ವಿದ್ಯುತ್ ಅವಘಡ ಸಂಭವಿಸಿ ಅಪಾರ ಪ್ರಮಾಣದ ಹಾನಿ
ಶಿಗ್ಗಾವಿ 02: ತಾಲೂಕಿನ ಮುನವಳ್ಳಿ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಅಪಾರ ಪ್ರಮಾಣದ ಹಾನಿ ಸಂಭವಿಸಿರುವ ಘಟನೆ ಶನಿವಾರ ಜರೂಗಿದೆ.
ವಿದ್ಯುತ್ ಅವಘಡಕ್ಕೆ ಒಳಗಾಗಿ ಹಾನಿಗೋಳಗಾದ ಮನೆಯ ಮಾಲೀಕನನ್ನು ಶಿದ್ದಪ್ಪ ಮುರಿಗೇಪ್ಪ ಕಿವುಡನವರ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪಿ.ಎಸ್.ಐ. ಸಂತೋಷ ಪಾಟೀಲ, ಗ್ರಾಮಲೆಕ್ಕಾಧಿಕಾರಿ ಕೆ.ಎ.ಕಿಲ್ಲೆದಾರ, ಗ್ರಾ.ಪಂ.ಸದಸ್ಯ ಗದಿಗಯ್ಯ ಹಿರೇಮಠ, ಬಿ.ಜೆ.ಪಿ.ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಯುವ ಮೋರ್ಚಾ ತಾಲೂಕ ಅಧ್ಯಕ್ಷ ಶಿವರಾಜ ರಾಯಣ್ಣವರ, ಜಿ.ಪ.ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ ಸೇರಿದಂತೆ ಇತರರು ಬೇಟಿ ನೀಡಿ ಪರೀಶೀಲನೆ ನಡೆಸಿದರು. ಪಾತ್ರೆ, ಬಟ್ಟೆ, ದಿನಸಿಸಾಮಗ್ರಿಗಳು, ಟಿವ್ಹಿ, ಅಲ್ಪ, ಸ್ವಲ್ಪ ಬಂಗಾರ ಸೇರಿದಂತೆ ಇತರೆ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಎರಡು ಲಕ್ಷಕ್ಕೀಂತಲೂ ಅಧಿಕ ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.