ಪ್ರಾಚೀನ ಕನ್ನಡ ಸಾಹಿತ್ಯ ಆಧುನಿಕ ವಿದ್ವತ್ತು ಕುರಿತು ವಿಶೇಷ ಉಪನ್ಯಾಸ

ಪ್ರಾಚೀನ ಕನ್ನಡ ಸಾಹಿತ್ಯ ಆಧುನಿಕ ವಿದ್ವತ್ತು ಕುರಿತು ವಿಶೇಷ ಉಪನ್ಯಾಸ

ಲೋಕದರ್ಶನ ವರದಿ

ಬಳ್ಳಾರಿ 18:ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ನಾವು ಓದುತ್ತಿರುವ ಪಠ್ಯಗಳಿಂದ ಪಡೆದುಕೊಂಡಿರುವುದನ್ನು ಜ್ಞಾನ, ವಿದ್ವತ್ತು ಎಂದು ಕರೆಯುತ್ತಿದ್ದೇವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕೆ. ಕೇಶವಶರ್ಮ ಅವರು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗವು ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಆಧುನಿಕ ವಿದ್ವತ್ತು ವಿಶೇಷ ಉಪನ್ಯಾಸ ಮಾಲೆ-10ರಲ್ಲಿ ಮಾತನಾಡಿದರು.

ಜ್ಞಾನ ಹಾಗೂ ಪಾಂಡಿತ್ಯದ ಕುರಿತು ಕಳೆದ ಕೆಲವು ವರ್ಷಗಳಿಂದ ನಾವು ಚಚರ್ೆ ಮಾಡುತ್ತಿದ್ದೇವೆ. ಇದರ ಸ್ಪಷ್ಟತೆಯ ಕುರಿತು ನಮಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ. ಪಠ್ಯಕ್ರಮಗಳಿಂದ ಪಡೆದಿರುವುದು ಮಾತ್ರ ಜ್ಞಾನವಲ್ಲ. ಜ್ಞಾನವು ಚರಿತ್ರೆಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿ ಉತ್ಪಾದನೆಗೆ ಗುರಿಯಾಗುತ್ತದೆ. ಇಂದು ಜ್ಞಾನವು ಉತ್ಪಾದಿತ ಕ್ರಮವಾಗಿದೆ. ಸಮಾಜವೇ ತನಗೆ ಬೇಕಾದ ಮಾದರಿಗಳಲ್ಲಿ ಜ್ಞಾನಗಳನ್ನು