮಳೆಯನ್ನು ಲೆಕ್ಕಿಸದೆ, ಆಹೋರಾತ್ರಿ ಗೋದಾಮು ಕಾಯುವಂತಾಯಿತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಇಂದಿನ ಆಡಳಿತದ ವ್ಯವಸ್ಥೆ. ಯಾವ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದಾಗ, ವಿವಿದ ಸಂಘ ಸಂಸ್ಥೆಗಳ ಮುಖಂಡರು ಜಿಲ್ಲಾ ಮತ್ತು ತಾಲೂಕ ಆಡಳಿತದ ನಿರ್ಲಕ್ಷ ಧೋರಣೆ ಖಂಡಿಸಿ,ಒಕ್ಕೂರಲ ಪ್ರತಿಭಟಿಸಿದರು ಬೆಳಗ್ಗೆ ಸ್ಥಳಕ್ಕೆ ಬಂದ ಕೆಲವು ಅಧಿಕಾರಿಗಳು ಕುಂಟು ನೆಪ ಹೇಳುತ್ತಾ, ಹಾರಿಕೆಯ ಉತ್ತರ ನೀಡುತ್ತಾ ಸಾಗಿದ್ದರು ಅಕ್ರಮ ದಂಧೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಇಲ್ಲಿ ಅಕ್ರಮ ಧಂದೆ  ಮಾಡುವವರ ಕೈ ಮೇಲಾಗಿದೆ . ಎನ್ನುವುದಕ್ಕೆ ಇಂದಿನ ಈ ಸಾವಿರಾರು ಅಕ್ರಮ ಅಕ್ಕಿ ಚೀಲಗಳ ಸಾಗಾಟ  ಪ್ರಕರಣವೇ ಸಾಕ್ಷಿಯಾಗಿದೆ. ಸರಕಾರ ಇಂತಹ ಅಕ್ರಮ ಕಾರರಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. .ಪ್ರತಿಭಟನೆಯ ಮುಂಚೂಣಿಯಲ್ಲಿ ವಂದೇ ಮಾತರಂ ಯುವಕ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ಜಗದೀಶ್ ಕೆರೊಡಿ,ರಾಜು ಒಲೆಕಾರ,  ಕರೆವೇ ಜಿಲ್ಲಾದ್ಯಾಕ್ಷ ಗಣೆಶ ಗೋಣಿ ಬಸಮ್ಮನವರ ಹನುಮಂತಪ್ಪ ಕಬ್ಬಾರ,ವೀರೇಶ ಬಳ್ಳಾರಿ. ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು. 


ಸುದ್ದಿ ಓದಿ