ಉತ್ಪಾದಿಸುತ್ತಿದೆ. ನಾವು ಪಡೆಯುವುದೆಲ್ಲ ಜ್ಞಾನ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆಧುನಿಕ ಸಮಾಜಕ್ಕೆ ವಿಜ್ಞಾನದ ಹೆಸರಿನಲ್ಲಿ ಬರುತ್ತಿರುವುದನ್ನು ಜ್ಞಾನ ಎಂದು ಕರೆಯಲಾಗುತ್ತದೆ. ವಿಜ್ಞಾನ ಮಾತ್ರ ಜ್ಞಾನವೇ? ಎಂದು ಅವರು ಪ್ರಶ್ನಿಸುತ್ತ ವಸ್ತುನಿಷ್ಠ ಜ್ಞಾನದ ಪರಿಕಲ್ಪನೆಯು ಪುನರುಜ್ಜೀವನ ಕಾಲಘಟ್ಟದ ನಂತರ ಬಂದಿದೆ. ಇದನ್ನು ಹೊರತುಪಡಿಸಿದ್ದನ್ನು ಜ್ಞಾನ ಎನ್ನಲಿಲ್ಲ. ಪುನರುಜ್ಜೀವನದ ನಂತರ ಸಮಾಜಕ್ಕೆ ಉಪಯೋಗಕ್ಕೆ ಬಾರದ ಜ್ಞಾನ ಬೇಡ ಎಂಬ ಅಭಿಪ್ರಾಯ ಬಂದಿತು. ನಂತರ ಭಾವನೆಗಳಿಗೆ ಸಂಬಂಧಪಟ್ಟಿದ್ದನ್ನು ಅಜ್ಞಾನ ಎಂದು ಪ್ರಯೋಗಕ್ಕೆ ಸಂಬಂಧಪಟ್ಟಿದ್ದನ್ನು ಜ್ಞಾನ ಎಂದು ಕರೆಯಲಾಯಿತು. ವಿಜ್ಞಾನದಲ್ಲಿ ಪ್ರಮೇಯ ಪ್ರಯೋಗಕ್ಕೆ ತಕ್ಕಂತ ಫಲಿತಾಂಶ ಇರುತ್ತದೆ. ಇದನ್ನು ಸಾಹಿತ್ಯ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದಕ್ಕೆ ಯೂರೋಪಿನಲ್ಲಿ ಪರಿಹಾರವಾಗಿ ಸಾಹಿತ್ಯ ವಿಮಶರ್ೆಯನ್ನು ಸಾಹಿತ್ಯದ ಒಂದು ಸಿದ್ಧಾಂತದ ಒಳಗೆ ಅಳವಡಿಸುವ ಪ್ರಯತ್ನ ನಡೆಯಿತು. ಪ್ರಭುತ್ವದ ಅಧಿಕಾರವನ್ನು ಜ್ಞಾನ ಪ್ರಶ್ನಿಸಲು ಆರಂಭಿಸಿತು. ಅಧಿಕಾರ ಕೇಂದ್ರವನ್ನು ಪ್ರಶ್ನಿಸಲು ಹುಟ್ಟಿಕೊಂಡಿದ್ದ ಸಾಹಿತ್ಯ ವಿಮಶರ್ೆ ಮತ್ತು ಸಂಶೋಧನೆಗಳು ವಿಶಿಷ್ಟ ಪ್ರಕಾರವಾಗಿ ರೂಪಗೊಂಡವು ಎಂದು ಅವರು ತಿಳಿಸಿದರು.

ಬ್ರಿಟಿಷರ ಆದುನಿಕ ಶಿಕ್ಷಣದಿಂದ ಓದುವ ಗ್ರಹಿಸುವ ಕ್ರಮ ಬೇರೆಯಾಯಿತು. ವಸಾಹತುಶಾಹಿಯು ಆಧುನಿಕ ಶಿಕ್ಷಣದ ಮೂಲಕ ಗುಮಾಸ್ತರನ್ನು ಸೃಷ್ಟಿಸುವ ಕ್ರಮ ಆರಂಭಿಸಿತು. ಈ ಮೂಲಕ ಇಂಗ್ಲಿಷಿನ ಜ್ಞಾನ ಹೊಂದಿದ ನಮ್ಮ ಲೇಖಕರು ನಮ್ಮ ಕೃತಿಗಳೊಂದಿಗೆ ಅನುಸಂಧಾನ ಮಾಡುವ ಕ್ರಮವನ್ನು ರೂಪಿಸಿಕೊಂಡರು. ಇದು ಪಲ್ಲಟಗೊಳ್ಳುತ್ತಿರುವ ಬೌದ್ಧಿಕ ಚಹರೆಯಾಯಿತು. ಸಮಕಾಲೀನರಾದ ಡಾ. ಡಿ.ಎಲ್.ನರಸಿಂಹಾಚಾರ್ ಹಾಗೂ ಫ.ಗು. ಹಳಕಟ್ಟಿ ಇವರು ಬಹಳ ದೊಡ್ಡ ಬೌದ್ಧಿಕ ಜಗತ್ತನ್ನು ಪ್ರತಿನಿಧಿಸುತ್ತಾರೆ. ವಸಾಹತುಕಾಲದ ಅನೇಕ ಬುದ್ಧಿಜೀವಿಗಳು ಉದ್ದೇಶಪೂರ್ವಕವಾಗಿ ಹಳಗನ್ನಡ ಕಾವ್ಯಗಳನ್ನು ಓದುವ ಮತ್ತು ಪ್ರವೇಶಿಸುವುದಕ್ಕೆ ಬೇಕಾದ ಪರಿಕರಗಳನ್ನು ನಿಮರ್ಿಸುವ ಕೆಲಸ ಆರಂಭಿಸಿದರು. ಡಿ.ಎಲ್.ನರಸಿಂಹಾಚಾರ್, ಶಂಬಾಜೋಶಿ, ಮಂಜೆ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ ಇವರಿಗೆ ಬಹುಭಾಷೆಯ ಪಾಂಡಿತ್ಯವಿತ್ತು. ನಂತರ ಬೇಂದ್ರೆ, ಕುವೆಂಪು, ಸೇಡಿಯಾಪು ಅವರ ಮತ್ತೊಂದು ಪರಂಪರೆಯನ್ನು ಕಾಣಬಹುದು. ಆಧುನಿಕ ವಿಮಶರ್ೆ ಕೆಲವು ಸಂದರ್ಭದಲ್ಲಿ ಸಂಸ್ಕೃತವನ್ನು ಕನ್ನಡಕ್ಕೆ ಅನ್ವಯಿಸುವ ಕೆಲಸ ಮಾಡಿದೆ. ಕೀತರ್ಿನಾಥ ಕುರ್ತಕೋಟಿಯವರು ಕುಮಾರವ್ಯಾಸ ಮತ್ತು ಲಕ್ಷ್ಮೀಶನನ್ನು ಓದುವ ಕ್ರಮ ಬೇರೆಯಾಗಿದೆ. ಇವತ್ತು ನಾವು ಹಳಗನ್ನಡವನ್ನು ಹೇಗೆ ಓದಬೇಕು, ಗ್ರಹಿಸಬೇಕು ಎಂಬ ಸಮಸ್ಯೆಯಲ್ಲಿ ಬಂದು ನಿಂತಿದ್ದೇವೆ. ವಿದ್ಯಾಥರ್ಿಗಳ ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಆ ಮೂಲಕ ಪರೀಕ್ಷೆ ಪಾಸು, ಫೇಲು ನಡೆಯುತ್ತಿದೆ. ಜ್ಞಾನವನ್ನು ಇಂದು ನಾವು ಯಾರಿಗಾಗಿ ಉತ್ಪಾದಿಸುತ್ತಿದ್ದೇವೆ ಮತ್ತು ಹೇಗೆ ಉತ್ಪಾದಿಸುತ್ತಿದ್ದೇವೆ ಇದರ ಆಧಾರದ ಮೇಲೆ ಹಳಗನ್ನಡದ ಓದು ಸಾಧ್ಯವಾಗಬಹುದು ಎಂದು ಡಾ. ಶರ್ಮ ಅವರು ವಿಶೇಷ ಉಪನ್ಯಾಸವನ್ನು ಮುಗಿಸಿದರು.

ನಂತರ ನಡೆದ ಚಚರ್ೆಯಲ್ಲಿ ಪ್ರೊ.ಮನ್ವಾಚಾರ್, ಪ್ರೊ. ಗೋವಿಂದರಾಜು, ಪ್ರೊ.ಚಿನ್ನಸ್ವಾಮಿ ಸೋಸಲೆ, ಪ್ರೊ.ಕೆ.ರವಿಂದ್ರನಾಥ, ಪ್ರೊ.ಟಿ.ಪಿ.ವಿಜಯ್, ಪ್ರೊ.ವಿಠ್ಠಲರಾವ್ ಟಿ. ಗಾಯಕ್ವಾಡ್ ಹಾಗೂ ಸಂಶೋಧನಾ ವಿದ್ಯಾಥರ್ಿಗಳಾದ ಹನುಮಪ್ಪ, ವಿಶ್ವನಾಥ ಪತ್ತಾರ, ಸತೀಶ್, ಸಾವಿತ್ರಿ ಭಾಗವಹಿಸಿದರು.

ಮಾನ್ಯ ಕುಲಪತಿಯವರ ಅನುಪಸ್ಥಿತಿಯಲ್ಲಿ ವಿಶೇಷ ಉಪನ್ಯಾಸದ ಅಧ್ಯಕ್ಷತೆ ವಹಿಸಿದ್ದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಮಾತನಾಡುತ್ತ ಒಂದು ನಿದರ್ಿಷ್ಟ ಓದಿನ ಮಾದರಿಗಳು ನಮ್ಮ ಮುಂದೆ ಹರಿಯುವ ಮೂಲಕ ಒಂದು ಪಠ್ಯದೊಳಗಿನ ಬಹುಮುಖಿ ಅನುಸಂಧಾನದ ಸಾಧ್ಯತೆಗಳನ್ನು ಮುಚ್ಚಿಡಲಾಗಿದೆ. ಸಾಂಸ್ಥೀಕರಣ ರೂಪದಲ್ಲಿ ಅಂದರೆ ವ್ಯಕ್ತಿ, ಧರ್ಮ, ಜಾತಿ, ಪಠ್ಯಕ್ರಮ ಕೇಂದ್ರಿತವಾಗಿರಬಹುದು, ಇವೆಲ್ಲವೂ ನಮ್ಮ ಓದಿನ ಬಹುಸಾಧ್ಯತೆಗಳನ್ನು ನಿರಾಕರಿಸುತ್ತಿವೆ. ಹಳಗನ್ನಡ ಓದುವ ಅಥವಾ ಹಸ್ತಪ್ರತಿಗಳನ್ನು ಗ್ರಂಥಸಂಪಾದನೆಗಳನ್ನು ಬೇರೆ ಬಗೆಯಲ್ಲಿ ಅನುಸಂಧಾನ ಮಾಡಬೇಕಾದ ಸವಾಲುಗಳು ನಮ್ಮ ಮುಂದಿವೆ. ಕೇಂದ್ರಿಕೃತ ಅಧ್ಯಯನ ಮಾದರಿಗಳು ಎಂದು ಕರೆಯುವ ಸಮಗ್ರ ಸಾಹಿತ್ಯ ಸಂಪುಟಗಳಾದ ಜೈನ ಸಮಗ್ರ ಸಾಹಿತ್ಯ, ವಚನ ಸಮಗ್ರ ಸಾಹಿತ್ಯಗಳಂತಹ ಮಾದರಿಗಳು ಒಂದೊಂದು ಕೇಂದ್ರಕ್ಕೆ ಲಗತ್ತಾಗುವ ಅಪಾಯದಲ್ಲಿ ನಾವಿದ್ದೇವೆ. ಇಡೀ ಕನ್ನಡ ಸಾಹಿತ್ಯ ಜಾತ್ಯಾತೀತ ನಿಲುವಿನಿಂದ ಚಚರ್ೆ ಆಗುತ್ತಿಲ್ಲ ಎಂದು ಹೇಳಿದರು.

ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರಾದ ಡಾ.ಎಫ್.ಟಿ.ಹಳ್ಳಿಕೇರಿ ಅವರು ಸ್ವಾಗತಿಸಿ, ಪರಿಚಯಿಸಿ, ವಿಭಾಗದ ಕಾರ್ಯಸ್ವರೂಪವನ್ನು ಪ್ರಾಸ್ತಾವಿಕದಲ್ಲಿ ತಿಳಿಸಿದರು. ಪ್ರಾಧ್ಯಾಪಕರಾದ ಡಾ.ಕೆ.ರವಿಂದ್ರನಾಥ ವಂದಿಸಿದರು. ವಿದ್ಯಾಥರ್ಿ ಪ್ರವೀಣ ನಿರೂಪಿಸಿದರು. ಸಂಗೀತ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾಥರ್ಿಗಳು ಪ್ರಾಥರ್ಿಸಿದರು.

ಸುದ್ದಿ ಓದಿ